ದೊಡ್ಡಬಳ್ಳಾಪುರ: ವೈದ್ಯಕೀಯ ಸಿಬ್ಬಂದಿ ಮುಷ್ಕರದ ಹಿನ್ನೆಲೆ ನಿಲ್ಲಿಸಲಾಗಿದ್ದ ಕರೊನಾ ಬುಲೆಟಿನ್ ಸರ್ಕಾರ ಹಾಗೂ ವೈದ್ಯಕೀಯ ಸಂಘದ ನಡುವಿನ ಸಂಧಾನದ ನಂತರ ಮತ್ತೆ ದೊರೆತಿದೆ.
ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ಮಾಹಿತಿಯಂತೆ ತಾಲೂಕಿನ 59 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಶುಕ್ರವಾರ ಸಂಜೆಯವರಗೆ, ದೊಡ್ಡಬಳ್ಳಾಪುರ ತಾಲೂಕಿನ 48 ಪುರುಷರು ಹಾಗೂ11 ಮಹಿಳೆಯರು ಸೇರಿ, 59 ಜನರಿಗೆ ಸೋಂಕು ದೃಢಪಟ್ಟಿದ್ದು,200ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ ದೇವರಾಜ ನಗರದ 80ವರ್ಷದ ಮಹಿಳೆ ಹಾಗೂ ತೂಬಗೆರೆ ಪೇಟೆಯ 50ವರ್ಷದ ಪುರುಷ, ದೊಡ್ಡಬಳ್ಳಾಪುರದ ಕೊವಿಡ್-19 ಸೆಂಟರ್ನಲ್ಲಿ ದಾಖಲಾಗಿದ್ದ ನಗರದ ಚೈತನ್ಯನಗರದ 64 ವರ್ಷದ ಪುರುಷ, ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಚ್ಚಪ್ಪನ ಪೇಟೆಯ 50ವರ್ಷದ ಮಹಿಳೆ, ಕರೇನಹಳ್ಳಿಯ 74 ವರ್ಷದ ಪುರುಷ ಸಾವನ್ನಪ್ಪಿದ್ದಾರೆ.
ಪ್ರಸ್ತುತ ತಾಲೂಕಿನಲ್ಲಿ 1910 ಮಂದಿಗೆ ಕರೊನಾ ಸೋಂಕು ತಗುಲಿದ್ದು, 1310 ಮಂದಿ ಗುಣಮುಖರಾಗಿದ್ದರೆ 67 ಮಂದಿ ಸಾವನಪ್ಪಿದ್ದಾರೆ.

