ಯುಎಇ: 13ನೇ ಆವೃತ್ತಿಯ 10 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮಂಬೈ ಇಂಡಿಯನ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವನ್ನು ಪಡೆದಿದೆ.
ಆರ್ ಸಿಬಿ ನೀಡಿದ್ದ 202 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ 201 ರನ್ ಗಳಿಸುವ ಮೂಲಕ ಮ್ಯಾಚ್ ಟೈ ಆಗಿ ಸೂಪರ್ ಓವರ್ ಹಂತ ತಲುಪಿತು.
ಟೈ ಹೆಗಾಯ್ತು?
ಕೊನೆಯ 18 ಓವರ್ಗೆ 171 ರನ್ ರನ್ ಗಳಿಸಿ 12 ಬಾಲ್ಗೆ 31ರನ್ಗಳ ಅಗತ್ಯವಿತ್ತು. 19 ಓವರ್ಗಳ ಅಂತ್ಯಕ್ಕೆ ಕಿಶನ್ ಹಾಗೂ ಪೊಲಾರ್ಡ್ ಪಂದ್ಯವನ್ನು ಒಂದು ಹಂತಕ್ಕೆ ತಲುಪಿಸಿದ್ದರು. ಕೊನೆಯ ಓವರ್ ನಲ್ಲಿ 19 ರನ್ಗಳ ಅಗತ್ಯವಿತ್ತು. ಮೂರು ಹಾಗೂ ನಾಲ್ಕನೇ ಬಾಲ್ಗೆ ಸಿಕ್ಸ್ ಬಾರಿಸಿದರು. ಆದರೆ ಇನ್ನೊಂದು ಬಾಲ್ ಇರುವಾಗ ಇಶಾಂತ್ ಕಿಶನ್ ವಿಕೆಟ್ ಒಪ್ಪಿಸಿದರು. ಕೊನೆಯ ಬಾಲ್ಗೆ ಪೊಲಾರ್ಡ್ ಬೌಂಡರಿ ಬಾರಿಸಿದರು. ಈ ಮೂಲಕ ಮ್ಯಾಚ್ ಟೈ ಆಯಿತು.
ಸೂಪರ್ ಓವರ್ ನಲ್ಲಿ ನವದೀಪ್ ಸೈನಿ ಬೌಲಿಂಗ್ ಮಾಡಿದರು. ಪೋಲಾರ್ಡ್ ನಾಲ್ಕನೇ ಬಾಲ್ಗೆ ಫೋರ್ ಬಾರಿಸಿದರೆ, ಐದನೇ ಬಾಲ್ಗೆ ಕ್ಯಾಚ್ ನೀಡಿದರು. ನಂತರ 7 ರನ್ ಬಾರಿಸಿ ಆರ್ಸಿಬಿಗೆ 8ರನ್ಗಳ ಟಾರ್ಗೆಟ್ ನೀಡಿದರು. ಮುಂಬೈ ಪರ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದರೆ, ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಜೊತೆಯಟವಾಡಿದರು. ಆರಂಭದ ಎರಡು ಬಾಲ್ ಸಿಂಗಲ್ಸ್ ನಂತರ ನಾಲ್ಕನೇ ಬಾಲ್ಗೆ ಡಿವಿಲಿಯರ್ಸ್ ಬೌಂಡರಿ ಬಾರಿಸಿದರು. ಮತ್ತೆ ಐದನೇ ಬಾಲ್ ಸಿಂಗಲ್ ತೆಗೆದುಕೊಂಡರೆ, ಕೊನೆಯ ಬಾಲ್ಗೆ ವಿರಾಟ್ ಕೊಹ್ಲಿ ಬೌಂಡರಿ ಬಾರಿಸಿದರು.

