Harithalekhani; psyche

ಹರಿತಲೇಖನಿ ದಿನಕ್ಕೊಂದು ಕಥೆ: ಮನಸ್ಸು

Harithalekhani: ಸಮರ್ಥ ರಾಮದಾಸ ಸ್ವಾಮೀಜಿಯವರು ಒಬ್ಬ ಶ್ರೇಷ್ಠ ಸಂತರಿದ್ದರು. ಅವರು ಹಳ್ಳಿಹಳ್ಳಿಗಳಿಗೆ ಸಂಚರಿಸಿ ಮನೆಮನೆಯಿಂದ ಭಿಕ್ಷೆ ಪಡೆಯುತ್ತಿದ್ದರು. ಅವರು ಭಿಕ್ಷೆ ಕೇಳುವಾಗ, ಆ ಮನೆಯ ಮುಂದೆ ಹೋಗಿ ‘ಓಂ ಭವತಿ ಭಿಕ್ಷಾಂ ದೇಹಿ’ (ತಾಯಿ, ಭಿಕ್ಷೆ ನೀಡು) ಎಂದು ಹೇಳುತ್ತಿದ್ದರು. ಅವರು ಭಿಕ್ಷೆ ಕೇಳುವಾಗ ಕೆಲವರು ಅವರನ್ನು ಅವಮಾನಿಸಿದರೆ, ಕೆಲವರು ಅವರನ್ನು ಸ್ವಾಗತಿಸುತ್ತಿದ್ದರು.

ಕೆಲವು ಜನರು ಭಿಕ್ಷೆಯನ್ನು ಸಂತೋಷದಿಂದ ನೀಡಿದರೆ ಅಥವಾ ಕೆಲವರು ಒಲ್ಲದ ಮನಸ್ಸಿನಿಂದ ನೀಡುತ್ತಿದ್ದರು. ಕೆಲವು ಸ್ಥಳದಲ್ಲಿ ಆ ಮನೆಯ ಜನರ ದುರಹಂಕಾರ ಬಹಿರಂಗವಾಗುತ್ತಿತ್ತು. ಕೆಲವೊಮ್ಮೆ ಅವರಿಗೆ ಭಿಕ್ಷೆ ದೊರಕುತ್ತಿತ್ತು, ಕೆಲವೊಮ್ಮೆ ದೊರಕುತ್ತಿರಲಿಲ್ಲ; ಆದರೆ ರಾಮದಾಸ ಸ್ವಾಮೀಜಿಯವರು ಯಾವಾಗಲೂ ಆನಂದದಿಂದ ಇರುತ್ತಿದ್ದರು.

ಒಂದು ದಿನ ಒಂದು ಹಳ್ಳಿಯಲ್ಲಿ ಅವರಿಗೆ ಭಿಕ್ಷೆಯಲ್ಲಿ ಏನೂ ಸಿಗಲಿಲ್ಲ. ಆದರೆ ಸಮರ್ಥರಿಗೆ ಸ್ವಲ್ಪವೂ ಕೋಪ ಬರಲಿಲ್ಲ. ಭಿಕ್ಷೆಯಲ್ಲಿ ಇಂದು ಏನು ದೊರಕದಿದ್ದರೂ ಸರಿ. ಪ್ರಭು ಶ್ರೀರಾಮನ ಇಚ್ಛೆಯಂತೆ ಆಗಲಿ. ಇದು ಸಹ ದೇವರ ಕೊಡುಗೆಯೇ ಇದೆ, ಇದರಲ್ಲಿ ನೊಂದುಕೊಳ್ಳುವಂತಹದು ಏನಿದೆ ! ಅದರಲ್ಲಿ ಕಷ್ಟಕರ ಏನಿದೆ ಎಂದು ಅವರು ರಾಮನಾಮ ಜಪಿಸುತ್ತ ಅಲ್ಲಿಂದ ಮುಂದಿನ ಗ್ರಾಮವನ್ನು ತಲುಪಿದರು.

