ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಬಿಡುಗಡೆ ಮಾಡಿರುವ ಸೋಮವಾರದ ಬುಲೆಟಿನ್ ಮಾಹಿತಿಯಂತೆ. ತಾಲೂಕಿನ 49 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, 43 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ ಅನ್ವಯ, ಸೋಮವಾರದ ಸಂಜೆಯ ವರಗೆ.ದೊಡ್ಡಬಳ್ಳಾಪುರ ತಾಲ್ಲೂಕಿನ 37
ಪುರುಷರು ಹಾಗೂ 12 ಮಹಿಳೆಯರು ಸೇರಿ 49 ಜನರಿಗೆ ಸೋಂಕು ದೃಡಪಟ್ಟಿದ್ದರೆ. ಸೋಂಕಿಗೆ ಒಳಗಾಗಿ ಚಿಕಿತ್ಸೆಗೆ ಆಕಾಶ್ ಆಸ್ಪತ್ರೆಗೆ ದಾಖಲಾಗಿದ್ದ. ಚೌಡೇಶ್ವರಿ ಗುಡಿ ಬೀದಿಯ 43 ವರ್ಷದ ಪುರುಷ ತೀವ್ರ ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ.
ಹರಿತಲೇಖನಿಗೆ ದೊರಕಿರುವ ಮಾಹಿತಿ ಅನ್ವಯ, ತ್ಯಾಗರಾಜನಗರದಲ್ಲಿ 5, ಕೊಂಗಾಡಿಯಪ್ಪ ಕಾಲೇಜು ರಸ್ತೆ, ಕೊನಘಟ್ಟದಲ್ಲಿ ತಲಾ ಮೂರು, ವೀರಾಪುರ, ರಘುನಾಥಪುರ, ರಾಜಘಟ್ಟ, ಚೈತನ್ಯನಗರ, ಶ್ರೀನಗರ, ವೀರಭದ್ರೈಯ್ಯನಪಾಳ್ಯ, ತೂಬಗೆರೆಯಲ್ಲಿ ತಲಾ 2 ಹಾಗೂ ಚಿಕ್ಕಪೇಟೆ, ಬ್ರಾಹ್ಮಣರ ಬೀದಿ, ಶಾಂತಿನಗರ, ಘಾಟಿ, ಕರೇನಹಳ್ಳಿ, ಕುರುಬರಹಳ್ಳಿ, ಡಿಕ್ರಾಸ್, ಮಾರುತಿನಗರ, ಶೆಟ್ಟರಬೀದಿ, ಸುಭಾಷ್ ನಗರ, ಟ್ಯಾಂಕ್ ರಸ್ತೆ, ಶಾಂತಿನಗರ, ಕೋರ್ಟ್ ರಸ್ತೆ, ವಿನಾಯಕನಗರ, ವರದನಹಳ್ಳಿ, ರಂಗಪ್ಪ ಸರ್ಕಲ್, ಕಲ್ಲುಪೇಟೆ, ಜೆ.ಸಿ.ನಗರ, ಬಸವೇಶ್ವರ ನಗರ, ಹಮಾಮ್, ವಿದ್ಯಾನಗರ, ಬಾಶೆಟ್ಟಿಹಳ್ಳಿ, ಬ್ಯಾಂಕ್ ಸರ್ಕಲ್, ಚೌಡೇಶ್ವರಿ ಗುಡಿ ಬೀದಿಯಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ತಾಲೂಕಿನಲ್ಲಿ 2479 ಮಂದಿಗೆ ಸೋಂಕು ತಗುಲಿದ್ದು, 1668 ಮಂದಿ ಗುಣಮುಖರಾಗಿದ್ದರೆ 83 ಮಂದಿ ಸಾವನಪ್ಪಿದ್ದಾರೆ.
ಸೋಂಕಿಗೆ ಒಳಗಾದ 56 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 672 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

