ದೊಡ್ಡಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ್ದ,ದರ್ಗಾಜೋಗಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ, ಹಲವು ಮಹತ್ವದ ತಿರುವುಗಳ ನಂತರ ಫಲಿತಾಂಶ ಹೊರಬಿದ್ದಿದೆ.
ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ನಾಗೇಶ್ ರಾಜೀನಾಮೆಯಿಂದ ತೆರವಾಗಿದ್ದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ. ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಜೆ.ಎಸ್.ನಾಗಭೂಷಣ್ ಹಾಗೂ ಎನ್.ಎಸ್.ನಟರಾಜ್ ನಡುವೆ ಸ್ಪರ್ದೆ ಏರ್ಪಟ್ಟಿತ್ತು.
ಕಾಂಗ್ರೆಸ್ ಹೈಕಮಾಂಡ್ ಎನ್.ಎಸ್.ನಟರಾಜ್ ಅವರು ಅಭ್ಯರ್ಥಿ ಎಂದೆ ಸೂಚನೆ ನೀಡಿತ್ತು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ನಾಗೇಶ್ ಬೆಂಬಲಿತರು ಹೈಕಮಾಂಡ್ ನಿಲುವಿಗೆ ಸಡ್ಡು ಒಡೆದು ಜೆಡಿಎಸ್, ಬಿಜೆಪಿ ಸದಸ್ಯರ ನೆರವಿನೊಂದಿಗೆ ಜೆ.ಎಸ್.ನಾಗಭೂಷಣ್ ಅವರನ್ನು ಅಧ್ಯಕ್ಷರನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್ ಸಮ್ಮುಖದಲ್ಲಿ 24 ಸದಸ್ಯರ ಬಲದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ. ಜೆ.ಎಸ್.ನಾಗಭೂಷಣ್, ಎನ್.ಎಸ್.ನಟರಾಜ್ ಹಾಗೂ ಶಶಿಕಲಾ ನಾಗರಾಜ್ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಸಮಯದಲ್ಲಿ ಶಶಿಕಲಾನಾಗರಾಜ್ ನಾಮಪತ್ರ ಹಿಂಪಡೆದ ಕಾರಣ ನಂತರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಜೆ.ಎಸ್.ನಾಗಭೂಷಣ್ 19 ಹಾಗೂ ಎನ್.ಎಸ್.ನಟರಾಜ್ 5 ಮತಗಳನ್ನು ಪಡೆದಿದ್ದು.ಚುನಾವಣಾಧಿಕಾರಿ ಶ್ರೀನಿವಾಸ್ ಕಾಂಗ್ರೆಸ್ ಬೆಂಬಲಿತ ಸದಸ್ಯ ಜೆ.ಎಸ್.ನಾಗಭೂಷಣ್ ಅವರು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ನೂತನವಾಗಿ ಅಧ್ಯಕ್ಷರಾದ ಜೆ.ಎಸ್.ನಾಗಭೂಷಣ್ ಅವರನ್ನು ಮಾಜಿ ಅಧ್ಯಕ್ಷ ನಾಗೇಶ್, ಮುಖಂಡರಾದ ಮಲ್ಲಣ್ಣ, ಎ.ವಿ.ಚಂದ್ರಶೇಖರ್, ಜೆ.ಕುಮಾರ್, ಪ್ರಭಾರ ಅಧ್ಯಕ್ಷರಾಗಿದ್ದ ಡಿ.ಎನ್.ನಂಜುಂಡಪ್ಪ, ಸದಸ್ಯರಾದ ರಾಮಕೃಷ್ಣ, ರಂಗನಾಥ್, ಶೋಭಬಾಯಿ ಪ್ರಕಾಶ್ ರಾವ್, ಲೀಲಾವತಿ, ಶಶಿಕಲಾ ನಾಗರಾಜ್ ಮತ್ತಿತರಿದ್ದರು.

