ದೊಡ್ಡಬಳ್ಳಾಪುರ: ಹಿಂದಿ ದಿವಸ್ ಎಂದರೆ ರೊಚ್ಚಿಗೆದ್ದವರಿಗೆ, ರಾಜ್ಯದ ಜನತೆಯ ಜೀವದ ಮಾಹಿತಿ ನೀಡಬೇಕಾದ ಆರೋಗ್ಯ ಇಲಾಖೆಯ ಕರೊನಾ ಬುಲೆಟಿನ್ ವರದಿ ಕೇವಲ ಆಂಗ್ಲ ಭಾಷೆಗೆ ಹೆಚ್ಚಿನ ಮಹತ್ವ ನೀಡುತ್ತಿರುವುದು ಕಾಣದಾಗಿದೆ.
ಕಳೆದ ಹಲವು ತಿಂಗಳಿಂದ ಕೋವಿಡ್-19 ವರದಿ ಆಂಗ್ಲ ಭಾಷೆಯಲ್ಲಿ ತ್ವರಿತವಾಗಿ ಲಭ್ಯವಾಗುತ್ತಿದ್ದು, ಕನ್ನಡ ಭಾಷೆಯಲ್ಲಿ ವಿಳಂಭವಾಗುತ್ತಿದೆ.
ವಿಪರ್ಯಾಸವೆಂದರೆ ಇಂದಿನ ವರದಿ ಕೇವಲ ಅಂಗ್ಲ ಭಾಷೆಗೆ ಮಾತ್ರ ಸೀಮಿತಾಗಿದ್ದು, ಹರಿತಲೇಖನಿ ಆರೋಗ್ಯ ಸಚಿವ ಶ್ರೀರಾಮುಲು ಅವರ ಫೇಸ್ಬುಕ್ ಖಾತೆಯಲ್ಲಿ ಪ್ರಕಟವಾದ ಕನ್ನಡ ಭಾಷೆಯ ವರದಿ ಮುಖಪುಟದಲ್ಲಿ ಪ್ರಕಟಿಸಿದೆ.