ಅಲ್ಲಿ ಅವರು ಒಂದು ಬಹಳ ದೊಡ್ಡ ಮನೆಯ ಮುಂದೆ ಬಂದು ನಿಂತರು. ಆ ಮನೆಯಲ್ಲಿ ವಾಸಿಸುವ ಜನರೆಲ್ಲರೂ ಅಹಂಕಾರಿಗಳಾಗಿದ್ದರು. ಸಮರ್ಥರು ಭಿಕ್ಷೆಗಾಗಿ ಅಲ್ಲಿಗೆ ಹೋದರು. ‘ಓಂ ಭವತಿ ಬಿಕ್ಷಾಂ ದೇಹಿ’ ಎಂಬ ಧ್ವನಿಯನ್ನು ಕೇಳಿದ ಮಹಿಳೆಯೊಬ್ಬಳು ಉತ್ತಮ ಖಾದ್ಯವನ್ನು ತಂದು ನೀಡಿದಳು.

ಮಹಿಳೆ ಸೊಕ್ಕಿನವಳಾಗಿದ್ದಳು. ಸಮರ್ಥರಿಗೆ ಇದು ತಿಳಿದಿತ್ತು. ಸಮರ್ಥರು ಮನಸ್ಸಿನಲ್ಲಿಯೇ ನಗುತ್ತಾ, ‘ಶ್ರೀ ರಾಮಾ, ಈ ಮಹಿಳೆಗೆ ಸದ್ಬುದ್ಧಿ ನೀಡಿರಿ’ ಎಂದು ಹೇಳಿದರು. ನಂತರ ಆ ಭಿಕ್ಷೆಯನ್ನು ಸ್ವೀಕರಿಸಿ ನೇರವಾಗಿ ನದಿಯ ಕಡೆಗೆ ಹೋದರು.

ಮಕ್ಕಳೇ ಸಮರ್ಥರು ಭಿಕ್ಷೆಯಲ್ಲಿ ದೊರೆತ ಅನ್ನವನ್ನು ನದಿ ನೀರಿನಿಂದ ತೊಳೆಯುತ್ತಿದ್ದರು. ಅವರಿಗೆ ಸಿಹಿ, ಖಾರ, ಹುಳಿ, ಮಸಾಲೆಯುಕ್ತ ಪದಾರ್ಥಗಳ ಯಾವುದೇ ರುಚಿ ಅಗತ್ಯವಿರಲಿಲ್ಲ. ಭಿಕ್ಷೆಯಲ್ಲಿ ಪಡೆದ ಆಹಾರದ ಪೂರ್ಣ ರುಚಿ ಅದು ನದಿಯ ನೀರಿನಲ್ಲಿ ತೊಳೆದು ಹೋಗುವ ತನಕ, ಭಿಕ್ಷೆಯ ಚೀಲವನ್ನು ನದಿಯ ನೀರಿನಲ್ಲಿ ಮುಣುಗಿಸಿಡುತ್ತಿದ್ದರು, ಅನಂತರವೇ ಅದನ್ನು ತಿನ್ನುತ್ತಿದ್ದರು

ಒಂದು ದಿನ ಆ ಮಹಿಳೆ ಸಮರ್ಥರು ಇಷ್ಟು ದಿನಗಳಿಂದ ಇಲ್ಲಿಗೆ ಬರುತ್ತಿದ್ದಾರೆ, ನಾನು ಅವರಿಗೆ ಭಿಕ್ಷೆ ನೀಡುತ್ತಿದ್ದೇನೆ. ಈಗ ಅವರು ನನಗೆ ಏನಾದರೂ ಉಪದೇಶ ನೀಡಬೇಕು ಎಂದು ಅಂದುಕೊಂಡಳು. ಮಕ್ಕಳೇ, ಜನರು ದೇವರೊಂದಿಗೆ, ಸಂತರೊಂದಿಗೂ ಕೊಡುಕೊಳ್ಳುವ ಭಾಷೆಯಲ್ಲಿ ಮಾತನಾಡುತ್ತಾರೆ.

