ಟ್ರಂಪ್‌ನಿಂದ ಪ್ರೇಮ ಪತ್ರ.. ಪ್ರಧಾನಿ ಮೋದಿ ಪ್ರತಿಕ್ರಿಯೆ..!

Trump increases H-1B visa fee to 88 lakhs.

ನವದೆಹಲಿ: ಅಮೇರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ಶೇ.50 ರಷ್ಟು ದಂಡಾಸ್ತ್ರ ಪ್ರಯೋಗಿಸಿದ ಬಳಿಕ ಮತ್ತೆ ಭಾರತದ ಕಡೆಗೆ ಸ್ನೇಹ ಹಸ್ತ ಚಾಚಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿರುವುದಾಗಿ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ರೂಥ್ ನಲ್ಲಿ ಡೋನಾಲ್ಡ್ ಟ್ರಂಪ್ ಸಂದೇಶ ಬರೆದಿದ್ದು, ಭಾರತ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳು ನಮ್ಮ ಎರಡೂ ರಾಷ್ಟ್ರಗಳ ನಡುವಿನ ವ್ಯಾಪಾರ ಅಡೆತಡೆಗಳನ್ನು ಪರಿಹರಿಸಲು ಮಾತುಕತೆಗಳನ್ನು ಮುಂದುವರಿಸುತ್ತಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ.

ಮುಂಬರುವ ವಾರಗಳಲ್ಲಿ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಮಹಾನ್ ದೇಶಗಳಿಗೆ ಯಶಸ್ವಿ ತೀರ್ಮಾನಕ್ಕೆ ಬರಲು ಯಾವುದೇ ತೊಂದರೆ ಇರುವುದಿಲ್ಲ ಎಂದು ನನಗೆ ಖಚಿತವಾಗಿದೆ! ಎಂದು ಅವರು ಬರೆದಿದ್ದಾರೆ.

ಮಿತ್ರ ಟ್ರಂಪ್ ಸಂದೇಶದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತ ಮತ್ತು ಅಮೆರಿಕ ನಿಕಟ ಸ್ನೇಹಿತರು ಮತ್ತು ನೈಸರ್ಗಿಕ ಪಾಲುದಾರರು. ನಮ್ಮ ವ್ಯಾಪಾರ ಮಾತುಕತೆಗಳು ಭಾರತ-ಅಮೆರಿಕ ಪಾಲುದಾರಿಕೆಯ ಅಪರಿಮಿತ ಸಾಮರ್ಥ್ಯವನ್ನು ಅನ್ಲಾಕ್ ಮಾಡಲು ದಾರಿ ಮಾಡಿಕೊಡುತ್ತವೆ ಎಂದು ನನಗೆ ವಿಶ್ವಾಸವಿದೆ.

ನಮ್ಮ ತಂಡಗಳು ಈ ಚರ್ಚೆಗಳನ್ನು ಆದಷ್ಟು ಬೇಗ ಮುಗಿಸಲು ಕೆಲಸ ಮಾಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ನಮ್ಮ ಎರಡೂ ಜನರಿಗೆ ಉಜ್ವಲ, ಹೆಚ್ಚು ಸಮೃದ್ಧ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.

ಅಮೇರಿಕಾ ಅಧ್ಯಕ್ಷ ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟ್ರಂಪ್ ಪರವಾಗಿ ನಿಂತಿದ್ದರು. ಆದರೆ ಟ್ರಂಪ್ ಅಧ್ಯಕ್ಷರಾದ ಬಳಿಕ ಭಾರತದ ಮೇಲಿನ ನಿಲುವು ಬದಲಾಗಿ ನಿಯಮ ಮೀರಿ ದೇಶದೊಳಗೆ ಪ್ರವೇಶ ಮಾಡಿದ್ದಾರೆಂದು ಆರೋಪಿಸಿ ಭಾರತೀಯರಿಗೆ ಕೋಳ ತೊಡಿಸಿ ಅಮಾನವೀಯವಾಗಿ ಭಾರತಕ್ಕೆ ಗಡಿ ಪಾರು ಮಾಡಿದರು.

ಇದರ ಬೆನ್ನಲ್ಲೇ ಪಾಕ್ ಉಗ್ರಗಾಮಿಗಳು ಪಹಲ್ಗಾವ್ ನಲ್ಲಿ ನಡೆಸಿದ ಪ್ರವಾಸಿಗರ ಮೇಲೆ ದಾಳಿಗೆ ಉತ್ತರವಾಗಿ ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಅಪರೇಷನ್ ಸಿಂಧೂರ ವಿಚಾರ ಕದನ ವಿರಾಮಕ್ಕೆ ಕಾರಣ ನಾನೇ ಎಂದು ಸತತ 34 ಬಾರಿ ಹೇಳಿಕೆ ನೀಡಿದರು.

