ಕೋಲಾರ (Video): ಬಲೇರಿ ಬಲೇರಿ ಎಂದು ತಲೆ ಮೇಲೆ ತೆಂಗಿನಕಾಯಿ ಒಡೆಯುವ ಪವಾಡ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿಯಲ್ಲಿ ನಡೆದಿದೆ.
ತಲೆ ಮೇಲೆ ತೆಂಗಿನಕಾಯಿ ಒಡೆದ್ರು ಏನೂ ಆಗಲ್ಲ, ತೆಂಗಿನಕಾಯಿ ಮಾತ್ರ ಚುರ್ ಚುರ್ ಆಗುತ್ತದೆ.
ಬಸವನ ಎದರು ಮೈ ಮರೆತು ತೆಂಗಿನಕಾಯಿ ಒಡೆಸಿಕೊಳ್ಳುವ ಪವಾಡದಲ್ಲಿ ಭಕ್ತರು ಭಾಗವಹಿಸಿದ್ದರು.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮದಲ್ಲಿ ಆಚರಣೆ ನಡೆಯುತ್ತದೆ.
ಕುರುಬರ ದೇವರ ಉತ್ಸವ ಹಿನ್ನೆಲೆ ಗ್ರಾಮಕ್ಕೆ ಬಂದಿದ್ದ ಬಸವ. ಜೊತೆಗೆ ಬಂಡಾರ ಪೂಜೆ ನೆರವೇರಿಸಿ ಪವಾಡ ಮಾಡಿದ ಗುರುಗಳು.
10 ತೆಂಗಿನಕಾಯಿ ತಲೆ ಮೇಲೆ ಒಡೆದ್ರು ತಲೆಗೆ ಮಾತ್ರ ಪೆಟ್ಟಾಗಲ್ಲ. ತೆಂಗಿನಕಾಯಿ ಮಾತ್ರ ಎರಡು ಚುರಾಗಿ ಬೀಳುವ ರೋಮಾಂಚಕಾರಿ ದೃಶ್ಯಗಳನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
ತ್ಯಾರನಹಳ್ಳಿಯ ಶ್ರೀ ಬಿರೇಶ್ವರ, ಸಿದ್ದೇಶ್ವರ ದೇವಾಲಯದ ದ್ಯಾವರ ಉತ್ಸವದ ಹಿನ್ನೆಲೆ, ಬಂಡಾರ ಪೂಜೆ ಹಾಗೂ ಬಸವನ ಪೂಜೆ ಹಿನ್ನೆಲೆ ಹಮ್ಮಿಕೊಂಡಿದ್ದ ತೆಂಗಿನಕಾಯಿ ಪವಾಡ ಕಾರ್ಯ.