ದೊಡ್ಡಬಳ್ಳಾಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಸ್ಥಾಪನೆಯ 100ನೇ ವರ್ಷಾಚರಣೆ ಅಂಗವಾಗಿ ನಾಳೆ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಯಿತು.
ಇಂದು ಸಂಜೆ 5 ಗಂಟೆಗೆ ನಗರದ ಬಯಲು ಬಸವಣ್ಣ ದೇವಾಲಯದಿಂದ ಆರಂಭವಾದ ವಿಜಯದಶಮಿ ಪಥಸಂಚಲನ ಅ.ನ.ಕೃ ವೃತ್ತ, ವೇಣುಗೋಪಾಲ ಸ್ವಾಮಿ ದೇವಸ್ತಾನ ರಸ್ತೆ, ಲಕ್ಷ್ಮೀ ಟಾಕೀಸ್ ರಸ್ತೆ, ಕೋಟೆ ರಸ್ತೆ, ಸ್ವಾಮಿ ವಿವೇಕಾನಂದ ಪುತ್ತಳಿ, ಕಾಳಮ್ಮ ದೇವಸ್ಥಾನ ರಸ್ತೆ, ಮುಗವಳಪ್ಪ ವೃತ್ತ, ಸ್ವಾಮಿ ವಿವೇಕಾನಂದ ರಸ್ತೆ ಮೂಲಕ ಸಾಗಿ 6 ಗಂಟಗೆ ಬಸವಣ್ಣ ದೇವಾಲಯದ ಬಳಿ ಅಂತ್ಯಗೊಂಡಿತು.
ರಸ್ತೆಯ ಉದ್ದಕ್ಕೂ ಪಥಸಂಚಲನದ ಮೇಲೆ ಸಾರ್ವಜನಿಕರು ಹೂವಿನ ಮಳೆ ಸುರಿಸಿದರು. ಅನೇಕ ಕಡೆಗಳಲ್ಲಿ ಮಹಿಳೆಯರು ರಸ್ತೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ್ದರು.
ಗಣ ವೇಷಧಾರಿಯಾಗಿ ಶಾಸಕ ಧೀರಜ್ ಮುನಿರಾಜು
ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಗಣ ವೇಷಧಾರಿಯಾಗಿ ಎಡ, ಬಲ, ಎಡ, ಬಲ ಎನ್ನುತ್ತಾ ಪಥಸಂಚಲನದಲ್ಲಿ ಭಾಗಿಯಾಗಿ ಗಮನ ಸೆಳೆದರು.
ಪಥಸಂಚಲನದಲ್ಲಿ ಸುಮಾರು 600 ಕ್ಕೂ ಹೆಚ್ಚು ಗಣ ವೇಷಧಾರಿಗಳು ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೂಬಸ್ತ್ ಕೈಗೊಂಡಿದ್ದರು.