ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ( Maha Kumbhamela)ಪ್ರಧಾನಿ ನರೇಂದ್ರ ಮೋದಿ (Narendra modhi) ಬುಧವಾರ ಪಾಲ್ಗೊಂಡಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi adityanath) ಅವರೊಂದಿಗೆ ದೋಣಿಯಲ್ಲಿ ತ್ರಿವೇಣಿ ಸಂಗಮಕ್ಕೆ ತೆರಳಿದ ಮೋದಿ ಅವರು ಸ್ನಾನಘಟ್ಟದಲ್ಲಿ ತಮ್ಮ ಅನುಷ್ಠಾನಗಳನ್ನು ನೆರವೇರಿಸಿದ್ದಾರೆ.
ಬಳಿಕ ನದಿಯಲ್ಲಿಯೇ ನಿಂತು ಜಪ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಳಿಕ ಸ್ನಾನದ ಜೊತೆಗೆ ಮಾಧ್ಯಮಗಳಿಗೆ ಫೋಟೋಗಳಿಗೂ ಫೋಸು ಕೊಟ್ಟರು.
ಇಂದು ಸ್ನಾನದ ಬಳಿಕ ಕುಂಭಮೇಳದ ತಯಾರಿ, ಸಿದ್ಧತೆಗಳ ಪರೀಶೀಲನೆ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ನಂತರ ಸಾಧು ಸನ್ಯಾಸಿಗಳೊಡನೆ ಸಮಾಲೋಚನೆ ನಡೆಸಲಿದ್ದಾರೆ.
#WATCH | Prime Minister Narendra Modi takes a holy dip at Triveni Sangam in Prayagraj, Uttar Pradesh
— ANI (@ANI) February 5, 2025
(Source: ANI/DD)
#KumbhOfTogetherness #MahaKumbh2025 pic.twitter.com/kALv40XiAH
ಪ್ರಧಾನಿ ಆಗಮನದ ಅಂಗವಾಗಿ ಪ್ರಯಾಗ್ ರಾಜ್ ನಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.