
ದೊಡ್ಡಬಳ್ಳಾಪುರ: ತಾಲೂಕಿನ ಹೊಸಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ (Sri Lakshminarasimha Swamy Brahmarathotsava) ನಾಳೆ (ಮೇ.6 ರಂದು) ನಡೆಯಲಿದೆ.
ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಜಾತ್ರಾ ಮಹೋತ್ಸವ ಮೇ.04 ಆರಂಭವಾಗಿ ಮೇ.08ರ ವರೆಗೆ ನಡೆಯಲಿದೆ.
ಐದು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಕಲ್ಯಾಣೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯತ್ತಿದ್ದು, ವಿಶೇಷ ಅಲಂಕಾರ, ಅಭಿಷೇಕ, ಪೂಜೆ, ಆರತಿ ಕಾರ್ಯಕ್ರಮ ನೆರವೇರಿತು.
ನಾಳೆ (ಮೇ.6 ರಂದು) ಶುಭ ಅಭಿಜನ್ ಮುಹೂರ್ತದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ನೆರವೇರಲಿದೆ.
ಇದೇ ದಿನ ರಾತ್ರಿ ಲಕ್ಷ್ಮೀನರಸಿಂಹಸ್ವಾಮಿ ಕಲಾತಂಡದವರಿಂದ ‘ಕುರುಕ್ಷೇತ್ರ’ ಅಥವಾ ‘ಶ್ರೀಕೃಷ್ಣಸಂಧಾನ’ ಎಂಬ ಪೌರಾಣಿಕ ನಾಟಕ ನಡೆಯಲಿದೆ.
ಮೋದಿ, ಶಾ ಶ್ರಮದಿಂದ 2028ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ: ಬಿ.ವೈ. ವಿಜಯೇಂದ್ರ ವಿಶ್ವಾಸ

ದಾವಣಗೆರೆ: ಬಿಜೆಪಿಯ (BJP) ಗತವೈಭವದ ದಿನಗಳು ದಾವಣಗೆರೆಯಲ್ಲಿ ಮರುಕಳಿಸಲಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (B.Y. Vijayendra) ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೋಲಿನ ಪರಾಮರ್ಶೆ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಮನೆಗೆ ಭೇಟಿ ನೀಡಿದ ವಿಜಯೇಂದ್ರ ಅವರು, ಜಿಲ್ಲಾ ಬಿಜೆಪಿ ನಾಯಕರ ಜೊತೆ ದಾವಣಗೆರೆಯಲ್ಲಿ ಪಕ್ಷ ಸಂಘಟನೆ ಚರ್ಚೆ ನಡೆಸಿದರು.
63000 ಮತ ನೀಡಿದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ವಿಜಯೇಂದ್ರರನ್ನು ಬಿಜೆಪಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು. ವಿಜಯೇಂದ್ರರ ಜೊತೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು.
ಸಾಮಾನ್ಯ ಕಾರ್ಯಕರ್ತ ಇಷ್ಟೊಂದು ಮತ ಪಡೆದಿರುವುದು ಸುಲಭ ಅಲ್ಲ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಆತ್ಮವಿಶ್ವಾಸ ತುಂಬಿದರು. ವಿಜಯೇಂದ್ರರು ಸಮಾಧಾನ ಪಡಿಸುವ ವೇಳೆ ಶ್ರೀನಿವಾಸ್ ದಾಸಕರಿಯಪ್ಪ ಭಾವುಕರಾದರು. ಅವರನ್ನು ರಾಜ್ಯಾಧ್ಯಕ್ಷರು ಸಮಾಧಾನಪಡಿಸಿದರು.
