ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಖ್ಯಾತ ಗಾಯಕ ಸೋನು ನಿಗಮ್ (Sonu nigam) ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧ ನಾಲಿಗೆ ಹರಿಬಿಟ್ಟಿರುವುದಕ್ಕೆ ರಾಜ್ಯದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಸೋನು ನಿಗಮ್ ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನ ಕಾಲೇಜೊಂದರ ಸಂಗೀತ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಹಿಂದಿ ಹಾಡು ಹಾಡುತ್ತಿದ್ದರು. ಆಗ ವಿದ್ಯಾರ್ಥಿಯೊಬ್ಬ ಕನ್ನಡ ಕನ್ನಡ ಎಂದು ಪಟ್ಟುಹಿಡಿಯುವಂತೆ ಬೇಡಿಕೆ ಇಟ್ಟ. ಇದರಿಂದ ಸಿಟ್ಟಾದ ಸೋನು ನಿಗಮ್ ಪಹಲ್ಲಾಮ್‌ನಲ್ಲಿ ನಡೆದ ಘಟನೆಯ ಕಾರಣ ಇದೇ. ನಿಮ್ಮ ಮುಂದೆ ಯಾರು ನಿಂತಿದ್ದಾರೆ ಎಂದು ನೋಡಿ ಎಂದು ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ್ದಾರೆ.
ಸೋನು ನಿಗಮ್ ಅವರ ಈ ಹೇಳಿಕೆಗೆ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕನ್ನಡ ಭಾಷೆಗೂ ಪೆಹಲ್ಲಾಂ ಘಟನೆಗೂ ಸಂಬಂಧ ಕಲ್ಪಿಸಿದ ಗಾಯಕ ಸೋನು ನಿಗಂ ಕನ್ನಡಿಗರ ಕ್ಷಮೆ ಕೇಳಬೇಕು, ಇಲ್ಲವೇ ಕರ್ನಾಟಕಕ್ಕೆ ಬರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಕನ್ನಡಿಗರ ಅನ್ನ ತಿಂದು ಕೊಬ್ಬಿರುವ ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದಾನೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಕರವೇ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರು ಕೊಲ್ಲು ಕೊಟ್ಟು ನಾವೇ ಹೊಡಿಸಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದಕ್ಕೆ ಇಂದು ಉಗ್ರಗಾಮಿಗಳು ಎನಿಸಿಕೊಳ್ಳಬೇಕಾಗಿದೆ. ಯಾಕೇಳಿ ಕನ್ನಡಿಗರ ಕಡೆಗಣಿಸಿ, ಓ ಇವನ್ಯಾರೋ ಮಹಾಪುರುಷ ಅಂತ ಲಕ್ಷಲಕ್ಷ ಹಣ ನೀಡಿ ಕರ್ಕೊಂಡ್ ಬಂದ್ ಅವಕಾಶ ಕೊಟ್ಟಿದಕ್ಕೆ, ಕನ್ನಡ ಹಾಡನ್ನು ಕೇಳಿದರೆ ಉಗ್ರಗಾಮಿಗಳಿಗೆ ಹೋಲಿಸಿದ್ದಾನೆ
ಅಲ್ರೀ ಬೆಂಗಳೂರಿನ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಕೇಳಿದರೆ ತಪ್ಪಾ..?, ಕರ್ನಾಟಕದಲ್ಲಿ ಕನ್ನಡ ಕೇಳದೇ ಮತ್ತೇನ್ ಕೇಳಬೇಕು..? ಇದು ಆತನ ದುರಂಕಾರದ ವರ್ತನೆ ಅಲ್ಲವೆ. ಇದು ಕನ್ನಡ, ಕನ್ನಡಿಗರಿಗೆ ಮಾಡಿರುವ ಅವಮಾನವಲ್ಲದೆ ಮತ್ತೇನು..?
ಸೋನು ನಿಗಮ್ ಹೇಳಿಕೆಯನ್ನು ಕನ್ನಡಿಗರಿಗಾದ ಅವಮಾನ ಎಂದು ಕನ್ನಡದ ನಿರ್ಮಾಪಕರು ಪರಿಗಣಿಸಬೇಕು, ಇನ್ನು ಮುಂದೆ ಈತನಿಂದ ಕನ್ನಡ ಚಿತ್ರಗಳಲ್ಲಿ ಹಾಡನ್ನು ಹಾಡಿಸಬಾರದು, ಹಾಡಿಸಿದರೆ ಪರಿಣಾಮ ಸರಿಯಿರುವುದಿಲ್ಲ ಎಂದು ಇದೇ ವೇಳೆ ರಾಜಘಟ್ಟರವಿ ಎಚ್ಚರಿಕೆ ನೀಡಿದ್ದಾರೆ.