ರೈತ ಬೆಳೆ ಸಮೀಕ್ಷೆ ಆ್ಯಪ್ ಯಶಸ್ವಿ: ಪ್ರಾಯೋಗಿಕ ಹಂತದ ಕಡಿಮೆ ಅವಧಿಯಲ್ಲಿಯೇ ಶೇ.88ರಷ್ಟು ಪ್ರಗತಿ

ಬೆಂಗಳೂರು : “ನನ್ನ ಬೆಳೆ ನನ್ನ ಹಕ್ಕು” ಎಂದು ರೈತ ಹೆಮ್ಮೆಯಿಂದ ಹೇಳುವ ಕೃಷಿ ಸಚಿವ ಬಿ.ಸಿ.ಪಾಟೀಲರ ಮಹತ್ತರ ಯೋಜನೆಯಾದ ರೈತ ಬೆಳೆ  ಸಮೀಕ್ಷೆ ಆ್ಯಪ್ ಸಮೀಕ್ಷೆ ಸೆ.23 ಕ್ಕೆ ಅಂತ್ಯಗೊಂಡಿದ್ದು, ಯಶಸ್ವಿಯಾಗಿದೆ.ಪ್ರಾಯೋಗಿಕ ಹಂತದಲ್ಲಿಯೇ ಶೇ.88 ಕ್ಕೂ ಹೆಚ್ಚಿನ ಪ್ರಗತಿ ಸಾಧಿಸಿರುವುದು ಕೇಂದ್ರದ ಗಮನ ಸೆಳೆದಿದೆ.ಅಂದರೆ  ರೈತರೇ ಮೊಬೈಲ್  ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಈ ಯೋಜನೆ ಕಡಿಮೆ ಅವಧಿಯಲ್ಲಿಯೇ ಇಡೀ ದೇಶದ ಗಮನ ಸೆಳೆದಿದೆ. ರೈತರೇ ಬೆಳೆ ಸಮೀಕ್ಷೆ ನಡೆಸುವ ಪ್ರಾಯೋಗಿಕ ಹಂತವನ್ನು ಈ ಬಾರಿ ಪರಿಚಯಿಸಲಾಗಿದ್ದು, ಇದು ಯಶಸ್ವಿಯಾಗಿದೆ.

ಇದೇ ಮೊದಲ ಬಾರಿಗೆ ರೈತರೇ ಸ್ವತಃ ಬೆಳೆ ಸಮೀಕ್ಷೆ ನಡೆಸಿ ತಾವೇ ಪ್ರಮಾಣಪತ್ರ ನೀಡುವ ರೈತಬೆಳೆ ಸಮೀಕ್ಷೆ ಇದಾಗಿದ್ದು, ಕೇವಲ 1 ತಿಂಗಳು 15 ದಿನಗಳೊಳಗೆ ಕಳೆದ 2 ವರ್ಷ ಇತಿಹಾಸವನ್ನೇ ಈ ಸಮೀಕ್ಷೆ ಬದಲಿಸಿದೆ.

ಅಂದಹಾಗೆ ಕಳೆದ ಆಗಸ್ಟ್ 15 ರಂದು ಇದಕ್ಕೆ ಚಾಲನೆ ನೀಡಲಾಗಿತ್ತಾದರೂ ಆಗಸ್ಟ್ ಅಂತ್ಯದಿಂದ ಇದು ಪರಿಣಾಮಕಾರಿಯಾಗಿ ಜಾರಿಯಾಗಿತ್ತು.ಮಳೆ, ನೆಟ್ವರ್ಕ್ ಸಮಸ್ಯೆ ಆರಂಭಿಕ ಹಂತದಲ್ಲಿ ಕಂಡುಬಂದಿತ್ತಾದರೂ ಇವೆಲ್ಲವನ್ನು ಸರಿಪಡಿಸಿಕೊಂಡು ಹಾಗೂ ರಾಜ್ಯದ್ಯಾಂತ ಬೆಳೆ ಸಮೀಕ್ಷೆಯನ್ನು ಉತ್ಸವದಂತೆ ಪರಿಗಣಿಸಿದ್ದರಿಂದ ಹಾಗೂ ಕೃಷಿ ಸಚಿವರು ಮತ್ತು ಇಲಾಖೆ ರೈತ ಬೆಳೆ ಸಮೀಕ್ಷೆ ಆ್ಯಪ್ ಗೆ ಹೆಚ್ಚಿನ ಒತ್ತು ನೀಡಿದ್ದರು. ಅಲ್ಲದೇ ಬಿ.ಸಿ.ಪಾಟೀಲ್ ಅವರೇ ಸ್ವತಃ ತಮ್ಮ ಜಮೀನಿನಲ್ಲಿ ನಿಂತು ಸಮೀಕ್ಷೆ ನಡೆಸಿ ಎಲ್ಲರಿಗೂ ಮಾದರಿಯಾಗಿದ್ದರು.

