ದೊಡ್ಡಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆ( ಪ್ರವೀಣ್ ಕುಮಾರ್ ಶೆಟ್ಟಿ) ಬಣದ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ತಮ್ಮ ಜನ್ಮದಿನಾಚರಣೆಯನ್ನು ವೃದ್ಧರಿಗೆ ಹಣ್ಣು,ಬ್ರೆಡ್, ಬಿಸ್ಕೆಟ್ ನೀಡುವ ಮೂಲಕ ಆಚರಿಸಿಕೊಂಡರು.
ತಾಲೂಕಿನ ತೂಬಗೆರೆಯ ಆಂಜಿನಮ್ಮ ಆರ್.ಎಲ್.ಜಾಲಪ್ಪ ಹೋಲ್ಡ್ ಏಜ್ ಹೋಂಗೆ ಭೇಟಿ ನೀಡಿದ ಅವರು. ವೃದ್ಧರೊಂದಿಗೆ ತಮ್ಮ 59ನೇ ವರ್ಷದ ಜನ್ಮದಿನದವನ್ನು ಆಚರಿಸಿದರು.
ಈ ವೇಳೆ ರಾಜ್ಯಾ ಉಪಾಧ್ಯಕ್ಷರಾದ ಶಿವರಾಜ್ ಗೌಡ,ಮಂಜೇಶ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಶೆಟ್ಟಿ, ಕಾರ್ಯದರ್ಶಿ ರಾಜಘಟ್ಟ ರವಿ, ಆರ್.ಎಲ್.ಜಾಲಪ್ಪ ಶಿಕ್ಷಣ ಸಮೂಹ ಸಂಸ್ಥೆಗಳ ಸಿಇಒ ನಾಗೇಂದ್ರಸ್ವಾಮಿ, ತಾಲೂಕು ಅಧ್ಯಕ್ಷ ಹಮಾನ್ ವೆಂಕಟೇಶ್, ರಾಜ್ಯ ಸಂಚಾಲಕ ಲೋಕೇಶ್, ಮುಖಂಡರಾದ ಮಿರಾಕಲ್ ಮಂಜು, ತಾಲೂಕು ಪ್ರಧಾನ ಕಾರ್ಯದರ್ಶಿ ಎಸ್.ಎಲ್.ಎನ್.ವೇಣು. ಉಪಾಧ್ಯಕ್ಷ ಆನಂದ್ ಕುಮಾರ್, ಕಾರ್ಯದರ್ಶಿ ಜೋಗಹಳ್ಳಿ ಅಮ್ಮು, ಹೆಗ್ಗಡಿಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ್ ಮತ್ತಿತರಿದ್ದರು.