ಇದಾದ ಬಳಿಕ ಭಾರತ ರಷ್ಯಾದಿಂದ ಕಡಿಮೆ ಬೆಲೆಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ, ಭಾರತದಿಂದ ಅಮೇರಿಕಾಗೆ ರಪ್ತಾಗುವ ಉತ್ಪನ್ನಗಳಿಗೆ ಆರಂಭಿಕವಾಗಿ ಶೇ.25 ರಷ್ಟು ತೆರಿಗೆ ವಿಧಿಸಿದರು. ಇದಕ್ಕೆ ಭಾರತ ಸೊಪ್ಪುಹಾಕದೇ ಇದ್ದಾಗ ಈ ತೆರಿಗೆ ಬರೆಯನ್ನು ಶೇ.50 ಕ್ಕೆ ಏರಿಸಿದರು. ಇದು ಆರಂಭಿಕವಾಗಿ ಭಾರತದ ಗಾರ್ಮೆಂಟ್ಸ್ ಕ್ಷೇತ್ರದ ಮೇಲೆ ಪರಿಣಾಮ ಬೀರಿದ್ದು, ಕಾರ್ಖಾನೆಗಳು ಬಾಗಿಲು ಮುಚ್ಚುವ ಆತಂಕ ಎದುರಾಗಿದೆ‌.

ಟ್ರಂಪರ ಈ ಎಲ್ಲಾ ವರ್ತನೆ ನಡುವೆಯೇ ಕಳೆದ ವಾರ ಚೀನಾದಲ್ಲಿ ನಡೆದ SCO ಶೃಂಗಸಭೆಯಲ್ಲಿ 7 ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡು ಚೀನಾ,ರಷ್ಯಾ ದೊಂದಿಗೆ ಮಾತುಕತೆ ನಡೆಸಿ ಅಮೇರಿಕಾ ನಿಲುವಿಗೆ ತಿರುಗೇಟು ನೀಡಿದ್ದರು.

ಈಗ ಮತ್ತೆ ಟ್ರಂಪ್ಗೆ ಜ್ಞಾನೋದಯ ಆದಂತೆ ಕಂಡುಬಂದಿದ್ದು, ಮತ್ತೆ ಭಾರತದ ಕಡೆಗೆ ಸ್ನೇಹ ಹಸ್ತ ಚಾಚಿದ್ದಾರೆ, ಇದಕ್ಕೆ ಪ್ರಧಾನಿ ಮೋದಿ ಅವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದು, ಮುಂದಿನ ಬೆಳವಣಿಗೆ ದೇಶದ ಜನತೆ ಕಾದು ನೋಡುತ್ತಿದ್ದಾರೆ. ಆದರೆ ಟ್ರಂಪ್ ಸಂದೇಶವನ್ನು ನೆಟ್ಟಿಗರು ಪ್ರೇಮ ಪತ್ರವೆಂದು ಕಿಚಾಯಿಸುತ್ತಿದ್ದಾರೆ.

ರಾಜಕೀಯ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿ ವಿಸ್ತರಣೆ

ಮೇ 5ರಂದು ಅದಾಲತ್.. ಗ್ರಾ.ಪಂ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ

ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ಏಪ್ರಿಲ್ 18ರಂದು ಹೊರಡಿಸಿರುವ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ (Grama Panchayat member) ಸ್ಥಾನಗಳ ಕರಡು ಪ್ರಕಟಣೆಗೆ ಆಕ್ಷೇಪಣೆ ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ

[ccc_my_favorite_select_button post_id="121469"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ: ವಕೀಲರ ಭವನದಲ್ಲಿ ವಾರ್ಷಿಕ ಕ್ರೀಡಾಕೂಟದ ಪ್ರಶಸ್ತಿ ವಿತರಣೆ..

ದೊಡ್ಡಬಳ್ಳಾಪುರ ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.

[ccc_my_favorite_select_button post_id="121459"]
ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ದೊಡ್ಡಬಳ್ಳಾಪುರ: ಸಿಡಿಲು ಬಡಿದು 2 ಹಸುಗಳ ಸಾವು..!

ಬಿಸಿಲ ಬೇಗೆಯಿಂದ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ಜನತೆ ತತ್ತರಿಸುತ್ತಿರುವ ನಡುವೆಯೇ ಇಂದು ಮಧ್ಯಾಹ್ನದಿಂದ ತಾಲೂಕಿನ ಹಲವೆಡೆ ಮಳೆಯ ಸಿಂಚನವಾಗಿದೆ.

[ccc_my_favorite_select_button post_id="121471"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರು, ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೇಜವಬ್ದಾರಿ ತೋರಿಸುತ್ತಿದ್ದಾರೆ. ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಬ್ಯಾಂಕ್ ಉದ್ಯೋಗಿ ಯುವಕರು ಕೂಡ ಹೆಲ್ಮೆಟ್

[ccc_my_favorite_select_button post_id="121414"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]