ದೊಡ್ಡಬಳ್ಳಾಪುರ: ನಗರದ ನ್ಯಾಯಾಲಯದ (Court) ಆವರಣದಲ್ಲಿ ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ನಿಲುಗಡೆ ಮಾಡುತ್ತಿದ್ದ ಬೈಕ್ ಸವಾರರಿಗೆ ನಗರ ಠಾಣೆ ಪೊಲೀಸರು (Police) ಬಿಸಿ ಮುಟ್ಟಿಸಿದ್ದಾರೆ.
ವಿವಿಧ ಕಡೆಗಳಿಂದ ಪ್ರಕರಣಗಳ ಕಾರಣ ನ್ಯಾಯಾಲಯಕ್ಕೆ ಬರುವ ಸಾರ್ವಜನಿಕರು, ಕನಿಷ್ಠ ನ್ಯಾಯಾಲಯದ ಆವರಣ ಎಂಬ ಅರಿವಿಲ್ಲದವರಂತೆ ಬೇಕಾಬಿಟ್ಟಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದರು.
ಈ ಕುರಿತು ಬೇಸರ ವ್ಯಕ್ತವಾಗಿದ್ದು, ಇದು ನ್ಯಾಯಾಧೀಶರ ಗಮನಕ್ಕೂ ಬಂದಿದೆ ಎನ್ನಲಾಗಿದ್ದು, ಅವರ ಸೂಚನೆಯ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿರುವ ಪೊಲೀಸರು, ಕೆಲ ಬೈಕ್ ಗಳನ್ನು ವಶಕ್ಕೆ ಪಡೆದಿದ್ದು, ಮತ್ತೆ ಕೆಲವರಿಗೆ ದಂಡ ವಿಧಿಸಿ ಬೇಕಾಬಿಟ್ಟಿ ನಿಲುಗಡೆಗೆ ಬಿಸಿ ಮುಟ್ಟಿಸಿದ್ದಾರೆಂದು ವಕೀಲರು ತಿಳಿಸಿದರು.
ಮತ್ತೊಮ್ಮೆ ನ್ಯಾಯಾಲಯದ ಆವರಣದಲ್ಲಿ ಬೇಕಾಬಿಟ್ಟಿ ಬೈಕ್ಣ ಸ್ಕೂಟರ್ ನಿಲ್ಲಿಸುವವರಿಗೆ ಇದು ಎಚ್ಚರಿಕೆಯಾಗಿದೆ.