ರಂಗಾರೆಡ್ಡಿ: ಮಹಿಳೆಯೋರ್ವರು ರೈಲ್ವೆ ಹಳಿಗಳ ಮೇಲೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ (car on railway track), ರೈಲು ಸೇವೆಗೆ ಅಡ್ಡಿಯನ್ನುಂಟು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಶಂಕರಪಲ್ಲಿ ಬಳಿ ರೈಲ್ವೆ ಹಳಿಗಳ ಮೇಲೆ ಮಹಿಳೆ ಕಾರು ಚಲಾಯಿಸಿ, ರೈಲ್ವೆ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿದ್ದಾರೆ.
ಹಳಿಗಳ ಮೇಲೆ ಕಾರು ಕಂಡ ಲೋಕೋಪೈಲಟ್ ಕೂಡಲೇ ಬೆಂಗಳೂರು- ಹೈದರಾಬಾದ್ ರೈಲನ್ನು ತಡೆದು ನಿಲ್ಲಿಸಿದ್ದಾರೆ.
#woman drives car on railway track towards Hyderabad. The incident was reported near #shankarpally .
— DINESH SHARMA (@medineshsharma) June 26, 2025
Despite the railway staff attempted to stop her, she speeds off the car on the track.
As a precaution Railway officials halted #Bengaluru–#Hyderabad #trains . pic.twitter.com/bBbCywZlou
ಮಹಿಳೆಯ ಕೃತ್ಯದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದಾಗಿ ವರದಿಯಾಗಿದೆ.