ಶೀತಗಾಳಿ: ಈ ಮುನ್ನೆಚ್ಚರಿಕೆ ವಹಿಸಲು ಸೂಚನೆ

Doddaballapura reels drizzle, cold winds

ಬೆಂ ಗ್ರಾ ಜಿಲ್ಲೆ: ದೊಡ್ಡಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಪ್ರಸ್ತುತ ಹೆಚ್ಚಾಗಿರುವ ತೀವ್ರ ಶೀತಗಾಳಿ (Cold wave) ಹಿನ್ನೆಲೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ಳನ್ನು ತಡೆಯುವ ಉದ್ದೇಶದಿಂದ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.

ಶೀತ ಅಲೆ/ಗಾಳಿಯಿಂದ ಸುರಕ್ಷತೆ ಪಡೆಯಲು ದಪ್ಪನಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ, ಉಣ್ಣೆಯ ಬಟ್ಟೆಗಳನ್ನು ಧರಿಸಿ.

  • ಕೈ ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿ, ತಲೆಗೆ ಟೋಪಿ/ಮಫ್ಲರ್ ಗಳನ್ನು ಹಾಕಿಕೊಳ್ಳಿ, ಬೆಚ್ಚಗಿನ ಕಾಲುಚೀಲಗಳು ಮತ್ತು ಜಲನಿರೋಧಕ (waterproof) ಶೂಗಳನ್ನು ಬಳಸಿ.
  • ಬಟ್ಟೆ ಒಣಗಿರಬೇಕು. ಬಟ್ಟೆ ಒದ್ದೆಯಾದರೆ (ಬೆವರಿನಿಂದ ಮಳೆಯಿಂದ ಇತ್ಯಾದಿ) ತಕ್ಷಣ ಬದಲಾಯಿಸಿ, ದೇಹವನ್ನು ಹೈಡ್ರೆಟ್ ಆಗಿಡಲು ಬೆಚ್ಚಗಿನ ದ್ರವಗಳನ್ನು (ನೀರು, ಗಿಡಮೂಲಿಕೆ ಚಹಾ ಮತ್ತು ಸೂಪ್ ಇತ್ಯಾದಿ) ನಿಯಮಿತವಾಗಿ ಕುಡಿಯಿರಿ.
  • ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದ ಶಾಖವನ್ನು ಹೆಚ್ಚಿಸಲು ವಿಟಿಮಿನ್-ಸಿ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ.
  • ಸಾಧ್ಯವಾದಷ್ಟು ಮನೆಯೊಳಗ ಇರಿ, ವಿಶೇಷವಾಗಿ ಹೆಚ್ಚು ಚಳಿಯಿರುವ ಸಮಯದಲ್ಲಿ (ಬೆಳಗಿನ ಜಾವ ಮತ್ತು ತಡರಾತ್ರಿ).
  • ದುರ್ಬಲರ ಬಗ್ಗೆ, ಗಮನ ಕೊಡಿ: ವೈದ್ಯರು, ಮಕ್ಕಳು ಮತ್ತು, ಶಿಶುಗಳು ಸಾಕಷ್ಟು ಬೆಚ್ಚಗಿರಲು ವಿಯಮಿತವಾಗಿ ಅವರನ್ನು ಪರಿಶೀಲಿಸಿ.
  • ಹೈಪೋಥರ್ಮಿಯಾ (ನಡುಕ, ಗೊಂದಲ, ತೊದಲುವ ಮಾತು) ಮತ್ತು ಫ್ರಾಸ್ಟ್ ಬೈಟ್ (ನಿಶ್ಲೇಷತೆ, ಬಿಳಿ ಅಥವಾ ಮೇಣದಂತಹ ಚರ್ಮ) ನಂತಹ ಚಳಿ-ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಿ.
  • ಚಳಿ ಮತ್ತು ಒಣಗಾಳಿಯಿಂದ ಚರ್ಮಬಿರುಕು ಬಿಡುವುದನ್ನು ತಡೆಯಲು ಎಣ್ಣೆ, ಪೆಟ್ರೋಲಿಯಂ, ಜೆಲ್ಲಿ ಅಥವಾ ಕ್ರೀಮ್‌ನಿಂದ ನಿಯಮಿತವಾಗಿ ಚರ್ಮವನ್ನು ತೇವಗೊಳಿಸಿ.
  • ದೂರದರ್ಶನ, ರೇಡಿಯೋ ಅಥವಾ ಪತ್ರಿಕೆಗಳ ಮೂಲಕ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ದೈನಂದಿನ ಹವಾಮಾನ ಮಾಹಿತಿಯನ್ನು ನೋಡುತ್ತೀರಿ.

