ನವದೆಹಲಿ: ಬಾಲಿವುಡ್ ನಟಿ ಕರೀಷ್ಮಾ ಕಪೂರ್ (Karisma Kapoor) ಅವರ ಮಾಜಿ ಪತಿ ಕೈಗಾರಿಕೋದ್ಯಮಿ ಸುಂಜಯ್ ಕಪೂರ್ (Sunjay Kapur) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು
ಸುಂಜಯ್ ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯದಲ್ಲಿ ಆಟವಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಸುಂಜಯ್ ಪೋಲೋ ಆಟಗಾರ ಮಾತ್ರವಲ್ಲದೇ ಸೋನಾ ಪೋಲೋ ತಂಡದ ಮಾಲೀಕರೂ ಆಗಿದ್ದು, ಅಂತಾರಾಷ್ಟ್ರೀಯ ಪೋಲೋ ಸರ್ಕ್ಯೂಟ್‌ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಸುಂಜಯ್ ಅವರು ನಿಧನಕ್ಕೂ ಕೆಲವೇ ಗಂಟೆಗಳ ಮೊದಲು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಪತನದ ಬಗ್ಗೆ ಸಂತಾಪ ಸೂಚಿಸಿ ಟ್ವಿಟ್ ಮಾಡಿದ್ದರು. ಆದರೆ ಅವರು ಟ್ವಿಟ್ ಮಾಡಿದ ಕೆಲವೇ ಗಂಟೆಗಳ ಬಳಿಕ ಹಠಾತ್ ನಿಧನ ದುರಂತವೆನಿಸಿದೆ.
"Life is really unpredictable."
— अल्हड़ पत्रकार (@Rajesh__Jamaal) June 12, 2025
Sunjay Kapur,( Karishma Kapoor ex husband ) who posted this few hours ago, has passed away. #sunjaykapur #planecrash #Bollywood #life pic.twitter.com/ItqtGTsqqb
ಸಾವಿಗೂ ಮುನ್ನ ಸುಂಜಯ್ ತಮ್ಮ ಎಕ್ಸ್ ಖಾತೆಯಲ್ಲಿ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ದುರಂತ ಭೀಕರ ಸುದ್ದಿ ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ನೋವಿನಲ್ಲಿರುವ ಎಲ್ಲಾ ಕುಟುಂಬಗಳೊಂದಿಗೆ ಇದೆ. ಈ ಕಷ್ಟದ ಸಮಯದಲ್ಲಿ ಅವರಿಗೆ ಶಕ್ತಿ ಸಿಗಲಿ ಎಂದು ಬರೆದಿದ್ದರು.