ಬೆಂಗಳೂರು: ಖ್ಯಾತ ಪೋಷಕ ನಟ ರಾಕ್ಲೈನ್ ಸುಧಾಕರ್ ಇಂದು ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದ ವೇಳೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೃತ ಸುಧಾಕರ್, ಪಂಚರಂಗಿ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ರು. ಡಕೊಟಾ, ಪರಮಾತ್ಮ, ಡ್ರಾಮಾ, ಟೋಪಿವಾಲಾ, ಝೂಮ್, ವಾಸ್ತು ಪ್ರಕಾರ, ಲವ್ ಇನ್ ಮಂಡ್ಯ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ಮುಕುಂದ ಮುರಾರಿ, ಪ್ರೇಮಗೀಮಾ ಜಾನೇ ದೋ, ಕೆಮಿಸ್ಟ್ರಿ ವಿತ್ ಕರಿಯಪ್ಪ, ಉಡುಂಬ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ನಟ ದುನಿಯಾ ವಿಜಿ ಸೇರಿದಂತೆ ಹಲವು ನಟರು ಸುಧಾಕರ್ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.

