ದೊಡ್ಡಬಳ್ಳಾಪುರ: ನಿಧಿಯ ಆಸೆಗಾಗಿ ದೇವಸ್ಥಾನದ ಬಳಿಯೇ ವಾಮಾಚಾರ ಮಾಡಿ ಗುಂಡಿ ಅಗೆದಿರುವ ಘಟನೆ ತಾಲೂಕಿನ ಮಾದಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಮದುರೆ ಹೋಬಳಿಯ ಮಾದಗೊಂಡನಹಳ್ಳಿ ಗ್ರಾಮದ ದಿಣ್ಣೆಯ ರಾಮದೇವರ ದೇವಸ್ಥಾನದ ಮುಂಭಾಗ ಮತ್ತು ಹಿಂಬದಿಯಲ್ಲಿ ಕಳ್ಳರು ನಿಧಿ ಶೋಧಕ್ಕಾಗಿ ವಾಮಾಚಾರ, ದಿಗ್ಬಂಧನ ಪೂಜೆ ನಡೆಸಿದ್ದಾರೆ.
ಗುಂಡಿ ತೋಡಿ ನಿಂಬೆಹಣ್ಣು, ಅರಿಶಿಣ, ಕುಂಕುಮ ಚೆಲ್ಲಿ ದುಷ್ಕರ್ಮಿಗಳು ನಿಧಿಗಾಗಿ ತೀವ್ರವಾಗಿ ಶೋಧಿಸಿದ್ದಾರೆ. ನಿಧಿಗಾಗಿ ನಡೆಸಿರುವ ವಾಮಾಚಾರ ಗ್ರಾಮಸ್ಥರಲ್ಲಿ ಭೀತಿ ಹುಟ್ಟಿಸಿದ್ದು, ದೇವಾಲಯದ ಬಳಿ ತೆರಳಲು ಹೆದರುತ್ತಿದ್ದಾರೆ.