‘ಭಗವಂತಾ, ನೀನು ನನಗೆ ಇದನ್ನು ಕೊಡು, ನಾನು ನಿನಗೆ ಅದನ್ನು ಕೊಡುತ್ತೇನೆ’ ಎಂಬ ಲೆಕ್ಕಚಾರ ಮಾಡುತ್ತಾರೆ. ನಮ್ಮಿಂದ ಏನನ್ನಾದರೂ ಪಡೆಯಲೆಂದು ದೇವರು ಹಸಿದಿರುತ್ತಾರೆಯೇ ? ಇಡೀ ಜಗತ್ತನ್ನೇ ಸ್ವತಃ ಪೋಷಿಸುವ ದೇವರು, ನಮ್ಮ ಸಂಪತ್ತು ಮತ್ತು ಇತರ ವಸ್ತುಗಳನ್ನು ಪಡೆಯಲು ಬಯಸುತ್ತಾರೆಯೇ? ಆದರೆ ಅಹಂಕಾರಿಗಳು ‘ತಮ್ಮಿಂದಲೇ ಎಲ್ಲವೂ ನಡೆಯುತ್ತಿದೆ’ ಎಂದು ಭಾವಿಸುತ್ತಾರೆ. ಹಾ, ಆ ಮಹಿಳೆ ‘ಈ ತಪಸ್ವಿಗೆ ನಾನು ಪ್ರತಿದಿನ ಭಿಕ್ಷೆ ನೀಡುತ್ತೇನೆ’ ಭಾವಿಸಿದ್ದಳು, ‘ಆದ್ದರಿಂದ ಅವರು ನನಗೆ ಉಪದೇಶಿಸುವುದು ನನ್ನ ಹಕ್ಕು’ ಎಂದು ವಿಚಾರ ಮಾಡಿದಳು.

ಮರುದಿನ, ಭಿಕ್ಷೆ ಕೇಳಲು ಸಮರ್ಥರು ಮನೆಗೆ ತಲುಪಿದಾಗ, ಆ ಮಹಿಳೆ, ‘ನಾನು ನಿಮಗೆ ಪ್ರತಿದಿನ ಭಿಕ್ಷೆ ನೀಡುತ್ತೇನೆ, ಆದ್ದರಿಂದ ಇಂದು ನೀವು ನನಗೆ ಏನಾದರೂ ಉಪದೇಶ ನೀಡಬೇಕು’ ಎಂದು ಪಟ್ಟು ಹಿಡಿದಳು. ಆಗ ಸಮರ್ಥರು ನಕ್ಕರು, ‘ಸಮಯ ಬಂದಾಗ ಹೇಳುತ್ತೇನೆ’ ಎಂದರು.

ಇದನ್ನು ಕೇಳಿದ ಮಹಿಳೆಗೆ ಅವಮಾನ ಅನಿಸಿತು. ‘ನಾನು ಪ್ರತಿದಿನ ಸಮರ್ಥರಿಗೆ ಭಿಕ್ಷೆ ನೀಡುತ್ತೇನೆ ಮತ್ತು ನಾನು ಏನನ್ನಾದರೂ ಕೇಳುತ್ತಿದ್ದರೆ, ಸಮಯ ಬಂದಾಗ ಎಂದು ಹೇಳುತ್ತಾರೆ. ಇದರ ಅರ್ಥವೇನು? ನನಗೆ ಅಧಿಕಾರವಿದೆ. ನಾನು ಭಿಕ್ಷೆ ನೀಡುತ್ತಿದ್ದೇನೆ, ಅವರು ನನ್ನ ಕಾಲಿನ ಹತ್ತಿರ ಕುಳಿತು ಸುಮ್ಮನೆ ನನಗೆ ಉಪದೇಶಿಸಬೇಕು. ನಾನು ಅವರ ಕಾಲಿನ ಹತ್ತಿರ ಕುಳಿತುಕೊಳ್ಳುವುದಿಲ್ಲ! ಎಲ್ಲರೂ ಅವರನ್ನು ಸಂತರು ಎಂದು ಕರೆಯುತ್ತಾರೆ, ಆದರೆ ಅವರು ನನ್ನ ಕಾಲಿನ ಹತ್ತಿರ ಕುಳಿತು ನನಗೆ ಉಪದೇಶಿಸಬೇಕು’ ಎಂಬ ವಿಚಾರದಿಂದ ಹಠ ಹಿಡಿದಳು.

ಸಮರ್ಥರು ಮತ್ತೆ, ‘ಇಲ್ಲ ತಾಯಿ. ಸಮಯ ಬಂದಾಗ ನಾನು ಉಪದೇಶ ಕೊಡುತ್ತೇನೆ’ ಎಂದರು. ಮಹಿಳೆ ಮತ್ತೆ ಆಗ್ರಹ ಮಾಡಿದಾಗ ಅವರು, ‘ತಾಯಿ, ಈಗ ಮಧ್ಯಾಹ್ನವಾಗಿದೆ. ಇದು ನನ್ನ ಊಟದ ಸಮಯ. ನಾಳೆ ನಾನು ಖಂಡಿತವಾಗಿಯೂ ನಿಮಗೆ ಹೇಳಿಕೊಡುತ್ತೇನೆ’ ಎಂದು ಹೇಳಿದರು.

