ದೊಡ್ಡಬಳ್ಳಾಪುರ (Doddaballapura): ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ ಎಂಬ ಪ್ರಸಿದ್ದ ಕನ್ನಡ ಸಿನಿಮಾ ಗೀತೆಯಂತೆ ಭಾನುವಾರ ಯುಗಾದಿ ಹಬ್ಬ ಎದುರಾಗಿದೆ. ಹಿಂದೂ ಪಂಚಾಂಗದ ಅನ್ವಯ ಹೊಸವರ್ಷ. ಹೀಗಾಗಿ ಯುಗಾದಿ ಪ್ರತಿವರ್ಷ ಬಹಳ ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.
ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಮಾರುಕಟ್ಟೆ ಜನ ಜಂಗಳಿಯಿಂದ ಕೂಡಿರುತ್ತದೆ. ಅಂತೆಯೇ ಈ ವರ್ಷ ಖರೀದಿ ಭರಾಟೆ ಜೋರಾಗಿದೆ. ತೀವ್ರ ಬಿಸಿಲಿನ ನಡುವೆಯೂ ಹೆದರ ಜನರು ಮಾರುಕಟ್ಟೆಗಳಿಗೆ ಬಂದು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದಾರೆ.

ಈ ವಹಿವಾಟಿಗೆ ಗ್ಯಾರೆಂಟಿ ಯೋಜನೆಗಳಾದ ಗೃಹಲಕ್ಷ್ಮೀ ಹಣ, ಉಚಿತ ಸಾರಿಗೆ ವ್ಯವಸ್ಥೆ ಹಿನ್ನೆಲೆಯಲ್ಲಿ ಮಹಿಳೆಯರು ನಗರಗಳಿಗೆ ತೆರಳಿ ಹೊಸ ಬಟ್ಟೆ ಸೇರಿದಂತೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿ ನಡೆಸಿದ್ದಾರೆ.
ಈ ವರ್ಷ ಹಣ್ಣು, ತರಕಾರಿ ಬೆಳೆ ಕಡಿಮೆಯಾಗಿದೆ. ಆದರೆ ಹಬ್ಬದ ಕಾರಣ ಹೂವು, ಹಣ್ಣು ಮತ್ತು ತರಕಾರಿ ಬೆಲೆ ಗಗನಕ್ಕೆ ಏರಿದೆ.
ಹೂ; ಮಲ್ಲಿಗೆ ಕೆಜಿ 1800-2000, ಸೇವಂತಿಗೆ ಕೆಜಿ 200-250, ಗುಲಾಬಿ 180-200, ಚೆಂಡು 50-80 ಕಾಕಡ 600, ಕನಕಾಂಬರ 800-1000, ಸುಗಂದರಾಜ 250, ತುಳಸಿ 1 ಮಾರ್ಗೆ 100, ಬೇವು 1 ಕಟ್ಗೆ 25, ಮಾವಿನ ಎಲೆ 25 ರೂ ಕಂಡುಬಂದಿದೆ.
ತರಕಾರಿ; ಬೀನ್ಸ್ ಬೆಲೆ 120 ರೂ.ಗೆ ಏರಿಕೆಯಾಗಿದೆ, ಕ್ಯಾರೆಟ್ 40 ರೂ. ಕ್ಕೆ ಮಾರಾಟವಾಗುತ್ತಿದೆ. ಇತರೆ ತರಕಾರಿಗಳಾದ ಕ್ಯಾಪ್ಸಿಕಂ 60, ಬದನೆ 50, ಆಲೂಗೆಡ್ಡೆ 50, ಟೊಮೇಟೊ 10ಬೆಲೆ ಕೆಜಿಗೆ ಮಾರಾಟವಾಗುತ್ತಿದೆ.
ದಿನಸಿ: ತೊಗರಿ ಕೆಜಿ 140ರೂ. ಬೆಲ್ಲ ಕೆಜಿ 55-65 ರೂ ಮಾರಾಟವಾಗುತ್ತಿದೆ.