ಅರುಣಾಚಲಂ; ಕ್ಷುಲ್ಲಕ ಕಾರಣಕ್ಕೆ ಗಿರಿ ಪ್ರದಕ್ಷಿಣೆಗೆ ಬಂದಿದ್ದ ಆಂಧ್ರಪ್ರದೇಶ ಮತ್ತು ಕರ್ನಾಟಕದ ಭಕ್ತರ (Devotees) ನಡುವೆ ಘರ್ಷಣೆ ನಡೆದಿರುವ ಘಟನೆ ತಮಿಳುನಾಡಿನ ಅರುಣಾಚಲಂನಲ್ಲಿ (Arunachalam) ನಡೆದಿದೆ.
ಗಿರಿ ಪ್ರದಕ್ಷಿಣೆಯ ಸಮಯದಲ್ಲಿ ಸರದಿಯಲ್ಲಿ ನಿಂತಿದ್ದ ವೇಳೆ ಮಾತಿನ ಚಕಮಕಿ ನಡೆದು, ಹೊಡೆದಾಟ ಉಂಟಾಗಿದೆ.
ಸಣ್ಣ ಜಗಳ ದೊಡ್ಡ ಜಗಳವಾಗಿ ಮಾರ್ಪಟ್ಟು ಭಕ್ತರು ಪರಸ್ಪರ ಗುದ್ದಾಡಲು ಪ್ರಾರಂಭಿಸಿದ್ದಾರೆ.
ಈ ಘಟನೆಯಲ್ಲಿ ಅನೇಕ ಭಕ್ತರು ಗಾಯಗೊಂಡಿದ್ದಾರೆಂದು ವರದಿಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.