ರೋಂ (Harithalekhani); ಅನಾರೋಗ್ಯದಿಂದ ಬಳುತ್ತಿದ್ದ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ (Pope Francis) ವಿಧಿವಶರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೆರಿಕನ್ ನಾಯಕರಾಗಿದ್ದ ಪೋಪ್ ಬೆನೆಡಿಕ್ಟ್ ರಾಜೀನಾಮೆ ನೀಡಿದ ನಂತರ 2013ರಲ್ಲಿ ಫ್ರಾನ್ಸಿಸ್ ಅವರು ಪೋಪ್ ಆದರು.
ಪೋಪ್ ತಮ್ಮ 12 ವರ್ಷಗಳ ಪೋಪ್ ಸ್ಥಾನದಲ್ಲಿರುವಾಗಲೇ ಅವರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಬಳಲುತ್ತಿದ್ದರು. ಅರ್ಜೆಂಟೀನಾದಲ್ಲಿ ಜನಿಸಿದ ಫ್ರಾನ್ಸಿಸ್, ಅಮೆರಿಕದಿಂದ ಬಂದ ಮೊದಲ ಪೋಪ್ ಆಗಿದ್ದವರು.
ಈಸ್ಟರ್ ಪ್ರಾರ್ಥನೆ ಬಳಿಕ ಅವರು ಇಂದು ವ್ಯಾಟಿಕನ್ ಸಿಟಿಯಲ್ಲಿ ಅವರು ನಿಧನರಾಗಿದ್ದಾರೆ.
ಕಳೆದ ಪವಿತ್ರ ಗುರುವಾರದಂದು ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ರೆಜೀನಾ ಶೇಲಿ ಎಂಬ ಸೆರೆಮನೆಗೆ ಭೇಟಿ ನೀಡಿ ಕೈದಿಗಳಿಗೆ ಮಾತನಾಡಿಸಿ ಅಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು.
ಇನ್ನೂ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅಗಲಿಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಟ್ವಿ ಮಾಡಿರುವ ಅವರು, ಶಾಂತಿ ಮತ್ತು ಸಹಾನುಭೂತಿಯ ಸಂಕೇತವಾಗಿದ್ದ ಪರಮಪೂಜ್ಯ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ.
ಅವರ ಜೀವನವು ಬಡವರ ಮೇಲಿನ ಪ್ರೀತಿ ಮತ್ತು ಜಗತ್ತಿಗೆ ಭರವಸೆಯ ಸಂದೇಶವಾಗಿತ್ತು. ಕರ್ನಾಟಕ ಮತ್ತು ಜಗತ್ತಿನಾದ್ಯಂತದ ಕ್ರಿಶ್ಚಿಯನ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಎಂದು ಸಿಎಂ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.