ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಕಾಡತಿಪ್ಪೂರು, ತಣ್ಣಿರನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರಿಂದ ಅರಸಮ್ಮ ದೇವಿಯ ಭಕ್ತ ಮಂಡಲಿ ನೇತೃತ್ವದಲ್ಲಿ ಕಾಡತಿಪ್ಪೂರಿನಲ್ಲಿ ಮೇ 19ರಂದು ಮಧ್ಯಾಹ್ನ 1 ಗಂಟೆಗೆ ಶ್ರೀ ಅರಸಮ್ಮ ದೇವಿಯ ರಥೋತ್ಸವ ನಡೆಯಲಿದೆ.
ರಥೋತ್ಸವದ ಅಂಗವಾಗಿ ಮೇ.19ರಿಂದ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಸಂಜೆ ದೇವಿ ಮೆರವಣಿಗೆ, ಆರತಿಗಳು, ಮಡಿ ಕುರ್ಜು ನಡೆಯಲಿದೆ.
ಮೇ.20ರಂದು ಸಂಜೆ 6ಗಂಟೆಗೆ ದೊಡ್ಡಮ್ಮದೇವಿಯ ಆರತಿ ಅಗ್ನಿಕುಂಡ ಕಾರ್ಯಕ್ರಮಗಳಿವೆ.
ರಥೋತ್ಸವದ ಅಂಗವಾಗಿ ಮೂರು ಗ್ರಾಮ ದೇವತೆಗಳ ಉತ್ಸವ ಶುಕ್ರವಾರ ರಾತ್ರಿ ನಡೆಯಿತು.
ದೊಡ್ಡಬಳ್ಳಾಪುರ ತಾಲ್ಲೂಕಿನ ಕಾಡತಿಪ್ಪೂರಿನಲ್ಲಿ ಮೇ 19 ರಂದು ನಡೆಯಲಿರುವ ಅರಸಮ್ಮ ದೇವಿ ರಥೋತ್ಸವದ ಅಂಗವಾಗಿ ಮೂರು ಗ್ರಾಮಗಳ ದೇವತೆಗಳ ಉತ್ಸವ ಶುಕ್ರವಾರ ರಾತ್ರಿ ನಡೆಯಿತು.