ಹರಿತಲೇಖನಿ ದಿನಕ್ಕೊಂದು ಕಥೆ: ನೋವನ್ನುಂಟು ಮಾಡುವ ಮೋಹ

Daily story: Infatuation that hurts

Daily story; ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್‌ನಲ್ಲಿ ಓದಿದೆ. ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ.

ಈತನ ಮೇಲೆ ಸಬ್‍ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಇದ್ದಾರೆ. ಯಾದವ ಬೋರಾ ಕೂರುವುದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ.

ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ, ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿ­ಹೋಗ­ದಂತೆ ನೋಡಿಕೊಳ್ಳುತ್ತವೆ.

ಮೇಜಿನ ಮಧ್ಯದಲ್ಲಿರುವುದು ಹೊಳೆಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ.

ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆ­ಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ. ಅದಲ್ಲದೇ ಅವು ಹಲ­ವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕ­ಗಳಿಂದ ಹಾಗೆಯೇ ಇದೆ.

ತಾನು ಎರಡನೇ ದರ್ಜೆ ಗುಮಾಸ್ತನಾಗಿ­ದ್ದಾಗಿ­ನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ. ತಾನೂ ಮುಂದೆ ಮುಖ್ಯ ಗುಮಾಸ್ತ­ನಾದ ಮೇಲೆ ತನಗೂ ಆ ಕರೆಗಂಟೆ ಒತ್ತುವ ಅವಕಾಶ ಬರುತ್ತದೆಂದು ಕನಸು ಕಂಡಿದ್ದಾನೆ.

ಅದೇನು ಶಕ್ತಿ ಆ ಕರೆಗಂಟೆಗೆ! ಅದರ ಸ್ಪ್ರಿಂಗ್‌ಗಳನ್ನು ತಿರುಗಿಸಿ ಬಟನ್ ಮೇಲೆ ಬೆರಳಿಟ್ಟು ಒತ್ತಿದರೆ ಇಡೀ ಆಫೀಸಿನ ಮೂಲೆ ಮೂಲೆಗೂ ಅದರ ಧ್ವನಿ ಕೇಳಿಸುತ್ತದೆ. ಅಷ್ಟೇ ಅಲ್ಲ, ಮುಖ್ಯ ಗುಮಾಸ್ತರ ಸೇವೆಗೆಂದು ಇದ್ದ ಮೂವರಲ್ಲಿ ಒಬ್ಬ ಓಡಿ ಬರುತ್ತಾನೆ.

ಕೈ ಕಟ್ಟಿ, ‘ಏನಪ್ಪಣೆ ಬಾಬೂ?’ ಎಂದು ವಿನಯದಿಂದ ಕೇಳುತ್ತಾನೆ. ಆರಡಿ ಎತ್ತರದ ಮನುಷ್ಯ­ನೊಬ್ಬನನ್ನು ತನ್ನ ಧ್ವನಿಯಿಂದ ಓಡಿ ಬರುವಂತೆ ಮಾಡುವ ಕರೆಗಂಟೆಯ ಶಕ್ತಿ ಸಣ್ಣದೇ?

ಇಂದು ಯಾದವ ಬೋರಾ ಕರೆ­ಗಂಟೆಯನ್ನು ಮೇಲಿಂದ ಮೇಲೆ ಬಾರಿಸುತ್ತಿದ್ದಾನೆ. ಸದ್ದು ಕೇಳಿ ಒಳಬಂದ ಸೇವಕನಿಗೆ ಒಂದು ಕೆಲಸ ಹೇಳಿ ಆತ ಕೊಠಡಿಯಿಂದ ಹೊರಡುವ ಮೊದಲೇ ಮತ್ತೊಮ್ಮೆ ಗಂಟೆ ಬಾರಿಸುತ್ತಾನೆ.

ಇವರ ಕೈಕೆಳಗೆ ಕೆಲಸಮಾಡುವ ಮತ್ತೊಬ್ಬ ಗುಮಾಸ್ತ ಕೇಳಿದ, ‘ಬಾಬೂ ಇವತ್ತು ನಿಮ್ಮ ಕರೆಗಂಟೆ ನಿಲ್ಲುವಂತೆ ಕಾಣುವುದಿಲ್ಲ. ಏನು ವಿಶೇಷ?’ ದುಃಖ ತುಂಬಿದ ಧ್ವನಿಯಲ್ಲಿ ಯಾದವ ಬೋರಾ ಹೇಳಿದ, ‘ನಿನಗೆ ಇದರ ಮರ್ಮ ಅರ್ಥವಾಗುವುದಿಲ್ಲ ಮಗೂ. ಇಂದು ನನ್ನ ಸೇವೆಯ ಕೊನೆಯ ದಿನ.

