
ದೊಡ್ಡಬಳ್ಳಾಪುರ (Doddaballapur): ನಿರ್ಜನ ಪ್ರದೇಶದಲ್ಲಿದ್ದ ಕಾರಿನಲ್ಲಿ (Car) ಸುಟ್ಟುಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪತ್ತೆಹಚ್ಚಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ (SP ) ಶ್ಲಾಘಿಸಿದ್ದು, ಅಭಿನಂದನೆ ಪತ್ರ ಹಾಗೂ ನಗದು ಪುರಸ್ಕಾರ ನೀಡುವುದಾಗಿ ಹೇಳಿದ್ದಾರೆ.
ಈ ಕುರಿತು ಹೊಸಕೋಟೆಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚನಹಳ್ಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಏಪ್ರಿಲ್ 2ರಂದು ಘಟನೆ ನಡೆದಿದ್ದು, ಪ್ರಕರಣ ನಡೆದ ಕೆಲವೇ ತಾಸಿನಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇಂಚಿಂಚು ಮಾಹಿತಿಯನ್ನ ಹೊರಗೆ ತಂದಿದ್ದಾರೆ.
ಅಂದಹಾಗೇ ಘಟನೆಯಲ್ಲಿ ಸುಟ್ಟುಕರಕಲಾದ ಸ್ಥಿತಿಯಲ್ಲಿ ಸಿಕ್ಕ ಮಹಿಳೆಯನ್ನು ಸರೋಜಾ ಎನ್ನಲಾಗಿದ್ದು, ಈಕೆ ದೇವನಹಳ್ಳಿಯ ಪಿಯು ಕಾಲೇಜ್ ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದರಂತೆ.
ದೇವನಹಳ್ಳಿಯಲ್ಲಿ ವಾಸವಾಗಿದ್ದ ಸರೋಜಾಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ, ಗಂಡ ಏರ್ ಪೋರ್ಟ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಮೇ 2ರಂದು ಅನಾರೋಗ್ಯವೆಂದು ಆಸ್ಪತ್ರೆಗೆ ಹೋಗಬೇಕೆಂದು ಗಂಡನಿಗೆ ನೆಪ ಹೇಳಿ ಬಸ್ ನಿಲ್ದಾಣಕ್ಕೆ ಡ್ರಾಪ್ ಹಾಕಿಸಿ ಕೊಂಡಿದ್ದರಂತೆ. ಮಾರ್ಗ ಮಧ್ಯದಲ್ಲಿ ಇಳಿದ ಸರೋಜಾ ಆಸ್ಪತ್ರೆಗೆ ಹೋಗುವ ಬದಲಿಗೆ ಗೆಳೆಯನೊಂದಿಗೆ ಕಾರಿನಲ್ಲಿ ದೊಡ್ಡಬಳ್ಳಾಪುರದತ್ತ ಪ್ರಯಾಣ ಬೆಳೆಸಿದ್ದಾಳೆ.
ಗೆಳೆಯ ರಾಮಾಂಜಿನಪ್ಪ ಯಲಹಂಕ ತಾಲೂಕಿನ ಮಾರಸಂದ್ರ ಗ್ರಾಮದ ನಿವಾಸಿ, ಈತನಿಗೂ ಮದುವೆಯಾಗಿ ಒಬ್ಬ ಮಗಳಿದ್ದಾಳೆ, ಗಂಡ ಹೆಂಡತಿ ನಡುವೆ ಹೊಂದಾಣಿಕೆ ಇಲ್ಲದ ಕಾರಣದಿಂದ ಇಬ್ಬರು ಪ್ರತ್ಯೇಕವಾಗಿದ್ದರಂತೆ.
ಈ ಸಮಯದಲ್ಲಿ ರಾಮಾಂಜಿನಪ್ಪ ಸರೋಜಾಳೊಂದಿಗೆ ಗೆಳೆತನ ಬೆಳೆಸಿದ್ದು, ಇದೇ ಸಂಬಂದ ಮುಂದೆ ಇಬ್ಬರ ಅನೈತಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದೆ.
ಇನ್ನೂ ಘಟನೆಯ ದಿನ ಕಾರಿನಲ್ಲಿ ಹೊರಟ ಇಬ್ಬರು ಮಾರಸಂದ್ರ ಮಾರ್ಗವಾಗಿ ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಜಿಂಕೆಬಚ್ಚನಹಳ್ಳಿ ನಿರ್ಜನ ಪ್ರದೇಶಕ್ಕೆ ಬಂದಿದ್ದಾರೆ.