2017 ರಿಂದ ರಾಜ್ಯದಲ್ಲಿ ಮೊಬೈಲ್ ಆಪ್ ಮೂಲಕ ಬೆಳೆ ಸಮೀಕ್ಷೆ ಪ್ರಾರಂಭವಾಗಿದ್ದು, ಬರೀ 3 ಸಾವಿರ ಪ್ಲಾಟ್ ಗಳು ಸಮೀಕ್ಷೆಯಾಗಿದ್ದವು. ಮುಂಗಾರುಹಂಗಾಮಿಗೆ ಸರ್ಕಾರಿ ಅಧಿಕಾರಿಗಳನ್ನು ಉಪಯೋಗಿಸಿ ಸಮೀಕ್ಷೆ ಮಾಡಲಾಗುತ್ತಿತ್ತು. 2018 ರಲ್ಲಿ ಖಾಸಗಿ ವ್ಯಕ್ತಿಗಳ ಮೂಲಕ ಬೆಳೆ ಸಮೀಕ್ಷೆ ಕೈಗೊಳ್ಳಲಾಗಿತ್ತು. 2019 ರಲ್ಲಿ ಪೂರ್ವ ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು.ಇದಕ್ಕಾಗಿ 4 ತಿಂಗಳ ಸಮಯಾವಾಕಾಶ ನೀಡಲಾಗಿತ್ತು.

ಆದರೆ ಈ ಬಾರಿ ರೈತರೇ ಸ್ವತಃ ತಾವೇ ಬೆಳೆ ಸಮೀಕ್ಷೆ ನಡೆಸುವ ಯೋಜನೆ ಇದಾಗಿದ್ದು, 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳನ್ನು ರೈತರೇ ಅಪ್ಲೋಡ್ ಮಾಡಿದ್ದಾರೆ. 2 ಕೋಟಿ 1 0 ಲಕ್ಷ ಗುರಿಯಿದ್ದು, ಕಡಿಮೆ ಅವಧಿಯಲ್ಲಿಯೇ 1 ಕೋಟಿ 83 ಲಕ್ಷಕ್ಕೂ ಹೆಚ್ಚಿನ ಪ್ಲಾಟ್ ಗಳು ಅಂದರೆ ನಿಗದಿತ ಕಡಿಮೆ ಅವಧಿಯಲ್ಲಿ ಶೇ.88  ಕ್ಕೂ ಪ್ಲಾಟ್ ಸಮೀಕ್ಷೆಯಲ್ಲಿ ಅಪ್ಲೋಡ್ ಆಗಿ ಸಾಧನೆಯಾಗಿದೆ. 

ಮುಂಗಾರು, ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೈಗೊಂಡು 2 ಕೋಟಿ 5 ಲಕ್ಷ ಪ್ಲಾಟ್ ಗಳ ಸರ್ವೆ ಮಾಡಲಾಗಿತ್ತು. ಕಳೆದ ಬಾರಿ ಬೆಳೆ ಸಮೀಕ್ಷೆಯಲ್ಲಿ ಸಂಗ್ರಹಿಸಿದ ದತ್ತಾಂಶದಿಂದ ಕೋವಿಡ್ 19 ಸಂದರ್ಭದಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5 ಸಾವಿರದಂತೆ 7 ಲಕ್ಷದ 29 ಸಾವಿರ ರೈತರಿಗೆ ನೇರವಾಗಿ ಅವರ ಖಾತೆಗೆ ಪರಿಹಾರ ನೀಡಲು ಅನುಕೂಲವಾಗಿದೆ. ಕಳೆದ ಬಾರಿಯ ದತ್ತಾಂಶ ಉಪಯೋಗಿಸಿಕೊಂಡು 5ಲಕ್ಷದ 81 ಸಾವಿರದ 896 ರೈತ ಫಲಾನುಭವಿಗಳಿಗೆ 3 164.27 ಕೋಟಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಬತ್ತ, ರಾಗಿ, ತೊಗರಿ, ಬಿಳಿಜೋಳ ಖರೀದಿ ಮಾಡಿ ರೈತರ ಖಾತೆಗೆ ನೇರವಾಗಿ ಹಣವರ್ಗಾಯಿಸಲಾಗಿದೆ. ತೋಟಗಾರಿಕಾ ಬೆಳೆಗಳಾದ 20,292 ಹೂಬೆಳೆಗಾರರಿಗೆ 14.50 ಕೋಟಿ ರೂ. 35,819 ತರಕಾರಿ ಬೆಳೆಗಾರರಿಗೆ 31.04 ಕೋಟಿ ರೂ. 35,959 ಹಣ್ಣುಬೆಳೆಗಾರರಿಗೆ 26.55 ಕೋಟಿ ರೂ. ಒಟ್ಟು 92,070 ಫಲಾನುಭವಿಗಳಿಗೆ 72.09 ಕೋಟಿ ರೂ. ಮೌಲ್ಯದ ಪರಿಹಾರ ನೀಡಲು ಸಾಧ್ಯವಾಗಿತ್ತು.2019 ರ ಬೆಳೆ ವಿಮೆ ಯೋಜನೆಗೆ 1,33,717 ರೈತರಿಗೆ ಬೆಳೆ ಸಮೀಕ್ಷೆ ದತ್ತಾಂಶವನ್ನು ತಾಳೆ ಮಾಡಲಾಗಿದೆ.

