ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಹಿರಿಯ ರಾಜಕೀಯ ಮುತ್ಸದ್ಧಿ ಹೆಚ್.ಡಿ.ದೇವೇಗೌಡ (H.D.Deve Gowda) ಅವರಿಗೆ ಇಂದು ಜನ್ಮದಿನದ ಸಂಭ್ರಮ
ಈ ಹಿನ್ನಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ ಮಾಡಿದ್ದು, ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಹೆಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು.
ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ ಎಂದಿದ್ದಾರೆ.
ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಇತರೆ ಮುಖಂಡರೊಂದಿಗೆ ತೆರಳಿ ಗೌಡರನ್ನು ಗೌರವಿಸಿ, ಶುಭಾಶಯ ಕೋರಿದರು.

ಮತ್ತೊಂದೆಡೆ ಪಕ್ಷದ ವರುಷ್ಠರಿಗೆ ಜೆಡಿಎಸ್ ವಿಶಿಷ್ಟವಾದ ವಿಡಿಯೋ ಮೂಳ ಟ್ವಿಟ್ ಮಾಡಿ ಶುಭಕೋರಿದ್ದು, ಕರುನಾಡಿನ ಸುಪುತ್ರ, ಮಾಜಿ ಪ್ರಧಾನಮಂತ್ರಿಗಳು, ಪಕ್ಷದ ವರಿಷ್ಠರಾದ ಶ್ರೀ @H_D_Devegowda ಅವರಿಗೆ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಡಿನ ಸಮಸ್ತ ಜನತೆಯ ಪರವಾಗಿ ಹುಟ್ಟಹಬ್ಬದ ಶುಭಾಶಯಗಳು.
ಕರುನಾಡಿನ ಸುಪುತ್ರ, ಮಾಜಿ ಪ್ರಧಾನಮಂತ್ರಿಗಳು, ಪಕ್ಷದ ವರಿಷ್ಠರಾದ ಶ್ರೀ @H_D_Devegowda ಅವರಿಗೆ ಎಲ್ಲಾ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ನಾಡಿನ ಸಮಸ್ತ ಜನತೆಯ ಪರವಾಗಿ ಹುಟ್ಟಹಬ್ಬದ ಶುಭಾಶಯಗಳು.
— Janata Dal Secular (@JanataDal_S) May 18, 2025
ನಾಡು, ನುಡಿ, ಜಲ ವಿಷಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕನ್ನಡಿಗರಿಗೆ ಗಟ್ಟಿ ಧ್ವನಿಯಾಗಿರುವ ಧೀಮಂತ ನಾಯಕ, ಪ್ರಧಾನಿ ಹುದ್ದೆಗೇರಿದಾಗ… pic.twitter.com/BGikBbJZIZ
ನಾಡು, ನುಡಿ, ಜಲ ವಿಷಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕನ್ನಡಿಗರಿಗೆ ಗಟ್ಟಿ ಧ್ವನಿಯಾಗಿರುವ ಧೀಮಂತ ನಾಯಕ, ಪ್ರಧಾನಿ ಹುದ್ದೆಗೇರಿದಾಗ ಮಹಿಳೆಯರಿಗಾಗಿ ಮೊದಲ ಬಾರಿಗೆ ಮಹಿಳಾ ಮೀಸಲಾತಿಯನ್ನು ಜಾರಿಗೆ ತಂದ ರಾಷ್ಟ್ರಕಂಡ ಅಪರೂಪದ ರಾಜಕಾರಣಿ, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಹೀಗೆ ಎಲ್ಲ ವರ್ಗದವರಿಗೂ ಸೌಲಭ್ಯ ಸಿಗುವಂತೆ ಮೀಸಲಾತಿ ಯೋಜನೆಯನ್ನು ಜಾರಿಗೆ ತಂದು ಸಾಮಾಜಿಕ ನ್ಯಾಯ ಒದಗಿಸಿದ ರಾಜಕೀಯ ಮುತ್ಸದ್ಧಿ.
ಕರ್ನಾಟಕ ಸೇರಿ ದೇಶಾದ್ಯಂತ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ “ನೀರಾವರಿ ಪಿತಾಮಹ”, ನೀರಾವರಿ ತಜ್ಞ, ಪ್ರಧಾನಿಯಾಗಿ ತವರು ಕರ್ನಾಟಕಕ್ಕೂ ಹೆಚ್.ಡಿ ದೇವೇಗೌಡರ ಕೊಡುಗೆ ಅಜರಾಮರ. ರೈಲ್ವೇ, ನೀರಾವರಿ, ವಿದ್ಯುತ್, ಕೈಗಾರಿಕೆ , ಕೃಷಿ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದಿದೆ.