ದೊಡ್ಡಬಳ್ಳಾಪುರ: ಹಿಂದೂಗಳ ಹೊಸ ವರ್ಷ ಯುಗಾದಿಗೆ (UGADI) ಕ್ಷಣ ಗಣನೆ ಆರಂಭವಾಗಿದ್ದು, ಮನೆಯ ಸ್ಚಚ್ಚತೆ, ಹೊಸ ಬಟ್ಟೆ ಖರೀದಿ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಅಂತೆಯೇ ಯುಗಾದಿಗೆ ಸ್ವಾಗತ ಕೊರಲು ವರುಣನ (Rain) ಸಿಂಚನ ತಾಲೂಕಿನಲ್ಲಿ ಕಂಡುಬಂದಿದೆ.

ಹೌದು ಕಳೆದ ಕೆಲ ತಿಂಗಳಿಂದ ಕಾಣೆಯಾಗಿದ್ದ ವರುಣ ತಾಲೂಕಿನಲ್ಲಿ ಯುಗಾದಿ ಹಬ್ಬಗಳನ್ನು ಸ್ವಾಗತಿಸಲು ಸಿಂಚನ ಮಾಡಿದ್ದಾನೆ. ಸೋಮವಾರ ರಾತ್ರಿಯಿಂದ ಕಳೆದ ತಾಲೂಕಿನ ಹಲವು ಕಡೆ ಮಳೆಯ ಸಿಂಚನವಾಗುತ್ತಿದೆ.
ಸೋಮವಾರ ರಾತ್ರಿ ಕೆಸ್ತೂರಿನಲ್ಲಿ ಮಳೆಯ ಕಾರಣ ಪೌರಾಣಿಕ ನಟಕ (ಕುರುಕ್ಷೇತ್ರ) ಪ್ರಾರಂಭವಾಗುವ ಮೊದಲೇ ಸ್ಥಗಿತಗೊಂಡದ್ದು, ಕಲಾವಿದರಲ್ಲಿ, ಕಲಾ ಪ್ರೇಮಿಗಳಲ್ಲಿ ಬೇಸರಕ್ಕೆ ಕಾರಣವಾಯಿತು ಎಂದು ನಂಜೇಗೌಡ ತಿಳಿಸಿದ್ದಾರೆ.
ಮತ್ತೊಂದೆಡೆ ಯಲಹಂಕದಲ್ಲಿ ಆಲಿಕಲ್ಲು ಮಳೆಯಾಗಿದ್ದು ವಾಹನ ಸವಾರರು ಪರದಾಡುವಂತಾಯಿತೆಂದು ಗುಂಡಸಂದ್ರ ರಮೇಶ್ ತಿಳಿಸಿದ್ದಾರೆ.
ಇಂದು ಸಂಜೆ 4.30 ರಿಂದ ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಮೋಡಕವಿದ ವಾತಾವರಣ, ಗಾಳಿ ಮಿಶ್ರಿದ ಮಳೆಯಾಗಿದೆ. ಅಲ್ಲದೆ ದೊಡ್ಡಬಳ್ಳಾಪುರ ನಗರದಲ್ಲಿ ಗುಡುಗು ಅರ್ಭಟಿಸುತ್ತಿದೆ.
ಇನ್ನೂ ಬೇಸಿಗೆಯಲ್ಲಿನ ದಿಢೀರ್ ಮಳೆಗೆ ವಾಹನ ಸವಾರರು ಸಿಲುಕಿ ಪರದಾಟ ನಡೆಸುವಂತಾಗಿದ್ದು, ಕೆಲವರು ಮನೆಯ ಮೂಲೆ ಸೇರಿಸಿದ್ದ ಛತ್ರಿಗಳನ್ನು ಹೊರತೆಗೆದಿರುವುದು ಕಂಡುಬಂತು.