ಬೆಂಗಳೂರು: ಯೂಟ್ಯೂಬ್ ಚಾನೆಲ್‌ಗಳಲ್ಲಿ (YouTube channels) ಬೇಕಾಬಿಟ್ಟಿ ಮಾತನಾಡಿ ಇನ್ನೊಬ್ಬರ ಘನತೆ, ಗೌರವಕ್ಕೆ ಕುಂದು ತರುವುದನ್ನು ನಿಯಂತ್ರಿಸಲು ಸೂಕ್ತ ಕಾನೂನು ತರಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಪ್ರಶೋತ್ತರ ಕಲಾಪದಲ್ಲಿ ಸದಸ್ಯ ಎಸ್.ರವಿ ಅವರ ಸೈಬರ್ ಕ್ರೈಂ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಶ್ನೆಯ ಕುರಿತು ಸಚಿವರು ಉತ್ತರ ನೀಡಿದರು.
ಈ ವೇಳೆ, ಕೆಲಸ ಸದಸ್ಯರು ಯೂಟ್ಯೂಬ್ ಚಾನೆಲ್‌ಗಳಲ್ಲಿ ಯಾರ ಬಗ್ಗೆ ಬೇಕಾದರೂ ಮನಬಂದಂತೆ ಮಾತನಾಡುವ ಕೆಲಸ ಆಗುತ್ತಿದೆ. ಇದನ್ನು ತಡೆಯಲೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉತ್ತರಿಸಿದ ಸಚಿವರು ಮುಂದಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್ಗಳ ನಿಯಂತ್ರಣಕ್ಕೂ ಕಾನೂನು ತರುತ್ತಿದ್ದೇವೆ ಎಂದು ಹೇಳಿದರು.
ಈ ನೆಪದಲ್ಲಿ ಕೆಲ ಖಾಸಗಿ ಚಾನೆಲ್‌ಗಳು, ವಿರೋಧ ಪಕ್ಷಗಳ ಒತ್ತಡಕ್ಕೆ ಮಣಿಯುತ್ತಿರುವ ರಾಜ್ಯ ಸರ್ಕಾರ ಸ್ವತಂತ್ರ ಪತ್ರಕರ್ತರಿಗೆ ನಿಯಂತ್ರಣ ಹೇರಲು ಮುಂದಾಗಿದೆ ಎಂಬ ಚರ್ಚೆ ಆರಂಭವಾಗಿದೆ.