ತಿರುಪತಿ: ಆಂಧ್ರಪ್ರದೇಶದಲ್ಲಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ತಿರುಪತಿ ತಿರುಮಲದಲ್ಲಿ (Tirupati Tirumala) ಹೊಸದಾಗಿ 120 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಪ್ರಮಾಣದ ಅತ್ಯಾಧುನಿಕ ಶೈಲಿನ ಅನ್ನಪ್ರಸಾದ ಕೇಂದ್ರ ನಿರ್ಮಾಣವಾಗಲಿದೆ.
ಅದಲ್ಲದೇ, ತಾರಿಗೊಂಡ ವೆಂಕಮಾಂಬ ಕೇಂದ್ರ ವನ್ನೂ ಆಧುನೀಕರಣಕ್ಕೆ ಒಳಪಡಿಸಲಾಗಿತ್ತದೆ.
ಪ್ರಸ್ತುತ ತಿರುಮಲದಲ್ಲಿರುವ ಅನ್ನಪ್ರಸಾದ ಕೇಂದ್ರ ಗಳ ಜತೆಗೆ, ಅತ್ಯಾಧುನಿಕ ಅಡುಗೆಮನೆ ಸೌಲಭ್ಯ ಗಳನ್ನು ಹೊಂದಿರುವ, ವಿಶಾಲವಾದ ಊಟದ ಹಜಾರವಿರುವ ಹೈಟೆಕ್ ಅನ್ನಪ್ರಸಾದ ಕೇಂದ್ರ ಭಕ್ತರ ಸೇವೆಗೆ ಲಭ್ಯವಾಗಲಿದೆ. ಇದರಿಂದಾಗಿ ಏಕಕಾಲದಲ್ಲಿ 4 ಸಾವಿರ ಭಕ್ತರಿಗೆ ಅನ್ನ ದಾಸೋಹ ಸೇವೆ ಒದಗಿಸಲು ಸಾಧ್ಯವಾಗಲಿದೆ.
ರಿಲಯನ್ಸ್ ಕಂಪನಿ ಗಳ ಸಮೂಹದ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರು 120 ಕೋಟಿ ರು. ದೇಣಿಗೆ ನೀಡಲಿದ್ದು, ಆ ಹಣದಿಂದಲೇ ನೂತನ ಹೈಟೆಕ್ ಅನ್ನಪ್ರಸಾದ ಕೇಂದ್ರವನ್ನು ನಿರ್ಮಿಸಲಾಗುತ್ತದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ.