ದೊಡ್ಡಬಳ್ಳಾಪುರ: ಗಾಳಿಪಟ ಕಲಾಸಂಘದ ಸಂಸ್ಥಾಪಕ ಉಪಾಧ್ಯಕ್ಷ ಹಾಗೂ ಹಿರಿಯ ಮೂಡಲಪಾಯ ಯಕ್ಷಗಾನ ಕಲಾವಿದ ಎಲ್.ನಾರಾಯಣ್(58) ಅನಾರೋಗ್ಯದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರರನ್ನು ಅಗಲಿದ್ದಾರೆ.
ಯಕ್ಷಗಾನ ಕಲಾವಿದರಾಗಿದ್ದ ಇವರು ಸ್ತ್ರೀ ಪಾತ್ರಗಳಿಗೆ ಖ್ಯಾತರು, ಹಾಗೂ ಪ್ರಸಾದನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮೃತರ ಅಂತ್ಯಕ್ರಿಯೆ ಎಲ್ಐಸಿ ಕಚೇರಿ ಸಮೀಪದಲ್ಲಿನ ರುದ್ರ ಭೂಮಿಯಲ್ಲಿ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

