ಅಹ್ಮದಾಬಾದ್: ಗುಜರಾತ್ ರಾಜ್ಯದ ಮಾಜಿ ಮುಖ್ಯ ಮಂತ್ರಿ, ಬಿಜೆಪಿ ಹಿರಿಯ ನಾಯಕ ವಿಜಯ್ ರುಪಾನಿ (Vijay rupani) ಗುರುವಾರ ಮಧ್ಯಾಹ್ನ ವಿಮಾನ (AI171) ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಅಹ್ಮದಾಬಾದ್‌ನಲ್ಲಿನ ಸರದಾರ್ ವಲ್ಲಭಬಾಯ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಏರ್ ಇಂಡಿಯ ವಿಮಾನ ಎಐ 171, ನಂತರದ ಕೆಲವೇ ನಿಮಿಷಗಳಲ್ಲಿ ನಾಗರಿಕ ಪ್ರದೇಶದಲ್ಲಿನ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಪತನವಾಗಿದೆ. ಆ ವಿಮಾನದಲ್ಲಿಯೇ ಲಂಡನ್‌ಗೆ ಪ್ರಯಾಣಿ ಸುತ್ತಿದ್ದ ವಿಜಯ್ ರುಪಾನಿ, ಉಳಿದ 229 ಪ್ರಯಾಣಿಕರ ಜತೆಗೇ ದುರ್ಮರಣಕ್ಕೀಡಾದರು.
ವಿಡಿಯೊದಲ್ಲಿ ಮಾಜಿ ಸಿಎಂ

ಅಪಘಾತಕ್ಕೀಡಾದ ಏರ್ ಇಂಡಿಯ ವಿಮಾನ ಎಐ 171ರಲ್ಲಿ ವಿಜಯ್ ರುಪಾನಿ ಹೆಸರು ಪ್ರಯಾಣಿಕರ ಪಟ್ಟಿಯಲ್ಲಿ ಹನ್ನೆರೆಡನೆಯದಾಗಿದೆ.
ವಿಮಾನದಲ್ಲಿ ಪ್ರಯಾಣಿಕರ ಮಧ್ಯೆ ವಿಜಯ್ ರುಪಾನಿ ಕುಳಿತಿರುವ ಕ್ಷಣದ ವಿಡಿಯೊ, ಫೋಟೊಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ವಿಜಯ್ ರುಪಾನಿ ಅವರ ಆಸನಕ್ಕಿಂತ 2 ಸಾಲು ಮುಂದಿನ ಆಸನದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ತೆಗೆದಿರುವ ಸೆಲ್ಪಿ ಫೋಟೊ ಮತ್ತು ವಿಡಿಯೊದಲ್ಲಿ ವಿಜಯ್ ರುಪಾನಿ ಅವರೂ ಕಾಣಬರುತ್ತಿದ್ದಾರೆ.
Heartbroken by the #Ahmedabad tragedy involving @airindia Flight #AI171. Among the victims was Shri Vijay Rupani ji, former CM of Gujarat and a stalwart of our @BJP4India family. His loss is deeply personal and painful. 🙏
— Balraj R. Nune (@NuneBalrajBjp) June 12, 2025
My condolences to all affected families.
Gratitude to… pic.twitter.com/1Qe0mcxhX5
ಬೋಯಿಂಗ್ 787 ಡ್ರಮ್‌ಲೈನರ್ ನಿರ್ವಹಣೆಯ, ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಚಲಾಯಿಸುತ್ತಿದ್ದ ಏರ್ ಇಂಡಿಯದ ಎಐ 171 ವಿಮಾನ ಗುರುವಾರ ಮಧ್ಯಾಹ್ನ 1.38ಕ್ಕೆ ಅಹಮದಾಬಾದ್‌ನಿಂದ ಹೊರಟ 5 ನಿಮಿಷಗಳಲ್ಲೇ ಮೇಘನಿ ನಗರದ ವಸತಿ ಪ್ರದೇಶದ ಮೇಲೆ ಪತನವಾಗಿ ಮೆಡಿಕಲ್ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸ್ಪೋಟ ಗೊಂಡು ಉರಿದು ಭಸ್ಮವಾಗಿದೆ.
ಕೈವ್ ಕುಂದರ್ ವಿಮಾನದ ಸಹ- ಪೈಲಟ್ ಆಗಿದ್ದರು. ಇವರಿಬ್ಬರು ಪೈಲಟ್‌ಗಳೂ ಪರಿಚಾರಕರೂ ಸೇರಿ ದಂತೆ ಒಟ್ಟು 10 ಸಿಬ್ಬಂದಿವರ್ಗದವರು ಮತ್ತು 230 ವಯಸ್ಕ ಪ್ರಯಾ ಣಿಕರು, 2 ಶಿಶುಗಳು ಸೇರಿದಂತೆ ಒಟ್ಟು 242 ಮಂದಿ ವಿಮಾನದಲ್ಲಿದ್ದರು.
ಪ್ರಯಾಣಿಕರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ನಾಗರಿಕರು, ಒಬ್ಬ ಕೆನಡಾ ಪ್ರಜೆ ಮತ್ತು ಏಳು ಪೋರ್ಚುಗೀಸ್ ಪ್ರಜೆಗಳು ಇದ್ದರು.
ಅದೃಷ್ಟವಶಾತ್ ಘಟನೆಯಲ್ಲಿ ಓರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.