ದೊಡ್ಡಬಳ್ಳಾಪುರ: ತಾಲೂಕಿನ 159 ಕಿಮೀ ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಸ್ತೆಗಳನ್ನು, ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ತಾಲೂಕಿನ ಜನತೆಗೆ ಸಿಹಿ ಸುದ್ದಿಯನ್ನು ನೀಡಿದೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ನಗರದ ರಂಗಪ್ಪ ಸರ್ಕಲ್ ಮಾರ್ಗವಾಗಿ ಮೇಘಾಂಜಲಿ ಛತ್ರದವರೆಗೆ ರಸ್ತೆ ಡಾಂಬರೀಕರಣ. ಹೈಟೆಕ್ ಪುಟ್ ಪಾತ್ ಕಾಮಗಾರಿ ಶಂಕುಸ್ಥಾಪನೆ ಹಾಗೂ ಪ್ರವಾಸಿ ಮಂದಿರ ವೃತ್ತದಿಂದ ರಾಜಘಟ್ಟ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ನೆರವೇರಿಸಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ ರೂ 8ಕೋಟಿ ಅನುಧಾನದಲ್ಲಿ ರಸ್ತೆ ಅಗಲಿಕರಣವನ್ನು ನಡೆಸಲು ಈ ಶಂಕುಸ್ಥಾಪನೆ ನೆರವೇರಿಸಿದ್ದು,ಮುಂದಿನ ಎರಡು ತಿಂಗಳ ಒಳಗೆ ಈ ಕಾಮಗಾರಿ ಪೂರ್ಣಗೊಳ್ಳಲಿದೆ.ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವ ಜವಬ್ದಾರಿ ಗುತ್ತಿಗೆದಾರರದ್ದಾಗಿದ್ದು,ಗುಣಮಟ್ಟದಲ್ಲಿ ರಾಜಿ ಇಲ್ಲವಾಗಿದೆ ಎಂದರು.
ಅಲ್ಲದೆ ತಾಲೂಕಿನ 159 ಕಿಮೀ ಗ್ರಾಮೀಣ ಅಭಿವೃದ್ಧಿ ಇಲಾಖೆಯ ರಸ್ತೆಗಳನ್ನು ರಾಜ್ಯ ಸರ್ಕಾರ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ತಾಲೂಕಿನ ಜನತೆಗೆ ಸಿಹಿ ಸುದ್ದಿಯನ್ನು ನೀಡಿದ್ದು ಲೋಕೋಪಯೋಗಿ ಇಲಾಖೆ ಅಭಿವೃದ್ಧಿ ಪಡಿಸಲಿದೆ. ಮೊದಲ ಹಂತವಾಗಿ ಮಾದಗೊಂಡನಹಳ್ಳಿ ಡಿಗ್ರಿ ಕಾಲೇಜು ರಸ್ತೆ ಹಾಗೂ ಅಪಕಾರನಹಳ್ಳಿ ರಸ್ತೆಗೆ ಶಂಕುಸ್ಥಾಪನೆಯನ್ನು ಶನಿವಾರ ನಡೆಸಲಾಗುವುದೆಂದರು.
ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಮಾತನಾಡಿ, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಗೆ ಮೇಲ್ದರ್ಜೆಯಾಗಿರುವ 159ಕಿಮಿ ರಸ್ತೆಗಳು ರಾಜ್ಯದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಚ್ಚಿನ ಕಿಲೋಮೀಟರ್ ಪಡೆದಿರುವುದು ದಾಖಲೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ರತ್ನಮ್ಮ ಜಯರಾಂ, ಸದಸ್ಯ ಹಸನ್ ಘಟ್ಟ ರವಿ, ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್,ಮುಖಂಡರಾದ ತಿ.ರಂಗರಾಜು, ರೇವತಿ ಅನಂತರಾಮ್, ಹೇಮಂತ್ ರಾಜ್, ಬಿ.ಹೆಚ್.ಕೆಂಪಣ್ಣ, ಅಂಜಮೂರ್ತಿ, ರಾಘವೇಂದ್ರ, ಶಿವು, ಆದಿತ್ಯ ನಾಗೇಶ್, ಮುನಿರಾಜು, ಪು.ಮಹೃಶ್, ಭೀಮಣ್ಣ, ಅಪ್ಪಿ ವೆಂಕಟೇಶ್, ರಾಮಣ್ಣ, ಕಿರಣ್ ಮತ್ತಿತರಿದ್ದರು.

