ಹೊಸಕೋಟೆ; ಸಾರಿಗೆ ಬಸ್ಸು ಮತ್ತು ಲಾರಿ ನಡುವೆ ಭೀಕರ ಅಪಘಾತ (Accident) ಸಂಭವಿಸಿ, ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನಪ್ಪಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಗೊಟ್ಟಿಪುರ ಗೇಟ್ ಬಳಿ ಸಂಭವಿಸಿದೆ.
ಇಂದು (ಜೂ.13) ಬೆಳಗ್ಗಿನ ಜಾವ 4.00 ಗಂಟೆಯ ಸಮಯದಲ್ಲಿ ಹೊಸಕೋಟೆ ಕೋಲಾರ ಕಡೆಯಿಂದ ಬರುತ್ತಿದ್ದ ಆಂದ್ರಪ್ರದೇಶದ ರಾಜ್ಯ ರಸ್ತೆ ಸಾರಿಗೆ ಬಸ್ ಮತ್ತು ಲಾರಿಯ ಮದ್ಯೆ ಅಪಘಾತ ಸಂಭವಿಸಿದೆ.
ಓವರ್ ಟೇಕ್ ಮಾಡುವ ಆತುರದಲ್ಲಿ ಲಾರಿ ಬಸ್ ನ ಬಲಭಾಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದ ತಿರುಪತಿ ಜಿಲ್ಲೆಯ ಕೇಶವರೆಡ್ಡಿ (44 ವರ್ಷ), ತುನು (23 ವರ್ಷ), ಯತ್ವಿಕ್ (1 ವರ್ಷ), 4 ವರ್ಷದ ಗಂಡು ಮಗು ಮೃತಪಟ್ಟಿದೆ.
ಘಟನೆಯಲ್ಲಿ ಸುಮಾರು 20 ಜನರಿಗೆ ಹೆಚ್ಚು ಗಾಯಗಳಾಗಿದ್ದು ಹೊಸಕೋಟೆ ಟೌನ್ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿರುತ್ತಾರೆ.
ಇಬ್ಬರು ಗಾಯಾಳುಗಳು ಗಂಭೀರ ಸ್ಥಿತಿಯಲ್ಲಿದ್ದು, ಅಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಹೊಸಕೋಟೆ ಸಂಚಾರಿ ಪೊಲಿಸರು & ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.