ದೊಡ್ಡಬಳ್ಳಾಪುರ; ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕೆ.ಶಿವರಾಮ ಕಾರಂತರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರಸಭೆಯ ಆಶ್ರಯ ಸಮಿತಿ ಸದಸ್ಯ ಎಂ.ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಕೆ.ಶಿವರಾಮ ಕಾರಂತರ ಕೊಡುಗೆ ಅಪಾರವಾಗಿದೆ. ಸಾಹಿತ್ಯ ವಷ್ಟೇ ಅಲ್ಲದೇ ಚಲನಚಿತ್ರ, ಯಕ್ಷಗಾನ, ಜಾನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಕಾರಂತರು ಹಲವಾರು ಹೋರಾಟಗಳಲ್ಲಿಯೂ ಭಾಗವಹಿಸಿದ್ದರು. ನಡೆದಾಡುವ ವಿಶ್ವಕೋಶವೆನಿಸಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಈ ಮಹನೀಯರ ಸಾಹಿತ್ಯದ ಅಧ್ಯಯನ ಇಂದಿನ ಪೀಳಿಗೆ ಮಾಡಬೇಕಿದೆ ಎಂದರು.
ಶಿವರಾಮ ಕಾರಂತರ ವ್ಯಕ್ತಿ ಜೀವನದ ಕುರಿತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳಮಹಾದೇವ್ ಮಾತನಾಡಿ, ನಗರದ ಕನ್ನಡ ಜಾಗೃತ ಪರಿಷತ್ತಿನ ಕಟ್ಟಡದ ಶಂಕುಸ್ಥಾಪನೆಗೆ ಶಿವರಾಮ ಕಾರಂತರು ಬಂದಿದ್ದಾಗ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು .
ಮಾಜಿ ಗ್ರಾಮಪಂಚಾಯಿತಿ ಸದಸ್ಯರಾದ ಕುಕ್ಕಲಹಳ್ಳಿ ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡರ ಬಣದ ತಾಲೂಕು ಅಧ್ಯಕ್ಷ ಮುರುಳಾರಾಧ್ಯ, ಹಿರಿಯ ಪತ್ರಕರ್ತ ಕೊತ್ತೂರಪ್ಪ , ವಿನಾಯಕ ನಗರದ ಮುಖಂಡ ಎಲ್.ಐ.ಸಿ. ಮಂಜುನಾಥ್, ಕೊಟ್ಟಿಗೆ ಮಂಚೇನಹಳ್ಳಿಯ ಕಲಾವಿದ ವೀರಭದ್ರಯ್ಯ ಪ್ರೇಮಲತಾ ಹರಿಕುಮಾರ್, ರೇಷ್ಮಾಭಾನು, ಕಸಾಪ ಗೌ, ಕಾರ್ಯದರ್ಶಿ ಡಿ.ಈ.ಶಿವಕುಮಾರ್, ನಂ.ಮಹಾದೇವ್ ಮತ್ತಿತರರು ಭಾಗವಹಿಸಿದ್ದರು

