ನೆಲಮಂಗಲ: ಅಬಕಾರಿ ಅಧಿಕಾರಿಗಳು ನೆಲಮಂಗಲ ತಾಲ್ಲೂಕಿನ ಹಂಚೀಪುರ ಸಮೀಪ ರಸ್ತೆಗಾವಲು ನಡೆಸುತ್ತಿರುವ ಸಮಯದಲ್ಲಿ ವಾಹನ ಸಂಖ್ಯೆ ಕೆಎ-04-ಝಡ್-8884 ವಾಹನವನ್ನು ತಡೆದು ಪರಿಶೀಲಿಸಿದಾಗ, ವಾಹನದಲ್ಲಿ 600 ಗ್ರಾಂ ಒಣ ಗಾಂಜಾ ಪತ್ತೆಯಾಗಿದ್ದು, ವಾಹನದಲ್ಲಿದ್ದಾ ಸೈಯದ್ ಮುನೀರ್ ಎಂಬ 40 ವರ್ಷದ ವ್ಯಕ್ತಿಯನ್ನು ಎನ್‍ಡಿಪಿಎಸ್ ಕಾಯಿದೆ ಅಡಿಯಲ್ಲಿ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗಾಂಜಾ ಸಾಗಿಸುತ್ತಿದ್ದ ವಾಹನ ಮತ್ತು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕ ಗಿರೀಶ್.ಎ.ವಿ, ನೆಲಮಂಗಲ ಉಪ ವಿಭಾಗ, ಅಬಕಾರಿ ನಿರೀಕ್ಷಕ ಡಿ.ಕೃಷ್ಣಮೂರ್ತಿ, ಮತ್ತು ನೆಲಮಂಗಲ ವಲಯದ ಅಬಕಾರಿ ಉಪ ನಿರೀಕ್ಷಕ ಅಶೋಕ್‍ಕುಮಾರ್ ಪ್ರಕರಣವನ್ನು ದಾಖಲಿಸಿರುತ್ತಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ ತಾಲ್ಲೂಕುಗಳಲ್ಲಿ ಗಾಂಜಾ ಬೆಳೆ ಮಾರಾಟ, ಸಾಗಾಣಿಕೆ ಬಗ್ಗೆ ಯಾವುದೇ ಮಾಹಿತಿ ಹಾಗೂ ದೂರು ನೀಡಲು ಸಾರ್ವಜನಿಕರು
ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗಿರೀಶ್.ಎ.ವಿ ( ಮೊಬೈಲ್ ಸಂಖ್ಯೆ: 9449597036), ನೆಲಮಂಗಲ ವಲಯದ ಅಬಕಾರಿ ನಿರೀಕ್ಷಕರು ಡಿ.ಕೃಷ್ಣಮೂರ್ತಿ (ಮೊಬೈಲ್ ಸಂಖ್ಯೆ:
9449597271), ದೊಡ್ಡಬಳ್ಳಾಪುರ ವಲಯದ ಅಬಕಾರಿ ನಿರೀಕ್ಷಕ ಎಸ್.ಎಮ್.ಪಾಟೀಲ್ (ಮೊಬೈಲ್ ಸಂಖ್ಯೆ:9449597269), ದೇವನಹಳ್ಳಿ ವಲಯದ ಅಬಕಾರಿ ನಿರೀಕ್ಷಕ ಮಂಜುಳಾ.ವಿ.ಎನ್ (ಮೊಬೈಲ್ ಸಂಖ್ಯೆ: 9449597268), ಹೊಸಕೋಟೆ ವಲಯದ ಅಬಕಾರಿ ನಿರೀಕ್ಷಕ ರಾಜಶೇಖರ್.ಆರ್.ಕರಡಕಲ್ (ಮೊಬೈಲ್ ಸಂಖ್ಯೆ: 9449597270) ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ
ಅಬಕಾರಿ ಉಪ ಆಯುಕ್ತ ಎಂ.ರವೀಂದ್ರ ( ಮೊಬೈಲ್ ಸಂಖ್ಯೆ: 9449597029) ಸಂಪರ್ಕಿಸಬಹುದಾಗಿದೆ.

