ವಿಜಯನಗರಂ: ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ । ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ ॥ ಗುರುವು ಬ್ರಹ್ಮ, ಗುರುವು ವಿಷ್ಣು, ಗುರುವು ಮಹೇಶ್ವರ (ಶಿವ), ಗುರುವು ಸ್ವಯಂ-ಬಹಿರಂಗಪಡಿಸುವ ಮಿತಿಯಿಲ್ಲದ ಬ್ರಹ್ಮ ಎಂಬುದು ಗುರುಗಳನ್ನು ಗೌರವಿಸಬೇಕಾದ ಸಂದೇಶದ ಶ್ಲೋಕ.
ಆದರೆ ಇತ್ತೀಚಿನ ದಿನಗಳಲ್ಲಿ ಗುರು-ಶಿಷ್ಯರ ನಡುವಿನ ಪವಿತ್ರವಾದ ಬಂಧದ ಕುರಿತು ನಕಾರಾತ್ಮಕ ವರದಿಗಳು ಪದೇ ಪದೇ ಕೇಳಿ ಬರುತ್ತಿದೆ.
ಅಂತೆಯೇ ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸಿದ್ರೆ ಶಿಕ್ಷಕರು ಅದನ್ನು ಕಸಿದುಕೊಳ್ಳೋದು ಸಹಜ. ಹೀಗೆ ತನ್ನ ಪೋನ್ ಕಸಿದುಕೊಂಡಿದ್ದಕ್ಕೆ ಉಪನ್ಯಾಸಕಿ ಮೇಲೆ ಕೋಪಗೊಂಡ ವಿದ್ಯಾರ್ಥಿನಿ ತನ್ನ ಫೋನ್ ವಾಪಸ್ ಕೊಡುವಂತೆ ನಿಂದಿಸಿ, ಚಪ್ಪಲಿಯಿಂದ ಹಲ್ಲೆ ಮಾಡಿರುವ ಆಘಾತಕಾರಿ ಘಟನೆ ಸಾಮಾಜಿಕ ಜಾಲ ವೈರಲ್ ಆಗಿದೆ.
Student beats teacher with slipper
— Petricia_Journalist (@GodlaPetricia) April 22, 2025
Vijaynagaram A student got into an argument with a teacher at Raghu Engineering College after a teacher took a student's phone.
Argument between the 2 escalated, the student beat the teacher while cursing to give back phone or pay 12000. pic.twitter.com/yLquw0yMFj
ಹೌದು, ಆಂಧ್ರಪ್ರದೇಶದ ವಿಜಯನಗರದ ಖಾಸಗಿ ಇಂಜಿನೀಯರಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ವಿದ್ಯಾರ್ಥಿನಿ ಕಾಲೇಜ್ ಆವರಣದಲ್ಲಿ ಮೊಬೈಲ್ ಬಳಸುತ್ತಿದ್ದುದ್ದನ್ನು ಗಮನಿಸಿದ ಉಪನ್ಯಾಸಕಿ ಮೊಬೈಲ್ ಕಿತ್ತುಕೊಂಡಿದ್ದಾರೆ.
ಇದೆ ವಿಚಾರಕ್ಕೆ ಮೊಬೈಲ್ ವಾಪಸ್ ಕೊಡು ಇಲ್ಲವಾದರೆ 12ಸಾವಿರ ಕೊಡುವಂತೆ ಜಗಳ ತೆಗೆದ ವಿದ್ಯಾರ್ಥಿನಿ ತನ್ನ ಕಾಲಿನಲಿದ್ದ ಚಪ್ಪಲಿಯಿಂದ ಉಪನ್ಯಾಸಕಿ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಸಹಜವಾಗಿ ಉಪನ್ಯಾಸಕಿ ಕೂಡ ಪ್ರತಿದಾಳಿ ಮಾಡಿದ್ದಾರೆ.
ಈ ಘಟನೆ ನಡೆಯುವ ವೇಳೆ ಸ್ಥಳದಲ್ಲಿದ್ದ ಮತ್ತೊಬ್ಬ ವಿದಾರ್ಥಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸದ್ಯ ಈ ವೀಡಿಯೋ ವೈರಲ್ ಆಗಿದ್ದು ಘಟನೆಯ ಬಗ್ಗೆ ಕಾಲೇಜು ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.