ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಸಾವನಪ್ಪಿದ ನಾಲ್ಕು ಮಂದಿಯ ವಿವರ ಹರಿತಲೇಖನಿಗೆ ಲಭ್ಯವಾಗಿದೆ.
ಸೋಂಕಿಗೆ ಒಳಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ನಗರ ವ್ಯಾಪ್ತಿಯ ತೇರಿನಬೀದಿಯ 56 ವರ್ಷದ ಪುರುಷ, ತೂಬಗೆರೆಪೇಟೆಯ 56 ವರ್ಷದ ಪುರುಷ, ವಿದ್ಯಾನಗರದ 40 ವರ್ಷದ ಮಹಿಳೆ ಹಾಗೂ ಚಿಕ್ಕಪೇಟೆಯ 62 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ತಾಲೂಕಿನಲ್ಲಿ ಕರೊನಾ ಕಾರಣ ಸಾವನಪ್ಪಿರುವ ಸಂಖ್ಯೆ 75 ಕ್ಕೆ ಏರಿಕೆಯಾಗಿದ್ದು, ಸೋಂಕಿತರ ಸಂಖ್ಯೆ 2072ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

