ದೊಡ್ಡಬಳ್ಳಾಪುರ: ಇಲ್ಲಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಅಡ್ವಾನ್ಸ್ ಕೇಬಲ್ ಟೆಕ್ನಾಲಜಿ ಯೂನಿಟ್-2ರಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಅವಘಡದಿಂದಾಗಿ (Fire accident) ಉಂಟಾಗಿದ್ದ ಬೆಂಕಿಯ ಕೆನ್ನಾಲಿಗೆ ಇಂದು ಬೆಳಗ್ಗೆ 7 ಗಂಟೆಗೆ ನಿಯಂತ್ರಣಕ್ಕೆ ಬಂದಿದೆ.
ರಾತ್ರಿ ಪೂರ 15 ಅಗ್ನಿಶಾಮಕ ವಾಹನಗಳು ಸೇರಿದಂತೆ ಬೆಂಗಳೂರಿನಿಂದ ಎಸ್ಡಿಆರ್ಎಫ್ ಸಹ ಆಗಿಮಿಸಿ, ರಾತ್ರಿ ಪೂರ ಶ್ರಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇಬಲ್ ತಯಾರಿಕಾ ಕೈಗಾರಿಕೆಯ ಸುತ್ತಲೂ ಇತರೆ ಕೈಗಾರಿಕೆಗಳು ಇರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಆತಂಕದ ವಾತಾವರಣ ಮೂಡಿತ್ತು. ಆದರೆ ಇದುವರೆಗೂ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಬೆಂಕಿ ಆಕಸ್ಮಿಕ ನಡೆದಿರುವ ಕೈಗಾರಿಕೆಯ ಸುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿತ್ತು. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ. ಕೇಬಲ್ ತಯಾರಿಕಾ ಕಂಪನಿಗೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಬೆಂಕಿ ಅವಘಡ ಸಂಭವಿಸಿರುವ ಕೈಗಾರಿಕೆಯು ಬೆಂಗಳೂರು ರಾಜ್ಯ ಹೆದ್ದಾರಿಗೆ ಸಮೀಪವೇ ಇರುವುದರಿಂದ ರಸ್ತೆಯಲ್ಲಿ ಟ್ರಾಪಿಕ್ ಜಾಮ್ ಸಹ ಉಂಟಾಗಿತ್ತು.
ಘಟನ ಸ್ಥಳದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಘಟನ ಸ್ಥಳಕ್ಕೆ ತಹಶೀಲ್ದಾರ್ ಮಲ್ಲಪ್ಪ ಕೆ.ಯಗೋಳ ಅವರು ಭೇಟಿ ನೀಡಿ ಮಾಹಿತಿ ಪಡೆದರು.