ಬಾಗಲಕೋಟೆ (Video): ಫೈನಾನ್ಸ್ ಕಿರುಕುಳದಿಂದ ಪಾರಾಗಲು ವ್ಯಕ್ತಿಯೋರ್ವ ಬುರ್ಖಾ ಹಾಕಿಕೊಂಡು ಏಟು ತಿಂದಿರುವ ಘಟನೆ ಬಾಗಲಕೋಟೆ ನಗರದ ನವನಗರದ ಸೆಕ್ಟರ್ ನಂ 47ರಲ್ಲಿ ನಡೆದಿದೆ.
ಬುರ್ಖಾ ಹಾಕಿಕೊಂಡಿದ್ದ ವ್ಯಕ್ತಿಯನ್ನು ಅಹಮದ್ ಜನಮಸಾಗರ್ ಎಂದು ಗುರುತಿಸಲಾಗಿದೆ.
ಅಹಮದ್ ಜನಮಸಾಗರ್ ಇಸ್ಪೀಟ್ ಆಡುವುದಕ್ಕೆ ಕೈ ಸಾಲ ಮಾಡಿಕೊಂಡಿದ್ದು, ತನ್ನ ಗುರುತು ಯಾರಿಗೂ ಸಿಗಬಾರದೆಂದು ಬುರ್ಖಾ ಧರಿಸಿ ತಿರುಗಾಡುತ್ತಿದ್ದನಂತೆ.
ಸಾಲ ವಸೂಲಿಗೆ ಬಂದಾಗ ಅವರಿಂದ ತಪ್ಪಿಸಿಕೊಳ್ಳಲು ಅಹಮದ್ ಪತ್ನಿಯ ಬುರ್ಖಾ ಧರಿಸುತ್ತಿದ್ದನು. ಆದರೆ ಆತನ ಚಲನವಲನ ಬಗ್ಗೆ ಸಂಶಯ ಬಂದು ಚೆಕ್ ಮಾಡಿದಾಗ ಬಣ್ಣ ಬಯಲಾಗಿದೆ.
ಅವರು ಸಾಲ ವಸೂಲಿಗೆ ಬಂದವರಿಗೆ ಚಾಕು ತೋರಿಸಿದ್ದರು ಎಂಬ ಆರೋಪ ಕೂಡ ಅಹಮದ್ ವಿರುದ್ಧ ಕೇಳಿಬಂದಿದೆ.
ಈ ಹಿನ್ನೆಲೆ ಅಹಮದ್ ಜನಮಸಾಗರ್‌ನ ಥಳಿಸಲಾಗಿದೆ. ಅಲ್ಲದೆ ನವನಗರ ಠಾಣೆಯಲ್ಲಿ ದೂರು ನೀಡಲಾಗಿದೆ.