ಅದಕ್ಕೆ ಅವಳು ಒಪ್ಪಿದಳು. ‘ಆ ಸನ್ಯಾಸಿಯನ್ನು ನನ್ನ ಮಾತು ಒಪ್ಪುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ’ ಎಂದು ಅವಳು ತುಂಬಾ ಸಂತೋಷಪಡುತ್ತ, ಮನೆಮಂದಿಗೆಲ್ಲ ಈ ವಿಷಯವನ್ನು ಹೇಳಿದಳು.

ಮರುದಿನ, ಮಹಿಳೆಯ ಮನೆಗೆ ಹೋಗುವ ಮೊದಲು ಸಮರ್ಥರು ತಮ್ಮ ಬಟ್ಟಲಿನಲ್ಲಿ ಮಣ್ಣು ಮತ್ತು ಸ್ವಲ್ಪ ಸಗಣಿ ತುಂಬಿದರು. ಅವರು ಆ ಬಟ್ಟಲನ್ನು ತೆಗೆದುಕೊಂಡು ಆ ದೊಡ್ಡ ಮನೆಯ ಅಂಗಳದಲ್ಲಿ ನಿಂತು, ‘ಜೈ ಜೈ ರಘುವೀರ ಸಮರ್ಥ ! ತಾಯಿ ಭಿಕ್ಷೆ ನೀಡಿ ! ಭವತಿ ಭಿಕ್ಷಾಂ ದೇಹಿ !’ ಎಂದು ಕೂಗಿದರು.

ಮಹಿಳೆ ಹೊರಗೆ ಬಂದಳು. ಇಂದು ಅವಳಿಗೆ ಉಪದೇಶ ಸಿಗುತ್ತದೆ, ಆದ್ದರಿಂದ ಅವಳು ತುಂಬಾ ಸಂತೋಷವಾಗಿದ್ದಳು. ಬಾದಾಮಿ, ಒಣದ್ರಾಕ್ಷಿ, ಕೇಶರ ಇತ್ಯಾದಿಗಳನ್ನು ಸೇರಿಸಿ ರುಚಿಕರವಾದ ಪಾಯಸ ತಯಾರಿಸಿದಳು. ಸಮರ್ಥ ರಾಮದಾಸ ಸ್ವಾಮೀಜಿ ತಮ್ಮ ಬಟ್ಟಲನ್ನು ಮುಂದಿಟ್ಟರು.

ಸನ್ಯಾಸಿಯ ಬಟ್ಟಲಿನಲ್ಲಿ ಮಣ್ಣು ಮತ್ತು ಸಗಣಿ ಇರುವುದನ್ನು ಮಹಿಳೆ ನೋಡಿದಳು. ಆ ಮಹಿಳೆ ಅವರಿಗೆ, “ಏನಯ್ಯಾ, ಏನಿದು! ಈ ಬಟ್ಟಲಿನಲ್ಲಿ ಕೆಸರು ಇದೆ, ನನ್ನ ಪಾಯಸ ವ್ಯರ್ಥವಾಗುತ್ತದೆ” ಎಂದು ರೇಗಿದಳು. ಸಮರ್ಥರು, ‘ಪರವಾಗಿಲ್ಲ ತಾಯಿ, ನೇವು ಪಾಯಸ ಸುರಿಯಿರಿ’ ಎಂದು ಹೇಳಿದರು.

ಹೀಗೆ ಇದು ಒಂದೆರಡು ಬಾರಿ ಅಲ್ಲ, ಹತ್ತು ಬಾರಿ ಸಂಭವಿಸಿತು. ಆಗ ಆ ಮಹಿಳೆಯು, “ನೀನು ನನಗೆ ಯಾಕೆ ಹೀಗೆ ಮಾಡುತ್ತಿದ್ದೀಯಾ?” ಎಂದು ಕೂಗಿ ಆ ಪಾಯಸದ ಪಾತ್ರೆಯನ್ನು ಬದಿಗಿಟ್ಟಳು. ಸಮರ್ಥರ ಕೈಯಿಂದ ಬಟ್ಟಲನ್ನು ಕಿತ್ತು, ‘ಈ ಹೊಲಸಿನಲ್ಲಿ ಪಾಯಸ ಹೇಗೆ ನೀಡುವುದು? ಮೊದಲು ಈ ಬಟ್ಟಲನ್ನು ತೊಳೆದು, ಅದನ್ನು ಸ್ವಚ್ಛಗೊಳಿಸಿ ತಂದುಕೊಡು’ ಎಂದಳು.

