ಉತ್ತರ ಪ್ರದೇಶ: ಕುಡುಕ ಪತಿಯಂದಿರ ಕಾಟಕ್ಕೆ ಬೇಸತ್ತು ಮನೆಯಿಂದ ಹೊರಬಂದ ಇಬ್ಬರು ಮಹಿಳೆಯರು ಪರಸ್ಪರ ಪ್ರೀತಿಸಿ ಮದುವೆಯಾಗಿ (Love marriage) ಹೊಸ ಜೀವನ ಆರಂಭ ಮಾಡಿರುವ ವಿಲಕ್ಷಣವಾದ ಘಟನೆ ಗೋರಖ್ ಪುರದಲ್ಲಿ ಘಟನೆ ನಡೆದಿದೆ.
ಮದ್ಯ ಸೇವಿಸಿ ಕುಡುಕ ಪತಿಯಂದಿರು ಪ್ರತಿನಿತ್ಯ ಮನೆಗೆ ಬಂದು ಕಿರುಕುಳ ಕೊಡುತ್ತಿದ್ದರಂತೆ, ಇದರಿಂದ ಬೇಸತ್ತ ಪತ್ನಿಯರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ.
ಕವಿತಾ ಹಾಗೂ ಗುಂಜಾ ಮದುವೆಯಾಗಿದ್ದು, ಡಿಯೋರಿಯಾದ ಶಿವ ದೇಗುಲದಲ್ಲಿ ಸಪ್ತಪದಿ ತುಳಿದಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಈ ಇಬ್ಬರು ಪರಿಚಯವಾಗಿದ್ದರು. ಇಬ್ಬರ ಪತಿಯಂದಿರು ಒಂದೇ ರೀತಿಯಲ್ಲಿ ಕಿರುಕುಳ ಕೊಡುತ್ತಿದ್ದರಂತೆ. 6 ವರ್ಷಗಳಿಂದ ಸ್ನೆಹವಿದ್ದು, ಒಬ್ಬರ ನ್ನೊಬ್ಬರು ಸಮಾಧಾನ ಹೇಳಿಕೊಂಡು ಮದುವೆಯಾಗಲು ನಿರ್ಧರಿಸಿದ್ದಾರಂತೆ.
देवरिया: शराबी पतियों से तंग आकर दो महिलाओं ने आपस में कर ली शादी
— News24 (@news24tvchannel) January 24, 2025
◆ दो महिलाएं अपने-अपने शराबी पतियों से परेशान हो गईं
◆ गुंजा और कविता की मुलाकात सोशल मीडिया पर हुई#Deoria #ViralStory | 2 Women Marries to Each Other pic.twitter.com/ViGissHr89
ಗೋರಖ್ ಪುರದಲ್ಲಿ ಬಾಡಿಗೆ ಮನೆ ಮಾಡಲು ಇಬ್ಬರು ನಿರ್ಧರಿಸಿದ್ದಾರೆ ಗುಂಜಾ ಎಂಬ ಮಹಿಳೆ ಕವಿತಾರಿಗೆ ಸಿಂಧೂರವಿಟ್ಟಿದ್ದು, ಗಂಡನ ಪಾತ್ರ ಜವಬ್ದಾರಿ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ.