Daily story: When the opportunity

Daily story ಹರಿತಲೇಖನಿ ದಿನಕ್ಕೊಂದು ಕಥೆ: ಅವಕಾಶ ಸಿಕ್ಕಾಗ

Daily story; ಇದೊಂದು ನೈಜ ಘಟನೆ
ಉತ್ತರ ಭಾರತದ ಒಂದು ಗ್ರಾಮದಲ್ಲಿ ಒಬ್ಬ ವೈದ್ಯರಿದ್ದರು. ಅವರು ಬಡತನದಲ್ಲಿ ಕಷ್ಟಪಟ್ಟು ಓದಿ ವೈದ್ಯರಾಗಿದ್ದರು. ವೈದ್ಯರಾದ ಮೇಲೆ ಬಡಬಗ್ಗರಿಗೆ ತುಂಬಾ ಸಹಾಯ ಮಾಡುತ್ತಿದ್ದರು. ಬಡಜನರ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.

ಸುತ್ತಮುತ್ತ ಊರಿನಲ್ಲೆಲ್ಲಾ ಅವರಿಗೆ ಒಳ್ಳೆಯ ಹೆಸರಿತ್ತು. ಅವರ ಹತ್ತಿರ ಒಂದು ಮೊಬೈಲ್ ಇತ್ತು. ಆ ಮೊಬೈಲ್ನಲ್ಲಿ ಇದ್ದ ನಂಬರನ್ನು ಒಂದು ಪೇಪರ್ ನಲ್ಲಿ ಬರೆದು ಮರದ ಮೇಲೆ, ಹಳೆಯ ಕಾಂಪೌಂಡುಗಳ ಮೇಲೆ, ಕಟ್ಟಡಗಳಲ್ಲಿ, ಬಸ್ಟಾಂಡ್ ಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲಿ ಅಂಟಿಸಿದ್ದರು.

ಯಾಕೆಂದರೆ ಯಾರಿಗಾದರೂ ಹುಷಾರಿಲ್ಲದಿದ್ದರೆ ಅಂದರೆ ಸಣ್ಣಪುಟ್ಟ ಜ್ವರ ಕೆಮ್ಮು ನೆಗಡಿಗಲ್ಲ, ತುರ್ತುಚಿಕಿತ್ಸೆಯ ಅಗತ್ಯವಿದ್ದ ಯಾರಾದರೂ ಸರಿಯೇ ಇಲ್ಲಿ ಬರೆದಿರುವ ನಂಬರಿಗೆ ಫೋನ್ ಮಾಡಿದರೆ ಸ್ವಲ್ಪವೂ ತಡಮಾಡದೆ ಬಿಟ್ಟ ಕೆಲಸ ಬಿಟ್ಟು, ಅದು ಎಷ್ಟೇ ದೂರ ಇರಲಿ, ಯಾವ ಮೂಲೆಯಲ್ಲೇ ಇರಲಿ, ಅಲ್ಲಿಗೆ ಹೋಗಿ ಅವರಿಗೆ ಚಿಕಿತ್ಸೆಯನ್ನು ಕೊಡುವುದು ಅವರ ಕಾರ್ಯವಾಗಿತ್ತು.

ಸಾಧಾರಣವಾಗಿ ಇದರ ಅವಶ್ಯಕತೆ ಬಡಬಗ್ಗರಿಗೆ ಮಾತ್ರ ಇರುತ್ತದೆ. ಇವರಾದರೋ, ಅವರಿಗೆ ಇಂತಿಷ್ಟೇ ಹಣ ಕೊಡಿ ಎಂದು ಯಾವತ್ತೂ ಕೇಳುತ್ತಿರಲಿಲ್ಲ ಅವರ ಯೋಗ್ಯತಾನುಸಾರ ಕೊಟ್ಟರೆ ತೆಗೆದುಕೊಳ್ಳುತ್ತಿದ್ದರು. ಇಲ್ಲದಿದ್ದರೆ ಇಲ್ಲ ಬಡವರಿಗೆ ಕೈಯಿಂದ ಹಣವನ್ನು ಇವರೇ ಕೊಟ್ಟು ಬರುತ್ತಿದ್ದರು. ಈ ಎಲ್ಲಾ ಗುಣಗಳಿಂದ ಈ ವೈದ್ಯರು ಎಲ್ಲರ ಪಾಲಿಗೂ ದೇವರಾಗಿದ್ದರು.

ಒಂದು ದಿನ ಒಂದು ಹಳ್ಳಿಯ ಒಬ್ಬ ರೋಗಿಗೆ ಚಿಕಿತ್ಸೆ ಕೊಡಲು ಹೋಗಿದ್ದರು. ತುರ್ತು ಮೊಬೈಲಿಗೆ ಒಂದು ಕರೆ ಬಂದಿತು. ಆ ಕಡೆಯಿಂದ ಒಬ್ಬ ತಾಯಿ ಬಿಕ್ಕಳಿಸಿ ಅಳುತ್ತಿರುವ ಧ್ವನಿ ಕೇಳಿತು.

ಡಾಕ್ಟ್ರೆ ಬೇಗ ಬನ್ನಿ ನನ್ನ ಒಂದು ವರ್ಷದ ಮಗು ಉಸಿರಾಡುತ್ತಿಲ್ಲ ಎಂದು ಅಳುತ್ತಿದ್ದುದು ಕೇಳಿತು. ಆಕೆಯ ಹತ್ತಿರ ವಿಳಾಸವನ್ನು ಕೇಳಿ ಒಂದು ಚೀಟಿಯಲ್ಲಿ ಬರೆದುಕೊಂಡರು.

ಈಗ ಬರುತ್ತೇನೆ ಎಂದು ಫೋನಿಟ್ಟು, ನಂತರ ಅಲ್ಲೇ ಹತ್ತಿರದಲ್ಲಿದ್ದ ದೊಡ್ಡವರ ಹತ್ತಿರ ಈ ವಿಳಾಸ ಎಲ್ಲಿ ಬರುತ್ತದೆ ಎಂದು ಕೇಳಿದಾಗ, ಅಲ್ಲಿದ್ದವರು ಸ್ವಾಮಿ ಇಲ್ಲಿಂದ ಮುಖ್ಯರಸ್ತೆಗೆ ಹೋದರೆ ಅಲ್ಲಿ ಸ್ವಲ್ಪ ಇಳಿದು ಮುಂದೆ ಹೋದರೆ ಈ ಜಾಗ ಸಿಗುತ್ತೆ ಆದರೆ ತುಂಬಾ ದೂರ. ಇನ್ನೊಂದು ಕಚ್ಚಾ ರಸ್ತೆ ಇದೆ ಅಷ್ಟು ಚೆನ್ನಾಗಿಲ್ಲ ಅಲ್ಲಿಂದ ಹೋದರೆ ಸಣ್ಣ ಗುಡ್ಡ ಇಳಿಯುತ್ತಿದ್ದಂತೆ ಮನೆ ಕಾಣುತ್ತದೆ ಎಂದರು.

ವೈದ್ಯರು ತಡಮಾಡದೆ ರಸ್ತೆ ಚೆನ್ನಾಗಿಲ್ಲದಿದ್ದರೆ ಇಲ್ಲ ಬೇಗ ಹೋಗುವುದು ಮುಖ್ಯ ಎಂದುಕೊಂಡು ಕಾರನ್ನು ಕಚ್ಚಾ ರಸ್ತೆ ಮೇಲೆ ಹತ್ತಿಸಿದರು. ಇನ್ನೇನು ಮುಖ್ಯರಸ್ತೆಗೆ ಎಡ ತಾಕಬೇಕು ಅನ್ನುವಾಗ ನೋಡಿದರೆ ಕಚ್ಚಾ ರಸ್ತೆಗೂ ಮುಖ್ಯರಸ್ತೆಗೂ ನಡುವೆ ಉದ್ದಕ್ಕೂ ಒಂದು ಆಳೆತ್ತರದ ಗುಂಡಿ ತೋಡಿದ್ದಾರೆ.

ಏನು ಮಾಡಲು ತೋಚದೆ ಸುತ್ತಲೂ ನೋಡಿದರೆ ಯಾರೂ ಕಾಣಲಿಲ್ಲ. ಹೊತ್ತು ಬೇರೆ ಆಗಿದೆ. ಹೇಗೆ ಹೋಗುವುದು ಎಂದು ಯೋಚಿಸುತ್ತಿದ್ದಾಗ ದೂರದ ಹೊಲದಲ್ಲಿ ಜೆಸಿಬಿ ಯಂತ್ರವನ್ನು ಓಡಿಸುತ್ತಿದ್ದ ಯುವಕನೊಬ್ಬ ಕಂಡನು.