ಶ್ರೀನಿವಾಸ್ ಅವರ ಮನೆಯಲ್ಲಿ ವಿಜಯೇಂದ್ರರು ದೋಸೆ ಸವಿದರು. ಉಪಚುನಾವಣೆಯ ಫಲಿತಾಂಶ ನಮ್ಮ ಕಣ್ಣ ಮುಂದೆ ಇದೆ. ಸಾಕಷ್ಟು ನಿರೀಕ್ಷೆಗಳನ್ನು ನಾವು ಇಟ್ಟುಕೊಂಡಿದ್ದೆವು. ಉಪಚುನಾವಣೆ ಎಂದರೆ ಅಡಳಿತ ಪಕ್ಷದ ಪರವಾಗಿ ಇರುತ್ತದೆ. ಸಿಎಂ ಹಾಗೂ ಸಚಿವರು ಬಾಗಲಕೋಟೆ ಯಲ್ಲಿ 15 ದಿನ ಅಲ್ಲೇ ಇದ್ದರು. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗಲೂ ಅದೇ ಆಗಿದೆ ಎಂದು ನುಡಿದರು. ಎರಡು ಕ್ಷೇತ್ರದ ಕಾರ್ಯಕರ್ತರು ಬಿಜೆಪಿ ಗೆಲ್ಲಿಸಲು ಶ್ರಮ ವಹಿಸಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ದಾವಣಗೆರೆ ದಕ್ಷಿಣದ ನಮ್ಮ ಅಭ್ಯರ್ಥಿ ಉತ್ತಮವಾದ ಮತಗಳನ್ನು ಪಡೆದಿದ್ದಾರೆ. ನಾವು 70 ಸಾವಿರಕ್ಕೂ ಹೆಚ್ಚು ಮತಗಳು ಬೀಳುತ್ತವೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ನಮಗೆ ಈ ಬಾರಿ ಅದೃಷ್ಟ ಕೈ ಹಿಡಿಯಲಿಲ್ಲ. ಆದರೆ ಕಾಂಗ್ರೆಸ್ ಹಣದ ಹೊಳೆ ಹರಿಸಿದ ಬಗ್ಗೆ ನಾನೇನು ಮಾತಾಡೋದಿಲ್ಲ. ಅಭ್ಯರ್ಥಿ ಜೊತೆ ಅಕಾಂಕ್ಷಿಗಳು ಕೂಡ ಉತ್ತಮ ಕೆಲಸ ಮಾಡಿದ್ದಾರೆ ಎಂದು ನುಡಿದರು.
ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ಮೋದಿಯವರು, ಅಮಿತ್ ಶಾ ರವರ ಶ್ರಮದಿಂದ ಅಧಿಕಾರಕ್ಕೆ ಬಂದಿದೆ. ಅದೇ ರೀತಿ 2028 ಕ್ಕೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.
ಯಡಿಯೂರಪ್ಪ ನವರು ಇಂತಹ ಸಾಕಷ್ಟು ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸಿದ್ದಾರೆ. ಅಂತವರ ಮಗನಾಗಿ ಅದೇ ದಿಟ್ಟತನವನ್ನು ಪ್ರದರ್ಶನ ಮಾಡುತ್ತೇನೆ. ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮ ವಹಿಸುತ್ತೇವೆ. ಉಪಚುನಾವಣೆಯಲ್ಲಿ ನಮ್ಮ ನಾಯಕರು ಕೂಡ ಉತ್ತಮ ಶ್ರಮವಹಿಸಿದ್ದಾರೆ. ಈ ಗೃಹಲಕ್ಷ್ಮಿ ಚುನಾವಣಾ ಲಕ್ಷ್ಮೀಯಾಗಿದ್ದಾಳೆ.
ನಾಲ್ಕೈದು ತಿಂಗಳ ಕಂತು ಉಪಚುನಾವಣೆ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಾರೆ. ಈಗ ಮುಂದೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಮಾಡುತ್ತಾರೆ. ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾರೆ. ನಾವೇನು ಮಾಡೋಕೆ ಅಗೋಲ್ಲ ಎಂದು ತಿಳಿಸಿದರು.

