ದೊಡ್ಡಬಳ್ಳಾಪುರ: ತಾಲೂಕಿನ ಅರಳುಮಲ್ಲಿಗೆ ಗ್ರಾಮಪಂಚಾಯಿತಿವತಿಯಿಂದ ಗ್ರಾಮದ ಫಲಾನುಭವಿಗಳಿಗೆ ಪೌಷ್ಟಿಕ ತೋಟ ಅಭಿಯಾನದಡಿ ವಿವಿಧ ರೀತಿ ಗಿಡಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿರಂಜನ್, ಗಿಡಗಳನ್ನು ಪಡೆಯುವಾ ಇರುವ ಕಾಳಜಿಯನ್ನು ಆ ಗಿಡಗಳನ್ನು ರಕ್ಷಿಸುವ ಕುರಿತು ಸಹ ಫಲಾನುಭವಿಗಳು ತೋರಬೇಕಿದೆ, ಉತ್ತಮ ಪೌಷ್ಟಿಕಾಹಾರ ದೊರಕಿಸುವ ಸಲುವಾಗಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದು,ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕೆಂದರು.
ಈ ವೇಳೆ ಗ್ರಾಪಂ ಕಾರ್ಯದರ್ಶಿ ರಂಗಧಾಮಯ್ಯ, ಸಿಬ್ಬಂದಿಗಳಾದ ಆಶಾ, ಕೃಷ್ಣಮೂರ್ತಿ ಮತ್ತಿತರಿದ್ದರು.