ತಕ್ಷಣ ಸರಸರ ನಡೆದು ಅಲ್ಲಿಗೆ ಹೋಗಿ ಜೆಸಿಬಿ ಚಾಲಕನ ಹತ್ತಿರ ಏ ಹುಡುಗ ಸ್ವಲ್ಪ ಬಾರಪ್ಪ ಅಲ್ಲಿ ರಸ್ತೆಗೂ ಕಚ್ಚಾರಸ್ತೆ ನಡುವೆ ಮಣ್ಣು ತೋಡಿದ್ದಾರೆ. ಕಾರು ಹೋಗುವಷ್ಟು ಜಾಗವನ್ನು ಮುಚ್ಚಿ ಕೊಡು ಎಂದರು.
ಆದರೆ ಆತ ಇಲ್ಲ ಸಾರ್ ನನಗೆ ಬೇಕಾದಷ್ಟು ಕೆಲಸವಿದೆ ಅಲ್ಲಿಗೆ ಬಂದು ಅಷ್ಟೊಂದು ಮಣ್ಣು ಮುಚ್ಚಲು ನನ್ನಿಂದ ಆಗಲ್ಲ ಎಂದ. ದಾರಿ ಕಾಣದೆ ಮತ್ತೆ ಚಾಲಕನ ಹತ್ತಿರ ನೋಡಪ್ಪ ಒಂದು ಮಗುವಿನ ಜೀವ ಏನಾದರೂ ಮಾಡಿ ಸಹಾಯ ಮಾಡಪ್ಪ ಎಂದು ಕೋರಿದರು.

ಆಮೇಲೆ ಆ ಹುಡುಗ ಏನೋ ಸಾರ್ ನಿಮ್ಮದೊಂದು ರಗಳೆ ಎಂದುಕೊಂಡು ಅವರ ಜೊತೆಗೆ ಬಂದು ಆ ಕಂದಕಕ್ಕೆ ಜೆಸಿಪಿ ಯಿಂದ ಮಣ್ಣು ತುಂಬಿ ಕಾರು ಹೋಗುವಷ್ಟು ಜಾಗ ಗಟ್ಟಿ ಮಾಡಿಕೊಟ್ಟ.

ತರಾತುರಿಯಲ್ಲಿ ಆ ಹುಡುಗನಿಗೆ ಏನೂ ಹೇಳದೆ ಕಾರು ಹತ್ತಿ ಅಂತೂ ಆ ಮನೆಗೆ ಬಂದರು. ಮನೆಯೊಳಗೆ ನಾಲ್ಕಾರು ಜನ ಹೆಂಗಸರು ಮಕ್ಕಳು ಸೇರಿ ಅಳುತ್ತಿದ್ದಾರೆ. ತಾಯಿಯ ರೋದನವಂತೂ ನೋಡಲಾಗುತ್ತಿಲ್ಲ.

ಮಗು ಒಂದು ಕಡೆ ಮಲಗಿದೆ ಮೈಯೆಲ್ಲಾ ನೀಲಿಗಟ್ಟಿದೆ. ತಕ್ಷಣ ವೈದ್ಯರು ಮಗುವಿನ ಹತ್ತಿರ ಹೋಗಿ ಪರೀಕ್ಷಿಸಿ ಮಗುವನ್ನು ತಲೆಕೆಳಕಾಗಿ ಎತ್ತಿ ಅಲ್ಲಾಡಿಸಿದರು ಮಗುವಿನ ಬಾಯಿಂದ ಒಂದು ಅಂಗಿಯ ಗುಂಡಿ ಹೊರಗೆ ಬಿದ್ದಿತು ಮಗುವಿಗೆ ಪ್ರಥಮ ಚಿಕಿತ್ಸೆ ಮಾಡಿದರು ಮಗು ಉಸಿರಾಡಿತು.

ಅಲ್ಲಿದ್ದವರ ಮುಖದಲ್ಲಿ ನಗು ಅರಳಿತು. ಮಗುವಿನ ತಾಯಿ ವೈದ್ಯರ ಕಾಲನ್ನು ಕಣ್ಣೀರಿನಿಂದಲೇ ತೊಳೆದಳು. ಅಂತೂ ಸಮಾಧಾನವಾಯಿತು. ಒಂದಷ್ಟು ಔಷಧಿ ಮಾತ್ರೆಗಳನ್ನು ಕೊಟ್ಟು ಮಗುವನ್ನು ನೋಡಿಕೊಳ್ಳುವಂತೆ ಹೇಳಿ ಬಂದರು.

