ದೊಡ್ಡಬಳ್ಳಾಪುರ; ಶಿಕ್ಷಣ ಇಲಾಖೆ ಮಾಜಿ ಸಚಿವ (Former Education Minister), ಶಾಸಕ (MLA) ಎಸ್.ಸುರೇಶ್ ಕುಮಾರ್ ( S. Suresh Kumar) ಅವರು ಇಂದು ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ಮಧುರೆ ಶನೇಶ್ವರ ದೇವಾಲಯಕ್ಕೆ ಗೆಳೆಯರೊಂದಿಗೆ ಸೈಕಲ್ಲಿನಲ್ಲಿ ಬಂದು ದೇವರ ದರ್ಶನ ಪಡೆದರು.
ಬಳಿಕ ಪಕ್ಕದಲ್ಲಿಯೇ ಇದ್ದ ” ಕನಸವಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ” ಗೆ ಭೇಟಿ ನೀಡಿದ ಅವರು, ಅಲ್ಲಿನ ಮಕ್ಕಳ ಜೊತೆ ಮಾತನಾಡಿದರು.
ಮಕ್ಕಳ ಕುಟುಂಬದ ವಿವರ ಪಡೆದ ಸುರೇಶ್ ಕುಮಾರ್ ಅವರು, ಮಕ್ಕಳಿಂದ ನಾಡಗೀತೆ, ರಾಷ್ಟ್ರಗೀತೆ ಹಾಡಿಸಿ, ತಿನ್ನಲು ಸಿಹಿ ತಿಂಡಿ ನೀಡಿದರು.
ಒಂದರಿಂದ ಐದನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಇರುವ ಮಕ್ಕಳ ಸಂಖ್ಯೆ 14. 5ನೇ ತರಗತಿಯಲ್ಲಿ ಒಂದು ಮಗು ಎರಡನೇ ತರಗತಿಯಲ್ಲಿ ನಾಲ್ಕು ಮಕ್ಕಳು ಒಂದನೇ ತರಗತಿಯಲ್ಲಿ ಇಬ್ಬರು. ಈ ರೀತಿ ಈ ಶಾಲೆಯಲ್ಲಿ ಇರುವ ಮಕ್ಕಳ ಸಂಖ್ಯೆ.
ಹತ್ತಿರದಲ್ಲಿಯೇ ಒಂದು ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಸರಕಾರಿ ಶಾಲೆ ಇದೆ.
ತಾಲೂಕಿನ ಶಿಕ್ಷಣಾಧಿಕಾರಿ ಜೊತೆ ಮಾತನಾಡದ ಅವರು, ಈ ಶಾಲೆಯ ಬಗ್ಗೆ ಗಮನಹರಿಸಿ ಈ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕುರಿತು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.