ಆಗ ಸಮರ್ಥರು ಬಟ್ಟಲನ್ನು ಸ್ವಚ್ಛಗೊಳಿಸಿ ಅದನ್ನು ಮಹಿಳೆಯ ಮುಂದೆ ತಂದಿಟ್ಟರು. ಅವಳು ಪಾಯಸವನ್ನು ನೀಡಲು ಹೊರಟಿದ್ದಳು, ಅಷ್ಟರಲ್ಲಿ ಅವರು ಬಟ್ಟಲನ್ನು ಹಿಂದಕ್ಕೆ ತೆಗೆದುಕೊಂಡರು. ಅವರು, ‘ನಿಮಗೆ ಧರ್ಮೋಪದೇಶ ಬೇಕು, ಅಲ್ಲವೇ’ ಎಂದರು. ಮಹಿಳೆ ತುಂಬಾ ಸಂತೋಷಗೊಂಡಳು.

ಸಮರ್ಥರು, ‘ನೋಡಿ ಈ ಬಟ್ಟಲಿನಲ್ಲಿ ತುಂಬಾ ಹೊಲಸು ಇತ್ತು; ಅದಕ್ಕಾಗಿಯೇ ನೀವು ಆ ಪಾಯಸವನ್ನು ನೀಡಲಿಲ್ಲ. ನಾನು ಆ ಬಟ್ಟಲನ್ನು ಸ್ವಚ್ಛಗೊಳಿಸಿ ತಂದಾಗ, ಅದರಲ್ಲಿ ನೀವು ಪಾಯಸ ಹಾಕಲು ಸಿದ್ಧರಾದಿರಿ. ಅದೇ ರೀತಿಯಲ್ಲಿ, ನಿಮ್ಮ ಮನಸ್ಸಿನಲ್ಲಿರುವ ಅಹಂಕಾರದ ‘ನಾನು’ ಎಂಬ ಹೊಲಸು ತುಂಬಿದೆ, ಅದನ್ನು ಹೊರಹಾಕುವ ತನಕ, ನಿಮ್ಮ ಮನಸ್ಸಿನಲ್ಲಿ ನಾನು ಉಪದೇಶದ ಪಾಯಸವನ್ನು ಹೇಗೆ ಹಾಕಲಿ?’

ಇದನ್ನು ಕೇಳಿದ ತಕ್ಷಣ ಮಹಿಳೆ ನಡುಗಿದಳು. ಅವಳಿಗೆ ನಿಂತ ಭೂಮಿಯೇ ಕುಸಿದಂತಾಯಿತು. ಕಣ್ಣುಗಳಿಂದ ಕಣ್ಣೀರು ಹರಿಯಲಾರಂಭಿಸಿತು. ಅವಳು ಸಮರ್ಥರ ಕಾಲಿಗೆ ಬಿದ್ದು ನಮಸ್ಕರಿಸಿದಳು.

“ಮಹಾರಾಜರೇ, ನನ್ನಿಂದ ತಪ್ಪಾಗಿದೆ!” ಎಂದು ಅವಳು ಹೇಳಿದಳು. ಅವಳ ದುರಹಂಕಾರ ಆ ಕಣ್ಣೀರಿನೊಂದಿಗೆ ಹರಿದು ಹೋಯಿತು. ಸಮರ್ಥರು, “ತಾಯಿ, ಮನಸ್ಸನ್ನು ಸ್ವಲ್ಪ ಶುದ್ಧೀಕರಿಸಿರಿ ! ಸ್ವಲ್ಪ ಆ ಅಹಂಕಾರವನ್ನು ತೆಗೆದುಹಾಕಿ. ನನ್ನ ಉಪದೇಶವನ್ನು ಮನಸ್ಸಿನಲ್ಲಿಡಿ. ನಿಮ್ಮ ಅಂತಃಕರಣದಲ್ಲಿ ಸ್ವಲ್ಪ ಜಾಗವನ್ನು ಮಾಡಿ. ಆಗ ನಾನು ಉಪದೇಶಿಸುತ್ತೇನೆ !” ಎಂದು ಹೇಳಿ ಹೊರಟು ಹೋದರು.

