ಮಂಡ್ಯ: ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra)ಅವರು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಂತೆ ರೈತರೊಂದಿಗೆ ಭತ್ತ ನಾಟಿ ಮಾಡಿ ಗಮನ ಸೆಳೆದಿದ್ದಾರೆ.
ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕೊತ್ತತ್ತಿ ಗ್ರಾಮದ ಸುಖೇಂದ್ರ ಹಾಗೂ ಶಿವಬಸಪ್ಪ ಎಂಬುವವರ 2 ಎಕರೆ ಗದ್ದೆಯಲ್ಲಿ ನಾಟಿ ಕಾರ್ಯಕ್ರಮ ನಡೆಸಲಾಯಿತು.
ಪಂಚೆ ಎತ್ತಿಕಟ್ಟಿ ಗದ್ದೆಗಿಳಿದ ವಿಜಯೇಂದ್ರ ಅವರು ಪೈರು ನಾಟಿ ಮಾಡಿದ್ದು, ಬಳಿಕ ರೈತ ಮಹಿಳೆಯರಿಗೆ ಕಿಟ್ ಗಳನ್ನು ನೀಡಿದ್ದಾರೆ.