ತುಂಬಾ ಸಮಯವಾಗಿತ್ತು ಸೀದಾ ಮನೆಗೆ ಹೋದರು. ಒಂದೆರಡು ದಿನಗಳ ನಂತರ ವೈದ್ಯರು ಆ ಮಾರ್ಗದಲ್ಲೇ ಒಂದು ಹಳ್ಳಿಗೆ ಹೋಗಬೇಕಾಗಿತ್ತು. ಹಾಗೆ ಬರುತ್ತಿದ್ದಾಗ ಜೇಸಿಬಿ ಚಾಲಕ ಕಣ್ಣಿಗೆ ಬಿದ್ದ.

ಪಾಪ ಆವತ್ತು ನಾನು ಧನ್ಯವಾದವನ್ನು ಹೇಳದೆ ಹೊರಟೆ ಈ ದಿನ ಹೇಳಬೇಕು ಎಂದು ಕಾರಿನಿಂದ ಇಳಿದು, ಆತ ಇದ್ದಲ್ಲಿಗೆ ನಡೆದು ಹೊರಟರು. ಇವರು ಬರುತ್ತಿರುವುದನ್ನು ದೂರದಿಂದಲೇ ನೋಡಿದ ಹುಡುಗ ಓಡೋಡಿ ಬಂದ, ಡಾಕ್ಟರು ಮನಸ್ಸಿನಲ್ಲಿ ಏ ಹುಡುಗ ನಿನ್ನಿಂದ ಆ ದಿನ ತುಂಬಾ ಉಪಕಾರವಾಯಿತು.

ನಿನ್ನಿಂದಾಗಿ ಒಂದು ಮಗುವಿನ ಜೀವ ಉಳಿಯಿತು ಎಂದು ಹೇಳಿ ಸ್ವಲ್ಪ ಹಣ ಕೊಡಬೇಕೆಂದು ಅಂದುಕೊಂಡರು ಅಷ್ಟರೊಳಗೆ ಆ ಹುಡುಗ ಬಂದು ವೈದ್ಯರ ಕಾಲು ಹಿಡಿದು ಸಾರ್ ನೀವು ದೇವರ ಹಾಗೆ ಬಂದು ನನ್ನ ಮಗುವಿನ ಪ್ರಾಣ ಉಳಿಸಿದ್ದೀರಿ ಎಂದನು.

ಅದನ್ನು ಕೇಳಿ ವೈದ್ಯರು ಇಲ್ಲಪ್ಪ ನಾನು ಬೇರೆ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದು ಎಂದರು. ಅದಕ್ಕಾತ ಇಲ್ಲ ಸಾರ್ ನಿಮಗೆ ಆ ದಿನ ಫೋನ್ ಮಾಡಿದ್ದು ನನ್ನ ಹೆಂಡತಿ. ಗುಂಡಿ ನುಂಗಿದ್ದು ನನ್ನ ಮಗು ನೀವು ಬರದಿದ್ದರೆ ಆ ದಿನ ನನ್ನ ವಂಶದ ಕುಡಿ ಹೋಗಿ ಬಿಡುತ್ತಿತ್ತು. ದೇವರ ಹಾಗೆ ಬಂದು ಪ್ರಾಣ ಉಳಿಸಿದಿರಿ ನಿಮ್ಮ ಉಪಕಾರ ಈ ಜನ್ಮದಲ್ಲಿ ಮರೆಯುವುದಿಲ್ಲ ಎಂದನು.

ಯಾರಿಗೋ ಸಹಾಯ ಮಾಡುವುದರಿಂದ ಪ್ರಯೋಜನವೇನು ಎನ್ನುವುದಕ್ಕಿಂತ ಇನ್ನಾರಿಗೋ ಸಹಾಯ ಮಾಡುವುದರಿಂದ ನಮಗೆ ನಾವು ಸಹಾಯ ಮಾಡಿಕೊಂಡಂತಾಗುತ್ತದೆ. ಅಲ್ಲವೇ ನೀವೇನಂತೀರಿ

ಕೃಪೆ: ಡಾ.ಗುರುರಾಜ ಕರ್ಜಗಿ.. ( ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!