ದೊಡ್ಡಬಳ್ಳಾಪುರ: ಭೂ ಸುಧಾರಣಾ, ಕಾರ್ಮಿಕ ಮತ್ತು ಎಪಿಎಂಸಿ ಕಾಯ್ದೆ ವಿರೋಧಿಸಿ ಇಂದು ರೈತಪರ ಸಂಘಟನೆಗಳು ಕರೆ ನೀಡಿರುವ ಬಂದ್ ಹಿನ್ನೆಲೆ ನಗರದ ಸಿದ್ದಲಿಂಗಯ್ಯ ವೃತ್ತದಿಂದ ಆರಂಭವಾದ ಬೈಕ್ ರ್ಯಾಲಿ. ಡಿಕ್ರಾಸ್ ವೃತ್ತ ಮೂಲಕ ಟಿವಿ ವೃತ್ತ ಬಸವ ಭವನ, ತಾಲೂಕು ಕಚೇರಿ ವೃತ್ತದ ಮೂಲಕ ಮತ್ತೆ ಹಳೆ ಆಸ್ಪತ್ರೆಯ ವೃತ್ತದ ಕಡೆ ತೆರಳುತ್ತಿದೆ.
ಈ ವೇಳೆ ನಗರ ಬಸವ ಭವನದ ಬಳಿ ಬಾಗಿಲು ತೆರೆದಿದ್ದ ಸಮೃದ್ದಿ ಗ್ರ್ಯಾಂಡ್ ಹೋಟೆಲ್ ಅನ್ನು ಬಲವಂತವಾಗಿ ಮುಚ್ಚಿಸಲು ಮುಂದಾದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಶಾಂತಿ ಯುತ ಪ್ರತಿಭಟನೆ ಮೀರಿ ವರ್ತಿಸಿದರೆ ಕ್ರಮ ಕೈಗೊಳ್ಳಲಾಗುವುದೆಂದು ಡಿವೈಎಸ್ಪಿ ಟಿ.ರಂಗಪ್ಪ ಎಚ್ಚರಿಕೆ ನೀಡಿದ ಘಟನೆ ನಡೆಯಿತು.
ರ್ಯಾಲಿಯ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೂ ಬಸ್ತ್ ಕೈಗೊಂಡಿದ್ದಾರೆ..