ಇಲ್ಲಿ ಕಾರಿಗೆ ಬೆಂಕಿ ಹಚ್ಚಿದ್ದು. ಆತ ತಪ್ಪಿಸಿಕೊಂಡು ಬಂದಿದ್ದಾನೆ. ಘಟನೆಯಲ್ಲಿ ಸುಜಾತ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿದ್ದಾರೆ. ಈ ವೇಳೆ ರಾಮಾಂಜಿನಪ್ಪ ಅವರ ಬಟ್ಟೆಗೂ ಬೆಂಕಿ ತಗುಲಿದೆ, ದೂರದಲ್ಲಿ ಶರ್ಟ್, ಮೊಬೈಲ್ ಬಿಟ್ಟು ಪರಾರಿಯಾಗಿದ್ದಾನೆ.
ರಾಮಾಂಜಿನಪ್ಪ ತಂದ ಕಾರು ಪಕ್ಕದ ಮನೆಯ ಸುರೇಶ್ ಎಂಬುವರಿಗೆ ಸೇರಿದ್ದು, ಆರೋಗ್ಯ ಸರಿ ಇಲ್ಲ ಆಸ್ಪತ್ರೆಗೆ ಹೋಗ್ಬೇಕೆಂದು ಕಾರನ್ನ ತೆಗೆದುಕೊಂಡು ಬಂದಿದ್ದ ರಾಮಾಂಜಿನಪ್ಪ. ಕಾರಿಗೆ ಬೆಂಕಿ ಬಿದ್ದ ತಕ್ಷಣವೇ ಕಾರು ಮಾಲೀಕ ಸುರೇಶ್ ಮೊಬೈಲ್ ಗೆ ಕಾರಿಗೆ ಬೆಂಕಿ ತಗುಲಿದೆ ಎಂದು ಎಂದು ಲೊಕೇಶನ್ ಸಹಿತ ಜಿಪಿಎಸ್ ಸಂದೇಶ ಬಂದಿದೆ.
ಸ್ಥಳಕ್ಕೆ ಬಂದ ಸುರೇಶ್ ಪರಿಶೀಲನೆ ಮಾಡಿದ್ದಾಗ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರು ಕಾರಿನಲ್ಲಿ ಮಹಿಳೆ ಶವ ಪತ್ತೆಯಾಗಿದೆ. ಸುರೇಶ್ ಸಹ ಕಾರು ದುರುಪಯೋಗ ಪಡಿಸಿಕೊಂಡಿರುವ ಬಗ್ಗೆ ರಾಮಾಂಜಿಮಪ್ಪ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.
ಇದೇ ವೇಳೆ ಪೊಲೀಸರು ರಾಮಾಂಜಿನಪ್ಪ ಬಂಧನಕ್ಕೆ ಬೆನ್ನತ್ತಿದ್ದಾರೆ. ಆದರೆ ಅದೇ ದಿನ ಮಧ್ಯರಾತ್ರಿ ಸುಮಾರಿಗೆ ಬಿಡದಿ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ, ಸ್ಥಳದಲ್ಲಿ ವೊಟರ್ ಐಡಿ ಪತ್ತೆಯಾಗಿದ್ದು, ರೈಲ್ವೆ ಪೊಲೀಸರು ದೊಡ್ಡಬಳ್ಳಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇಬ್ಬರ ಸಂಬಂಧದಲ್ಲಿ ಬಿರುಕು ಬಂದ ಕಾರಣ ಉಪನ್ಯಾಸಕಿ ಸುಜಾತ ಅವರ ಹತ್ಯೆಯನ್ನು ರಾಮಾಂಜಿನಪ್ಪ ಮಾಡಿರುವುದು ಗೊತ್ತಾಗಿದ್ದು, ಪ್ರಕರಣ ತನಿಖೆ ಮುಂದುವರಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ತನಿಖಾಧಿಕಾರಿ ಹಾಗೂ ಸಿಬ್ಬಂದಿಗಳ ಅಭಿನಂದನೆ ಪತ್ರ ಹಾಗೂ ನಗದು ಪುರಸ್ಕಾರ ನೀಡುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ ಹೇಳಿದ್ದಾರೆ.