ನಾಳೆಯಿಂದ ನಾನು ಕಚೇರಿಗೆ ಬರುವುದಿಲ್ಲ. ಇಂದೇ ನನ್ನ ಪ್ರೀತಿಯ ಈ ಕರೆಗಂಟೆಯನ್ನು ಬಾರಿಸುವ ಕೊನೆಯ ದಿನ. ನಾಳೆ ನಾನು ಕರೆಗಂಟೆ ಇಲ್ಲದೇ ಹೇಗಿರುತ್ತೇನೋ ತಿಳಿಯದು’. ಹೀಗೆ ಹೇಳಿ ತನ್ನ ಕರವಸ್ತ್ರದಿಂದ ಆ ಕರೆ­ಗಂಟೆಯನ್ನು ನಯವಾಗಿ ಒರೆಸಿ ಅದರ ಮೇಲೆ ಬೆರಳಾಡಿಸಿದ.

ಈ ಮಾತು­ಗಳನ್ನು ಕೇಳುತ್ತಿದ್ದ ಸೇವಕನೊಬ್ಬ ಹೇಳಿದ, ‘ಬಾಬೂ, ನಾವೆಲ್ಲ ಸಾಹೇಬ­ರಿಗೆ ಹೇಳಿ ಈ ಕರೆಗಂಟೆಯನ್ನು ನಿಮಗೇ ಕೊಡುವಂತೆ ಕೇಳುತ್ತೇವೆ. ನೀವು ಮನೆಯಲ್ಲಿ ಕುಳಿತು ಗಂಟೆ ಬಾರಿಸಿದರೆ ನಿಮ್ಮ ಹೆಂಡತಿ, ಮಕ್ಕಳು ಓಡಿ ಬರುತ್ತಾರೆ’. ಎಲ್ಲರೂ ನಕ್ಕರು. ಆದರೆ ಯಾದವ ಬೋರಾ ನಗಲಿಲ್ಲ. ಮರುದಿನ ಯಾದವ ಬೋರಾನಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಆಫೀಸಿನಿಂದ ಹೊರಡುವಾಗ ತಮ್ಮ ಕರೆಗಂಟೆಯನ್ನು ಮೇಜಿನ ಮೇಲೆಯೇ ಇಟ್ಟು ಹೊರಟಾಗ ತುಂಬ ಹತ್ತಿರದವರು ಯಾರೋ ತೀರಿ­ಹೋದಂತೆ ಭಾಸವಾಗಿ ಎದೆ ಭಾರವಾ­ಯಿತು. ಎದೆ ಬಡಿತ ಹೆಚ್ಚಾಯಿತು. ಮನೆಗೆ ಬಂದಾಗ ಹೆಂಡತಿ, ಮಕ್ಕಳು ಸ್ವಾಗತಿಸಿದರು.

ಯಾದವ ಬೋರಾ ಕುರ್ಚಿಯಲ್ಲಿ ಕುಸಿದು ಕುಳಿತರು. ನಾಳೆಯಿಂದ ಅಧಿಕಾರವಿಲ್ಲ, ಅದರ ಸಂಕೇತವಾದ ಕರೆಗಂಟೆಯಿಲ್ಲ ಎಂಬು­ದನ್ನು ಕಲ್ಪಿಸಲೂ ಸಾಧ್ಯವಾಗಲಿಲ್ಲ. ಅಷ್ಟು ಹೊತ್ತಿಗೆ ಆಫೀಸಿನ ಸೇವಕ ಬಂದ. ‘ಬಾಬೂ, ನಮ್ಮ ಸಾಹೇಬರು, ನೀವು ಅಷ್ಟು ಪ್ರೀತಿಸಿದ ಕರೆಗಂಟೆಯನ್ನು ನಿಮಗೇ ಕೊಡಲು ಹೇಳಿ ಕಳುಹಿಸಿದ್ದಾರೆ, ದಯವಿಟ್ಟು ಸ್ವೀಕರಿಸಿ’ ಎಂದು ಹೇಳಿ ಕರೆಗಂಟೆಯನ್ನು ಕೊಟ್ಟು ಹೋದ. ಬೋರಾನಿಗೆ ಸಂತೋಷದ ಕಾಮನ­ಬಿಲ್ಲು ಕಾಣಿಸಿತು, ಅವೇಶ ಗಗನ­ಕ್ಕೇರಿತು, ಉಸಿರಾಡಲು ಅಸಾಧ್ಯ­ವೆನಿಸಿತು.