ಶೀತ ಅಲೆ/ಗಾಳಿ ಸಂದರ್ಭದಲ್ಲಿ ಮಾಡಬಾರದ ಕೆಲಸಗಳು

  • ಮದ್ಯಪಾನ ಮಾಡಬೇಡಿ. ಇದು ಬೆಚ್ಚಗಿನ ಭಾವನೆಯನ್ನು ನೀಡುತ್ತದೆ ಎಂಬುದು ಸುಳ್ಳು. ಆದರೆ ವಾಸ್ತವವಾಗಿ ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಕಡಿಮೆ ಮಾಡುತ್ತದೆ, ಹೈಪೋಥರ್ಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ.
  • ನಡುಕವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಮೊದಲ ಚಿಹ್ನೆ. ತಕ್ಷಣ ಮನೆಯೊಳಗೆ ಹೋಗಿ.
  • ಫ್ರಾಸ್ಟ್ ಬೈಟ್ ಅಥವಾ ಚಳಿಯಿಂದ ಮರಗಟ್ಟಿದ ಚರ್ಮದ ಪ್ರದೇಶವನ್ನು ಉಜ್ಜಬೇಡಿ ಅಥವಾ ಮಸಾಜ್ ಮಾಡಬೇಡಿ. ಇದು ತೀವ್ರವಾದ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.
  • ಫ್ರಾಸ್ಟ್ ಬೈಟ್ ಆದ ಚರ್ಮವನ್ನು ಬೆಚ್ಚಗಾಗಿಸಲು ನೇರವಾದ, ತೀವ್ರವಾದ ಶಾಖವನ್ನು (ಹೀಟಿಂಗ್ರಾಡ್, ಬೆಂಕಿ ಅಥವಾ ಬಿಸಿನೀರು) ಬಳಸಬೇಡಿ, ಏಕೆಂದರೆ ನಿಶ್ಲೇಷಗೊಂಡ ಪ್ರದೇಶವು ಸುಲಭವಾಗಿ ಸುಟ್ಟು ಹೋಗಬಹುದು.
  • ಗಾಳಿಯಿಲ್ಲದ ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲು, ಕಟ್ಟಿಗೆ ಅಥವಾ ಕ್ಯಾಂಡಲ್‌ಗಳನ್ನು ಉರಿಸಬೇಡಿ. ಇದು ಮಾರಣಾಂತಿಕ ಕಾರ್ಬನ್ ಅಂಶಕ್ಕೆ ಕಾರಣವಾಗಬಹುದು.
  • ಬೆಂಕಿ ಅಥವಾ ತಾಪನ ಸಾಧನವನ್ನು ಹಾಗಾಗ ಗಮನಿಸುತ್ತಿರಿ.
  • ಹೆಚ್ಚು ದೈಹಿಕ ಶ್ರಮ ಮಾಡಬೇಡಿ (ಉದಾಹರಣೆಗೆ, ತೀವ್ರವಾದ ಹೊರಾಂಗಣ ಕೆಲಸ) ಹೆಚ್ಚು ಬೆವರುವಿಕೆಯು ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡಿ ವೇಗವಾಗಿ ತಣ್ಣಗಾಗಲು ಕಾರಣವಾಗಬಹುದು.

ರಾಜಕೀಯ

ಕಾಂಗ್ರೆಸ್ ಕುಟುಂಬ ಆಧಾರಿತ ಪಕ್ಷ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ಕುಟುಂಬ ಆಧಾರಿತ ಪಕ್ಷ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್ ನಲ್ಲಿ (Congress) ಸೋನಿಯಾ ಗಾಂಧಿ (Soniya Gandhi), ರಾಹುಲ್ ಗಾಂಧಿ, ಪ್ರಿಯಾಕಾಂ ಗಾಂಧಿ (Rahul Gandhi) ಮನಸ್ಸು ಯಾರು ಗೆಲ್ಲುತ್ತಾರೆ ಅವರು ಸಿಎಂ ಆಗುತ್ತಾರೆ. ಇದು ಪ್ರಜಾಪಭುತ್ವದ ವ್ಯವಸ್ಥೆಗೆ ನಾಚಿಗೇಡಿನ ಸಂಗತಿ ಎಂದು

[ccc_my_favorite_select_button post_id="121658"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ವೇಪಿಂಗ್ ಮಾಡಿದ್ದ ರಿಯಾನ್ ಪರಾಗ್ ಕಠಿಣ ಕ್ರಮದಿಂದ ಪಾರು..!

ಮುಲ್ಲನ್‌ಪುರದಲ್ಲಿ ನಡೆದ ಐಪಿಎಲ್ (IPL) ಪಂದ್ಯದ ವೇಳೆ ವ್ಯಾಪಿಂಗ್ ಮಾಡಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಿಯಾನ್ ಪರಾಗ್‌ಗೆ (Riyan Parag) ಪಂದ್ಯ ಶುಲ್ಕದ 25% ದಂಡ ವಿಧಿಸಿದೆ, ರಾಜಸ್ಥಾನ ರಾಯಲ್ಸ್ ನಾಯಕ ಕಠಿಣ

[ccc_my_favorite_select_button post_id="121572"]
ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಪರಾರಿಯಾಗಿದ್ದ ವ್ಯಕ್ತಿ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ಕಾರಿನಲ್ಲಿ ಮಹಿಳೆ ಭಸ್ಮ ಪ್ರಕರಣ.. ಪರಾರಿಯಾಗಿದ್ದ ವ್ಯಕ್ತಿ ಆತ್ಮಹತ್ಯೆ..!

ಜಿಂಕೆಬಚ್ಚಹಳ್ಳಿಯ ಸಮೀಪ ಶನಿವಾರ ಕಾರೊಂದು (Car) ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದು ಅದರೊಳಗೆ ಮಹಿಳೆಯೊಬ್ಬರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದ ಪ್ರಕರಣದಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದ ವ್ಯಕ್ತಿ, ರೈಲಿಗೆ ಸಿಲುಕಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

[ccc_my_favorite_select_button post_id="121661"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]