ಈ ರೀತಿ ಸಮರ್ಥ ರಾಮದಾಸರು ಆ ಮಹಿಳೆಯ ಅಹಂಕಾರದ ಮನಸ್ಸನ್ನು ಶುದ್ಧ ಮನಸ್ಸಾಗಿ ಪರಿವರ್ತಿಸಿ ಎಲ್ಲರಿಗೂ ತೋರಿಸಿದರು. ಮನಸ್ಸು ಸ್ವಚ್ಛವಾಗಿದ್ದರೆ ಎಲ್ಲವೂ ಪವಿತ್ರ ಗಂಗೆ ಎಂದು ಎಲ್ಲರಿಗೂ ತೋರಿಸಿಕೊಟ್ಟರು !

ಕೃಪೆ: ಹಿಂದೂ ಜಾಗೃತಿ (ಸಾಮಾಜಿಕ ಜಾಲತಾಣ)

ರಾಜಕೀಯ

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ಯುದ್ಧವನ್ನು ಕೊನೆಗೊಳಿಸಬಹುದು: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಅವರು ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವನ್ನು ಭಾರತವು ಕೊನೆಗೊಳಿಸಬಹುದು ಎಂದು ಶುಕ್ರವಾರ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಗಲಿಗೆ ಜವಾಬ್ದಾರಿ ಹೊರೆಸಿದ್ದಾರೆ.

[ccc_my_favorite_select_button post_id="120350"]
ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ಸಿದ್ದರಾಮಯ್ಯ ನವರ ದಿಕ್ಕೆಟ್ಟ ನೀತಿಗಳು ಸರ್ಕಾರಿ ನೌಕರರನ್ನು ಬೀದಿಗೆ ತಂದಿವೆ;ಆರ್. ಅಶೋಕ

ತುಘಲಕ್‌ ನೀತಿಗಳಿಂದಲೇ ದುರಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಇದರಿಂದ ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka)

[ccc_my_favorite_select_button post_id="120234"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ: ಡಿಸಿಎಂ ಡಿ.ಕೆ. ಶಿವಕುಮಾರ್

"ಯುವಕರು ಹಾಗೂ ಕ್ರಿಕೆಟ್ ಕ್ರೀಡೆಯ ಹಿತದೃಷ್ಟಿಯಿಂದ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ಆಯೋಜನೆಗೆ ಸರ್ಕಾರ ಅನುಮತಿ ನೀಡುತ್ತಿದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ಅವರು ತಿಳಿಸಿದರು.

[ccc_my_favorite_select_button post_id="119372"]
ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಪೊಲೀಸ್‌ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು..!: ಲಾಕಪ್ ಡೆತ್ ಆರೋಪ

ಯುಗಾದಿ ಹಬ್ಬದ ದಿನ ಜೂಜಾಟದಲ್ಲಿ ತೊಡಗಿದ್ದವರ ಬಂಧಿಸಿದ್ದ ಪೊಲೀಸರು ಇಕ್ಕಟ್ಟಿಗೆ ಸಿಲುಕಿದ್ದು, ಬಂಧಿತರಲ್ಲಿ ಓರ್ವ ಸಾವನಪ್ಪಿರುವ ಕಾರಣ, ಲಾಕಪ್ ಡೆತ್ (lockup death) ಆರೋಪ ಕೇಳಿಬಂದಿದೆ.

[ccc_my_favorite_select_button post_id="120325"]
ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ: ಬೆಳ್ಳಂಬೆಳಗ್ಗೆ ಕ್ಯಾಂಟರ್..ಕಂಟೈನರ್ ನಡುವೆ ಅಪಘಾತ.. ಬೈಕ್ ಸವಾರನಿಗೆ ಗಂಭೀರ ಪೆಟ್ಟು..!

ಬೆಳ್ಳಂಬೆಳಗ್ಗೆ ಕ್ಯಾಂಟರ್ ಹಾಗೂ ಕಂಟೈನರ್ ನಡುವೆ ಡಿಕ್ಕಿ ಸಂಭವಿಸಿ (Accident), ಬೈಕ್ ಸವಾರ ಗಾಯಗೊಂಡಿರುವ ಘಟನೆ ಚನ್ನಾದೇವಿ ಅಗ್ರಹಾರದ ಬಳಿ ಇಂದು ಮುಂಜಾನೆ 5,30 ರ ವೇಳೆಗೆ ಸಂಭವಿಸಿದೆ.

[ccc_my_favorite_select_button post_id="120173"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!