ದೊಡ್ಡಬಳ್ಳಾಪುರ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಶಿಥಿಲಗೊಂಡ ಮನೆಯೊಂದು ಹಠಾತ್ ಕುಸಿದು ಬಿದ್ದಿರುವ ಘಟನೆ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೆಮಾಚೆನಹಳ್ಳಿ ಗ್ರಾಮದ ನರಸಪ್ಪ ಎನ್ನುವವರ ಮನೆ ಇದಾಗಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕುಸಿದು ಬಿದ್ದಿದೆ.
ಅದೃಷ್ಟವಶಾತ್ ಮನೆ ಕುಸಿಯಬಹುದೆಂಬ ಮುಂಜಾಗ್ರತೆ ಅರಿತ ನರಸಪ್ಪ ಕುಟುಂಬ, ಎರಡು ದಿನಗಳ ಹಿಂದಷ್ಟೆ ಮತ್ತೊಂದು ಮನೆಗೆ ಸ್ಥಳಾಂತರಗೊಂಡ ಕಾರಣ ಯಾವುದೇ ಸಾವು ನೋವು ಸಂಭವಿಸಿಲ್ಲ. ಮನೆ ಕುಸಿತದಿಂದ ಕುಟುಂಬಕ್ಕೆ ನಷ್ಟವಾಗಿದ್ದು, ಗ್ರಾಮಪಂಚಾಯಿತಿ ನೆರವು ನೀಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಹೊಸಹಳ್ಳಿ ಗ್ರಾಪಂನಿಂದ ನೆರವಿನ ಭರವಸೆ: ಘಟನೆ ಕುರಿತು ಹರಿತಲೇಖನಿ ತಂಡ ಹೊಸಹಳ್ಳಿ ಗ್ರಾಮಪಂಚಾಯಿತಿ ಪಿಡಿಒ ನಾಗರಾಜ್ ಅವರ ಗಮನ ಸೆಳೆದಿದ್ದು, ಸ್ಥಳ ಪರಿಶೀಲನೆ ನಡೆಸಿ ಸರ್ಕಾರದಿಂದ ದೊರಕುವ ನೆರವನ್ನು ಕುಟುಂಬಕ್ಕೆ ದೊರಕಿಸುವ ಭರವಸೆ ನೀಡಿದ್ದಾರೆ