ಇದೇ ಮೊದಲ ಬಾರಿಗೆ ಈ ಬಾರಿಯ ದತ್ತಾಂಶವನ್ನು ಬೆಳೆ ವಿಮೆ ಯೋಜನೆ ಇತ್ಯರ್ಥಪಡಿಸಲು, ಪ್ರಾಕೃತಿಕ ವಿಕೋಪ ಹಾನಿ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರ ಪಡೆಯಲು, ರಾಜ್ಯ ಹಾಗೂ ಕೇಂದ್ರ ಬೆಳೆ ಆಧಾರಿತ ಪ್ರೋತ್ಸಾಹ ಧನ ನೀಡಲು, ರಾಜ್ಯದ ಬೆಳೆ ವಿಸ್ತೀರ್ಣ ಮರುಹೊಂದಾಣಿಕೆ ಹಾಗೂ  ಬೆಳೆ ಉತ್ಪಾದನೆ ಲೆಕ್ಕಹಾಕಲು ಬಳಸಿಕೊಳ್ಳಲಾಗುವುದು.

ರಾಜಕೀಯ

ಮೇ.8ರಂದು ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ನಾಳೆ ಪೂರ್ವಭಾವಿ ಸಭೆ

ಮೇ.8ರಂದು ದೊಡ್ಡಬಳ್ಳಾಪುರಕ್ಕೆ ನಿಖಿಲ್ ಕುಮಾರಸ್ವಾಮಿ: ನಾಳೆ ಪೂರ್ವಭಾವಿ ಸಭೆ

ಮೇ.8 ರಂದು ಜೆಡಿಎಸ್ (JDS) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ನಾಳೆ (ಏ.28) ರಂದು ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ ಎಂದು ಜೆಡಿಎಸ್ ದೊಡ್ಡಬಳ್ಳಾಪುರ

[ccc_my_favorite_select_button post_id="121433"]
ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳನ್ನು ದೂರವಿಟ್ಟು, ಜನರ ಸಮಸ್ಯೆಗಳನ್ನು ಬಗೆಹರಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಮಧ್ಯವರ್ತಿಗಳು (Brokers) ಎಲ್ಲೆಡೆ ಇರುತ್ತಾರೆ ಆದರೆ ಅವರನ್ನು ಕಚೇರಿಯೊಳಗೆ ಬಿಟ್ಟುಕೊಳ್ಳದೇ ಹೊರಗೆ ಕಳಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ( Cm Siddaramaiah) ಅಧಿಕಾರಿಗಳಿಗೆ ಸೂಚಿಸಿದರು

[ccc_my_favorite_select_button post_id="121435"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ವೇಶ್ಯಾವಾಟಿಕೆ ದಂಧೆ; ಇಬ್ಬರ ಬಂಧನ

ವೇಶ್ಯಾವಾಟಿಕೆ ದಂಧೆ; ಇಬ್ಬರ ಬಂಧನ

ಗ್ರಾಮದ ಲಾಡ್ಜ್ ಒಂದರ ಮೇಲೆ ಪೊಲೀಸರು ದಾಳಿ (Police Raid) ನಡೆಸಿದ್ದು, ವೇಶ್ಯಾವಾಟಿಕೆ (Prostitution) ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಓರ್ವ ಮಹಿಳೆಯನ್ನು ರಕ್ಷಿಸಲಾಗಿದೆ.

[ccc_my_favorite_select_button post_id="121407"]
ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ದೊಡ್ಡಬಳ್ಳಾಪುರ: ಅಪಘಾತ.. ಬೈಕ್ ಸವಾರ ದುರ್ಮರಣ

ಹೆಲ್ಮೆಟ್ ಕಡ್ಡಾಯ ಜಾರಿ ಮಾಡಿ, ಹಲವು ರೀತಿಯಲ್ಲಿ ಅರಿವು ಮೂಡಿಸಿದರು, ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಬೇಜವಬ್ದಾರಿ ತೋರಿಸುತ್ತಿದ್ದಾರೆ. ಶನಿವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಬ್ಯಾಂಕ್ ಉದ್ಯೋಗಿ ಯುವಕರು ಕೂಡ ಹೆಲ್ಮೆಟ್

[ccc_my_favorite_select_button post_id="121414"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]