ಆದರೂ ನಿಧಾನವಾಗಿ ಬಟನ್ ಮೇಲೆ ಬೆರಳಿಟ್ಟು ಒತ್ತಿದ. ಅದರ ತೀಕ್ಷ್ಣ ಶಬ್ದ ಮನೆಯಲ್ಲಿ ಅನುರಣಿಸಿತು. ಮೊದಲೆಂದೂ ಇಂಥ ಶಬ್ದ ಕೇಳಿರದ ಹೆಂಡತಿ ಮಕ್ಕಳು ಓಡಿ ಬಂದರು. ಯಾದವ ಬೋರಾನ ಬೆರಳು ಇನ್ನೂ ಕರೆಗಂಟೆಯ ಬಟನ್ ಮೇಲೆಯೇ ಇತ್ತು. ಆದರೆ ಅತಿಯಾದ ಅವೇಶದ ಹೃದಯಾಘಾತದಿಂದ ಅವನ ಪ್ರಾಣಪಕ್ಷಿ ಮಾತ್ರ ದೇಹದಲ್ಲಿರಲಿಲ್ಲ.

ಮೋಹದಿಂದ ಪಾರಾಗುವುದು ಬಹಳ ಕಷ್ಟ. ಆದರೆ ಅದನ್ನು ಮಿತಿಯಲ್ಲಿ­ಡು­ವುದು ಕ್ಷೇಮ. ಮೋಹಕ್ಕೂ ನೋವಿಗೂ ಅತ್ಯಂತ ನಿಕಟ ಸಂಬಂಧ. ಮೋಹ ಹೆಚ್ಚಾದಷ್ಟೂ ನೋವು ಅದರ ನೆರಳಲ್ಲೇ ಬಲಿಯುತ್ತದೆ. ಯಾವುದೇ ವಸ್ತು, ವ್ಯಕ್ತಿಯ ಜೊತೆಗಿನ ಅತಿಯಾದ ಮೋಹ, ಆ ವಸ್ತು, ವ್ಯಕ್ತಿ ಮರೆಯಾ­ದೊಡನೆ ನೋವಾಗಿ ಅಮರಿಕೊಳ್ಳು­ತ್ತದೆ, ಜೀವ ಹಿಂಡುತ್ತದೆ.

ಸ್ನೇಹಿತರೆ ಯಾವುದೇ ವಸ್ತು, ವ್ಯಕ್ತಿ, ಹೊನ್ನು, ಮಣ್ಣು ಅಥವಾ ಇನ್ನಾವುದೇ ವಸ್ತುವಿನ ಮೇಲೆ ಪ್ರೀತಿ ಇರಲಿ.ಆದರೆ ಅತಿಯಾದ ಮೋಹ ಬೇಡ. ಏನಂತೀರಿ.

ಕೃಪೆ; ಸಾಮಾಜಿಕ ಜಾಲತಾಣ

ರಾಜಕೀಯ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ

ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

[ccc_my_favorite_select_button post_id="121758"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಗೃಹಿಣಿಯ ಗುರುತು ಪತ್ತೆ

ಜಿಂಕೆಬಚ್ಚಹಳ್ಳಿ ಸಮೀಪ ಶನಿವಾರ ಬೆಂಕಿಗೆ ಆಹುತಿಯಾಗಿದ್ದ ಕಾರಿನಲ್ಲಿ (Car) ಅನುಮಾನಸ್ಪದ ರೀತಿಯಲ್ಲಿ ಸುಟ್ಟು ಹೋಗಿದ್ದ ಮಹಿಳೆಯ (Woman) ಅಸ್ಥಿಪಂಜರ ಪತ್ತೆಯಾಗಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ವ್ಯಕ್ತಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ.

[ccc_my_favorite_select_button post_id="121693"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]