ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಅಪ್ರತಿಮ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ರವರ 113ನೇ ಜನ್ಮ ದಿನವನ್ನು ಆಚರಿಸಲಾಯಿತು.
ಈ ವೇಳೆ ಜಿಮ್ ನ ಹಿರಿಯ ಪಟುಗಳಾದ ಚನ್ನಕೇಶವ, ಶಿಕ್ಷಕ ರಾಮು, ನಗರ ಬಿಜೆಪಿ ಉಪಾಧ್ಯಕ್ಷ ಸಂದೀಪ್ ಮಾತನಾಡಿ, ಭಾರತೀಯರಿಗೆ ಯಾವತ್ತಿಗೂ ಭಗತ್ ಸಿಂಗ್ ಒಬ್ಬ ಸ್ಫೂರ್ತಿಯ ಸೆಲೆ. ತಮ್ಮ ಕ್ರಾಂತಿಕಾರಿ ವಿಚಾರಧಾರೆಗಳು, ತ್ಯಾಗ ಮನೋಭಾವ ಮತ್ತು ದೇಶದ ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದವರು. ಅವರು ಎಂದೆಂದಿಗೂ ನಮ್ಮ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡು ಸ್ಪೂರ್ತಿಯಾಗುತ್ತಾರೆ, ಇಂದಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಫೈಸಲಾಬಾದ್ ಜಿಲ್ಲೆಯ ಬಾಂಗಾ ಗ್ರಾಮದಲ್ಲಿ (ಹಿಂದೆ ಇದನ್ನು ಲ್ಯಾಲ್ಲ್ ಪುರ್) ಭಗತ್ ಸಿಂಗ್ 1907ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ಭಾರತಕ್ಕೆ ಸ್ವಾತಂತ್ರ್ಯ ಸಿಗಬೇಕೆಂದು ಬ್ರಿಟಿಷರ ವಿರುದ್ಧ ಸೆಟೆದು ನಿಂತರು. ಸಾಕಷ್ಟು ಹೋರಾಡಿದರು, ತಮ್ಮ ಊರ ಯುವಕರನ್ನು ಒಗ್ಗೂಡಿಸಿದ್ದರಯ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಸುಬ್ಬು, ಜಿಮ್ ನ ಮೈಂಟೇನರ್ ಜಬೀ, ಹಾಗು ಪಟುಗಳಾದ ಕ್ರುತಿಕ್, ಅಜಯ್, ಇಲಿಯಾಜ್ ಮಿರ್ಜಾ,ಮಂಜುನಾಥ್, ನರೇಂದ್ರ, ಸುಶಾಂತ್ ಮತ್ತಿತರಿದ್ದರು.

