ಜಮಖಂಡಿ: ತಾಳಿ ಕಟ್ಟಿದ ಕೆಲವೇ ಗಂಟೆಗಳಲ್ಲಿ ವರನಿಗೆ ಹೃದಯಾಘಾತವಾಗಿ (Heart attack) ಸ್ಥಳದಲ್ಲೇ ಕುಸಿದುಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಇಂದು ನಡೆದಿದೆ.
ಮೃತ ವರ ಪ್ರವೀಣ ಕುರಣಿ ಎಂದು ಗುರುತಿಸಲಾಗಿದೆ.
ಘಟನೆಯಿಂದ ಮುದುವೆಯ ಸಂಭ್ರಮದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.
ಮೂಲತಃ ಕುಂಬಾರಹಳ್ಳಿ ಗ್ರಾಮದ ಮೃತ ವರ ಪ್ರವೀಣ ಕುರಣಿ, ತಾಳಿ ಕಟ್ಟಿ ಆರಕ್ಷತೆ ಬಳಿಕ ಕೆಲವೇ ಗಂಟೆಗಳಲ್ಲಿ ನವಜೋಡಿಯು ವೇದಿಕೆ ಆಗಮಿಸಿದಾಕ್ಷಣ ವರನಿಗೆ ಹೃದಯಾಘಾತ ಆಗಿದೆ.
ಪ್ರವೀಣ ರಾಜ್ಯ ಸೈಕ್ಲಿಂಗ್ ಸಂಘದ ಕಾರ್ಯದರ್ಶಿ ಶ್ರೀಶೈಲ ಅವರ ಪುತ್ರನೆಂದೂ ವರದಿಯಾಗಿದೆ.
ಸದ್ಯ ಈ ದಾರುಣ ಘಟನೆಯಿಂದ ಎರಡೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.