ಧರ್ಮಪುರಿ: ಮಲಯಾಳಂ ನಟ ಶೈನ್ ಟಾಮ್ ಚಾಕೊ (Shine Tom Chacko’s) ಅವರ ಮನೆ ತೀವ್ರ ದುರಂತದಲ್ಲಿ ಮುಳುಗಿದೆ.
ಅವರ ತಂದೆ ಸಿಪಿ ಚಾಕೋ ಅವರು ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದಾರೆ. ಘಟನೆಯಲ್ಲಿ ಚಾಕೊ, ಅವರ ತಾಯಿ, ಸಹೋದರ ಮತ್ತು ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ತಮಿಳುನಾಡಿನ ಧರ್ಮಪುರಿ ಬಳಿಯ ಪಾಲಕೊಟ್ಟೈ ಬಳಿ ಅವರು ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿದೆ.
ಚಾಕೊ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದು ಈ ದುರ್ಘಟನೆ ಭವಿಸಿದೆ.
ನಟ ಶೈನ್, ಅವರ ಸಹೋದರ ಜೋ ಜಾನ್ ಚಾಕೊ ಮತ್ತು ನಟನ ಮ್ಯಾನೇಜರ್ ಅನಿಸ್ ಗಾಯಗೊಂಡಿದ್ದು, ಧರ್ಮಪುರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.